Slide
Slide
Slide
previous arrow
next arrow

ಹೃದಯ ಶ್ರೀಮಂತಿಕೆಯ ಯಜಮಾನ ಜೋಯಿಡಾದ ರಮೇಶ ನಾಯ್ಕ

300x250 AD

ಸಂಕಷ್ಟದ ಸಂದರ್ಭದಲ್ಲಿ ಅನ್ನ ನೀಡಿದ ಗೋವಾ ಅಮ್ಮನಿಗೆ ಗೌರವ ಸನ್ಮಾನ

  • ಸಂದೇಶ್ ಎಸ್.ಜೈನ್, ದಾಂಡೇಲಿ

ಜೋಯಿಡಾ : ಯಶಸ್ಸು ಎಲ್ಲರಿಗೆ ಬರುತ್ತದೆ. ಆದರೆ ಇಂದಿನ ದಿನಮಾನಗಳಲ್ಲಿ ಯಶಸ್ಸು ಪಡೆಯುವ ಮುಂಚೆ ಸವೆಸಿದ ಹಾದಿ ಮತ್ತು ಕೈಹಿಡಿದು ಅರಸಿ ಆಶೀರ್ವದಿಸಿದವರನ್ನು ಮರೆತು ಬಿಡುವ ಜಾಯಾಮಾನದಲ್ಲಿ ನಾವು ನಾವಿದ್ದೇವೆ.

ಬಡತನದ ಬೇಗೆಯಲ್ಲಿ ಬೆಂದು ಬಸವಳಿದು, ಶ್ರಮ ಸಾಧನೆಯ ಮೂಲಕವೇ ಬದುಕಿನಲ್ಲಿ ಉನ್ನತಿಯನ್ನು ಕಂಡ, ಸರಳ ಸಹೃದಯ ಗುಣ ಸಂಪತ್ತಿನ, ಪರೋಪಕಾರವೇ ನನ್ನ ಜೀವನದ ಮಹತ್ವದ ಕರ್ತವ್ಯ ಎಂದು ಭಾವಿಸಿಕೊಂಡು, ಸಂಕಷ್ಟದಲ್ಲಿದ್ದವರ ಸಮಸ್ಯೆಗಳಿಗೆ ತಡವರಿಯದೆ ಸ್ಪಂದಿಸುವ ಮೂಲಕ ನಿಜವಾದ ಆಧುನಿಕ ಕರ್ಣನೆಂಬ ಹೆಗ್ಗಳಿಕೆಗೆ ಪಾತ್ರರಾಗಿರುವವರು ಜೋಯಿಡಾದ ನಗುಮೊಗದ ಸಮಾಜಸೇವಕ ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ರಮೇಶ ನಾಯ್ಕ.

ಬಡತನದಿಂದ ಹಂತ ಹಂತವಾಗಿ ಬೆವರನ್ನು ರಕ್ತದ ರೂಪದಲ್ಲಿ ಸುರಿಸಿ ಪ್ರಗತಿಯಡೆಗೆ ಸಾಗಿ ಬಂದ ನಂತರ ತನ್ನ ಬೆಳವಣಿಗೆಗೆ ಸಹಕರಿಸಿರುವವರನ್ನು ಮರೆಯುವಂತಹ ಹಿಂದಿನ ಈ ದಿನಮಾನದಲ್ಲಿ, ತನ್ನ ಹಳೆಯ ನೆನಪುಗಳನ್ನು ಸದಾ ಜೀವಂತವಾಗಿರಿಸಿ, ತನ್ನ ಅಭ್ಯುದಯಕ್ಕೆ ಸಹಕರಿಸಿ ಆಶೀರ್ವದಿಸಿದವರನ್ನು ಸದಾ ನೆನಪಿನಲ್ಲಿ ಇಟ್ಟುಕೊಳ್ಳುವ ಮತ್ತು ಅಂತವರನ್ನು ಆರಾಧಿಸುವ ಪವಿತ್ರ ಹೃದಯದ ವ್ಯಕ್ತಿ ರಮೇಶ ನಾಯ್ಕ.

ಒಂದು ಕಾಲದಲ್ಲಿ ಲಾರಿ ಚಾಲಕರಾಗಿ ಬದುಕು ಆರಂಭಿಸಿದ ಇದೇ ಈಗಿನ ಸಾಹುಕಾರ ರಮೇಶ ನಾಯ್ಕ ಅವರು ಅಂದು ಗೋವಾದಲ್ಲಿ ಚಾಲಕನಾಗಿ ಸೇವೆ ಸಲ್ಲಿಸುತ್ತಿದ್ದ ಸಂದರ್ಭದಲ್ಲಿ ಪ್ರತಿದಿನ ತಾಯಿಯಂತೆ ಅನ್ನ ಹಾಕಿ ಬಡಿಸಿದವರು ಗೋವಾದ ಕಮಲಾವತಿ ವಸಂತ ನಾಯ್ಕ. ಇದು ರಮೇಶ‌ ನಾಯ್ಕ ಅವರ ಕಳೆದ 40 ವರ್ಷಗಳ ಹಿಂದಿನ ಜೀವನ ಕಥೆ. ಆ ಸಮಯದಲ್ಲಿ ಪ್ರತಿದಿನ ಉಪಹಾರ ಊಟವನ್ನು ಕೊಟ್ಟ ತಾಯಿ ಕಮಲಾವತಿ ವಸಂತ ನಾಯ್ಕ ಅವರು. ಅಂದವರು ಉಪಹಾರ ಕೊಟ್ಟವರು, ಊಟವನ್ನು ಕೊಟ್ಟವರು ಅದಕ್ಕೆ ಹಣವನ್ನು ಕೊಟ್ಟಿದ್ದಾಯಿತು ಎಂದು ಕೊಳ್ಳುವುದು ಸಹಜ. ಆದರೆ ನಮ್ಮ ಕರುಣಾಮಯಿ ರಮೇಶ ನಾಯ್ಕ ಅವರು ಆ ಅಮ್ಮ ನೀಡಿದ ಊಟ, ಉಪಹಾರವನ್ನು ಇಂದಿಗೂ ಸ್ಮರಿಸಿಕೊಳ್ಳುವ ಜಾಯಮಾನದವರು.

ತಾನೆಷ್ಟೇ ಬೆಳೆದರೂ, ಬೆಳೆದು ಬಂದ ರೀತಿ ನೀತಿ ಮತ್ತು ಕ್ರಮಿಸಿದ ಹಾದಿಯನ್ನು ಸದಾ ಸ್ಮರಣೆಯಲ್ಲಿ ಇಟ್ಟುಕೊಂಡು, ಸಾಧನೆಗೆ ಸ್ಪೂರ್ತಿಯಾದವರನ್ನು, ಸಾಧನೆಗೆ ಬೆಂಬಲವನ್ನು ನೀಡಿದವರನ್ನು, ಕೈ ಹಿಡಿದು ಹರಸಿ ಆಶೀರ್ವದಿಸಿದವರನ್ನು ಸದಾ ದೇವರಂತೆ ಪ್ರೀತಿಸುವ, ಗೌರವಿಸುವ, ಭಕ್ತಿ ಮನಸ್ಸಿನಿಂದ ಅವರ ನೋಡುವ ರಮೇಶ ನಾಯ್ಕ ಅವರ ಪ್ರಾಂಜಲ ಗುಣ ಮನಸ್ಸಿಗೆ ಬಿಗ್ ಸೆಲ್ಯೂಟ್ ಹೇಳಲೇಬೇಕು.

300x250 AD

ಕಳೆದ 40 ವರ್ಷಗಳ ಹಿಂದೆ ಚಾಲಕನಾಗಿ ದುಡಿಯುತ್ತಿದ್ದ ಸಂದರ್ಭದಲ್ಲಿ ರಮೇಶ ನಾಯ್ಕ ಅವರಿಗೆ ಪ್ರತಿದಿನ ಉಪಹಾರ ಊಟವನ್ನು ಅತ್ಯಂತ ಪ್ರೀತಿಯಿಂದ ಉಣಪಡಿಸಿದ ಕಮಲಾವತಿ ವಸಂತ ನಾಯ್ಕ ಅವರನ್ನು ರಮೇಶ ನಾಯ್ಕ ಅವರು ಪ್ರತಿ ವರ್ಷವೂ ಭೇಟಿ ನೀಡಿ ಅವರ ಆರೋಗ್ಯವನ್ನು ವಿಚಾರಿಸಿ ಅವರಿಗೆ ಸನ್ಮಾನದ ಜೊತೆಗೆ ತನ್ನ ನೆರವನ್ನು ನೀಡಿ ಆಶೀರ್ವಾದ ಪಡೆಯುತ್ತಿರುವುದನ್ನು ಎಂದಿಗೂ ರೂಢಿ ಮಾಡಿಕೊಂಡಿದ್ದಾರೆ. ಇದು ರಮೇಶ ನಾಯ್ಕ ಅವರ ಜೀವನ ವ್ಯಕ್ತಿತ್ವವನ್ನು ಸಾದರಪಡಿಸುತ್ತದೆ. ಇದು ನಮಗೆಲ್ಲರಿಗೂ ಅನುಕರಣೀಯವಾಗಿದೆ.

ಅಂದು ಅನ್ನ ಹಾಕಿ, ಉಪಚರಿಸಿ ತಾಯಿ ಪ್ರೀತಿ ನೀಡಿದ ಕಮಲಾವತಿ ವಸಂತ ನಾಯ್ಕ ಅವರನ್ನು ಅವರಿರುವ ಗೋವಾಕ್ಕೆ ತೆರಳಿ, ಅವರ ಆರೋಗ್ಯವನ್ನು ವಿಚಾರಿಸಿ, ಅವರ ಸಮಸ್ಯೆಗಳಿಗೆ ಸ್ಪಂದಿಸಿ, ಅವರನ್ನು ಸನ್ಮಾನಿಸಿ, ಅವರಿಂದ ಆಶೀರ್ವಾದವನ್ನು ಪಡೆದುಕೊಂಡ ರಮೇಶ್ ನಾಯ್ಕ ಅವರು ಎಲ್ಲರಿಗೆ ಮಾದರಿಯಾಗಿದ್ದಾರೆ.

ಜೀವನದಲ್ಲಿ ನಾವು ಎಷ್ಟು ಹಣ ಮಾಡಿದ್ದೇವೆ, ಎಷ್ಟು ಆಸ್ತಿ ಮಾಡಿದ್ದೇವೆ, ಎಷ್ಟು ಸಂಪತ್ತು ಮಾಡಿದ್ದೇವೆ ಎನ್ನುವುದು ಮುಖ್ಯವಲ್ಲ. ನಾವು ಸಮಾಜಮುಖಿಯಾಗಿ ಹೇಗಿದ್ದೇವೆ?. ಹೇಗೆ ಬದುಕು ನಡೆಸಿದ್ದೇವೆ? ಎನ್ನುವುದೇ ಬಹುಮುಖ್ಯ.

ಸಹಾಯ ಮಾಡಿದವರನ್ನು ಭಕ್ತಿಯಿಂದ ಸ್ಮರಿಸುವ ಮೂಲಕ ಬದುಕಿನಲ್ಲಿ ಸಾರ್ಥಕತೆಯನ್ನು ಕಾಣಬೇಕೆಂಬ ಹಂಬಲದಿಂದ ಹಂಬಲಿಸಿ, ಸರ್ವರನ್ನು ಪ್ರೀತಿಸುವ ಗೌರವಿಸುವ ರಮೇಶ ನಾಯ್ಕ ಅವರಿಗೆ ರಮೇಶ ನಾಯ್ಕ ಅವರೇ ಸಾಟಿ ಎಂದರೆ ಅತಿಶಯೋಕ್ತಿ ಎನಿಸದು. ಜೋಯಿಡಾದಂತಹ ಪುಣ್ಯಭೂಮಿಯಲ್ಲಿ ರಮೇಶ ನಾಯ್ಕ ಅವರು ಹುಟ್ಟಿರುವುದೇ ನಿಜಕ್ಕೂ ಸೌಭಾಗ್ಯವೇ ಸರಿ.

Share This
300x250 AD
300x250 AD
300x250 AD
Back to top