ಹೊನ್ನಾವರ : ತಾಲೂಕಿನ ಹಳದಿಪುರ ಹಬ್ಬುಚಿಟ್ಟೆ ರೈಲ್ವೆ ಬ್ರಿಡ್ಜ್ ಹತ್ತಿರ ಹಳದಿಪುರ, ನವೀಲಗೋಣ ರಸ್ತೆ ಬದಿಯ ಸಾರ್ವಜನಿಕ ಸ್ಥಳದಲ್ಲಿ ಸಾರ್ವಜನಿಕರಿಂದ ಹಣವನ್ನು ಪಡೆದು ಓ.ಸಿ ಅಂಕೆ-ಸಂಖ್ಯೆಗಳ ಮೇಲೆ ಹಣವನ್ನು ಪಂಥವನ್ನಾಗಿ ಕಟ್ಟಿಸಿಕೊಂಡು ಓ.ಸಿ., ಮಟ್ಕಾ ಜುಗಾರಾಟ ಆಡಿಸುತ್ತಿದ್ದಾಗ ದಾಳಿ ವೇಳೆ ಹಳದಿಪುರ ಚಂಡೇಶ್ವರದ ನಾರಾಯಣ ಕೃಷ್ಣ ನಾಯ್ಕ ಪೊಲೀಸರ ದಾಳಿಯ ವೇಳೆ ಸಿಕ್ಕಿಬಿದ್ದಿರುತ್ತಾನೆ.
ದಾಳಿಯ ವೇಳೆ 630 ರೂ. ನಗದು ಇನ್ನಿತರ ಪರಿಕರ ಸಿಕ್ಕಿದ್ದು, ಘಟನೆಗೆ ಸಂಬಂಧ ಪಟ್ಟಂತೆ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.