ಶಿರಸಿ: ಎಂಇಎಸ್ ಚೈತನ್ಯ ಪದವಿಪೂರ್ವ ಮಹಾವಿದ್ಯಾಲಯದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಸಮಾರಂಭವು ಜ.11, ಶನಿವಾರದಂದು ಬೆಳಿಗ್ಗೆ 10ಗಂಟೆಯಿಂದ ಎಂ.ಇ.ಎಸ್. ಚೈತನ್ಯ ಕಾಲೇಜಿನ ಕೌಮುದಿ ಸಭಾಂಗಣದಲ್ಲಿ ನಡೆಯಲಿದೆ.
ಮುಖ್ಯ ಅತಿಥಿಗಳಾಗಿ ಸಾಮಾಜಿಕ ಕಾರ್ಯಕರ್ತ ಅನಂತಮೂರ್ತಿ ಹೆಗಡೆ, ಮಾರಿಕಾಂಬಾ ಸರಕಾರಿ ಪಿಯು ಕಾಲೇಜಿನ ಪ್ರಾಂಶುಪಾಲರಾದ ಬಾಲಚಂದ್ರ ಭಟ್ ಆಗಮಿಸಲಿದ್ದಾರೆ. ಅಧ್ಯಕ್ಷತೆಯನ್ನು ಎಮ್ಇಎಸ್ ಅಧ್ಯಕ್ಷ ಜಿ. ಎಂ. ಹೆಗಡೆ, ಮುಳಖಂಡ ವಹಿಸಲಿದ್ದು, ಚೈತನ್ಯ ಪಿಯು ಮಹಾವಿದ್ಯಾಲಯ ಉಪಸಮಿತಿ ಅಧ್ಯಕ್ಷ ಕೆ.ಬಿ.ಲೋಕೆಶ್ ಹೆಗಡೆ ಉಪಸ್ಥಿತರಿರಲಿದ್ದಾರೆ.