ಸಿದ್ದಾಪುರ: ಭಾರಿ ಮಳೆಯಿಂದಾಗಿ ತಾಲೂಕಿನ ಕವಂಚೂರು ಗ್ರಾಪಂ ವ್ಯಾಪ್ತಿಯ ಹಿತ್ಲಕೊಪ್ಪ ಗ್ರಾಮದ ರಸ್ತೆಯಲ್ಲಿ ನೀರು ನಿಂತು ಜನರ ಓಡಾಟಕ್ಕೆ ತೊಂದರೆಯಾಗಿರುವುದನ್ನು ಮನಗಂಡ ತಾಪಂ ಇಒ ದೇವರಾಜ್ ಹಿತ್ತಲಕೊಪ್ಪ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ನೀರು ಸರಾಗವಾಗಿ ಹರಿದುಹೋಗುವಂತ ಕಾಲುವೆ ತೆಗೆಸಿ ಜನರ ಓಡಾಕ್ಕೆ ಅನುಕೂಲವಾಗುವಂತ ಮಾಡಿದ್ದಾರೆ.
ಸೋವಿನಕೊಪ್ಪ ಗ್ರಾಪಂ ವ್ಯಾಪ್ತಿಯ ನೀರಗಾರ ಗ್ರಾಮದ ಕಾನಹೊಂಡದ ಮಹಾಬಲ ಗಣಪ ಹಸ್ಲರ್ ಅವರ ವಾಸದ ಮನೆಯ ಮೇಲೆ ಮರವೊಂದು ಬಿದ್ದು ಅಂದಾಜು 40ಸಾವಿರ ರೂಗಳಷ್ಟು ಹಾನಿ ಸಂಭವಿಸಿದೆ. ಕವಲಕೊಪ್ಪ ಗ್ರಾಮದ ಹಿತ್ಲಕೈನಲ್ಲಿ ಸಾರ್ವಜನಿಕ ಕುಡಿಯುವ ನೀರಿನ ಬಾವಿಯ ತಡೆಗೋಡೆ ಕುಸಿದು ಬಿದ್ದಿದ್ದು ಈ ಕುರಿತು ಸುರಕ್ಷತಾ ಕ್ರಮ ಕೈಗೊಳ್ಳಲಾಗಿದೆ ಎಂದು ಕಂದಾಯ ಇಲಾಖೆ ಪ್ರಕಟಣೆಯಲ್ಲಿ ತಿಳಿಸಿದೆ.