ಸಿದ್ದಾಪುರ: ತಾಲೂಕಿನ ನೂರಾರು ಅನಾಥ ,ಅಶಕ್ತ ಕಡು ಬಡತನ, ದುರ್ಬಲ ಕುಟುಂಬಗಳಿಗೆ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮಾಶಾಸನ ಹಾಗೂ ವಾತ್ಸಲ್ಯ ಕಿಟ್‌ಗಳನ್ನು ವಿತರಣೆ ಮಾಡಲಾಗುತ್ತಿದೆ. ರಾಜ್ಯಾದ್ಯಂತ 19,000 ಕ್ಕೂ ಮಿಕ್ಕಿದ ನಿರ್ಗತಿಕರನ್ನು ಗುರುತಿಸಿ ಅವರ ಜೀವನ ನಿರ್ವಣೆಗಾಗಿ ಪ್ರತಿ ತಿಂಗಳು 750 ರಿಂದ ರೂ.1000 ವರೆಗೆ ಮಾಸಾಸನ ನೀಡಲಾಗುತ್ತಿದೆ. ಸಿದ್ದಾಪುರ ತಾಲೂಕಿನಲ್ಲಿ ಒಟ್ಟು 126 ಕುಟುಂಬಗಳಿಗೆ ಪ್ರತಿ ತಿಂಗಳು ಮಾಶಾಸನ ನೀಡಲಾಗುತ್ತಿದೆ. ಅದರಲ್ಲಿ 26 ಕುಟುಂಬಗಳಿಗೆ ಮಾಶಾಸನ ದೊಂದಿಗೆ ತಲೆದಿಂಬು, ಸೀರೆ, ಹೊದಿಕೆ ಚಾಪೆ, ಟವೆಲ್, ಸೋಪು , ವಾತ್ಸಲ್ಯ ಮಿಕ್ಸ್ ಹೀಗೆ ಅತ್ಯಾವಶ್ಯಕ ವಸ್ತುಗಳನ್ನೊಳಗೊಂಡಿರುವ ವಾತ್ಸಲ್ಯ ಕಿಟ್ ವಿತರಿಸುವ ಮಹತ್ವದ ಕಾರ್ಯಕ್ರಮವನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|| ಡಿ.ವೀರೇಂದ್ರ ಹೆಗ್ಗಡೆ ಅವರು ಮತ್ತು ಮಾತ್ರಶ್ರೀ ಹೇಮಾವತಿ ಹೆಗ್ಗಡೆ ಮಾಡುತ್ತಿದ್ದಾರೆ. ಪ್ರಸ್ತುತ ತಾಲೂಕಿನ ಸಿದ್ದಾಪುರ, ಹಾರ್ಸಿಕಟ್ಟಾ, ಕಾನಸೂರು, ಕ್ಯಾದಗಿ, ತಾಳಗುಪ್ಪ, ಕಾರ್ಗಲ್ ಮತ್ತು ಕಾವಂಚೂರು ಹೀಗೆ 7 ವಲಯದಲ್ಲಿ 26 ವಾತ್ಸಲ್ಯ ಕುಟುಂಬಗಳಿಗೆ ತಾಲೂಕಿನ ಯೋಜನಾಧಿಕಾರಿಗಳಾದ ಗಿರೀಶ್ ಜಿ ಪಿ ಮತ್ತು ತಾಲೂಕು ಪಂಚಾಯಿತಿ ಸದಸ್ಯರು , ಒಕ್ಕೂಟದ ಪದಾಧಿಕಾರಿಗಳು , ಗ್ರಾಮದ ಹಿರಿಯರು, ಸಂಘದ ಸದಸ್ಯರು ವಲಯದ ಮೇಲ್ವಿಚಾರಕರು, ಕೃಷಿ ಮೇಲ್ವಿಚಾರಕರು ಮತ್ತು ಜ್ಞಾನ ವಿಕಾಸ ಸಮನ್ವಯಾಧಿಕಾರಿ ಹಾಗೂ ಸೇವಾ ಪ್ರತಿನಿಧಿಗಳ ಉಪಸ್ಥಿತಿಯಲ್ಲಿ ವಾತ್ಸಲ್ಯ ಕೀಟ್ ಗಳನ್ನು ವಿತರಣೆ ಮಾಡಲಾಯಿತು.