ಭಟ್ಕಳ: ಕ್ಯಾನ್ಸರ್ ಪೀಡಿತ ಮಹಿಳೆಯೋರ್ವಳ ಕುಟುಂಬಕ್ಕೆ ಆರ್ಥಿಕವಾಗಿ ನೆರವು ನೀಡುವ ಮೂಲಕ ಯಂಗ್ ಒನ್ ಇಂಡಿಯಾ ಮಾಲೀಕ ಮಾಸ್ತಪ್ಪ ನಾಯ್ಕ ತಮ್ಮ ಸಮಾಜಮುಖಿ ಕಾರ್ಯವನ್ನು ಮುಂದುವರೆಸಿದ್ದಾರೆ.
ಮನೆಯ ಆಧಾರ ಸ್ತಂಭವಾಗಿದ್ದ ಕಬ್ರೆ ಕಟಗಾರ ನಿವಾಸಿಯಾಗಿದ್ದ ಸಕ್ಕಮ್ಮ ಮಾಸ್ತಿ ಗೊಂಡ ಎಂಬ ಮಹಿಳೆ ಕ್ಯಾನ್ಸರ್ ಕಾಯಿಲೆಗೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ತಮ್ಮ ಮನೆಯ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿತ್ತು.
ಈ ವಿಷಯವನ್ನು ತಿಳಿದ ಅಲ್ಲಿನ ಸ್ಥಳೀಯ ನಿವಾಸಿಗಳು ಮಾಸ್ತಪ್ಪ ನಾಯ್ಕ ಅವರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ತಿಳಿಸಿದಾಗ ತಕ್ಷಣ ಸ್ಪಂದಿಸಿದ ಮಾಸ್ತಪ್ಪ ನಾಯ್ಜ ಆ ಕುಟುಂಬಕ್ಕೆ ಆರ್ಥಿಕ ನೆರವು ನೀಡುವ ಮೂಲಕ ತಮ್ಮ ಸಮಾಜಮುಖಿ ಕೆಲಸ ಮುಂದುವರೆಸುತ್ತಿದ್ದಾರೆ.
ಮಾಸ್ತಪ್ಪ ನಾಯ್ಕರ ಈ ಕಾರ್ಯಕ್ಕೆ ಅವರ ಆಪ್ತ ವಿಶ್ವ ನಾಯ್ಕ ಹಾಗೂ ಅಶೋಕ ನಾಯ್ಕ ಅಭಿನಂದನೆ ತಿಳಿಸಿದ್ದಾರೆ