ಶಿರಸಿ: ತಾಲೂಕಿನ ಮಾತ್ನಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಡಿ.ಪಿ.ಹೆಗಡೆ ಇವರು ‘ಹವ್ಯಕ ಶಿಕ್ಷಕ ರತ್ನ” ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಡಿ. 27 ರಿಂದ 29 ರವರೆಗೆ ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆಯುವ ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಪ್ರಶಸ್ತಿ ನೀಡಲಾಗುತ್ತಿದೆ. 28 ವರ್ಷಗಳ ಕಾಲ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸಿದ್ದಾಪುರ, ಶಿರಸಿಯಲ್ಲಿ ಸೇವೆ ಸಲ್ಲಿಸಿ ಹುಲೇಕಲ್, ವಾನಳ್ಳಿ ಕ್ಲಸ್ಟರ್ ಸಿಆರ್ಪಿಯಾಗಿ ಉತ್ತಮ ಸೇವೆಯನ್ನು ಸಲ್ಲಿಸಿದ್ದಾರೆ. ಇವರು ಮೂಲತಃ ಸಿದ್ಧಾಪುರ ತಾಲೂಕಿನ ನೇರಲಮನೆಯವರಾಗಿದ್ದಾರೆ. ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ, 2017ರಲ್ಲಿ “ರಾಷ್ಟ್ರಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ”ಯನ್ನು ಪಡೆದಿರುವುದು ಉಲ್ಲೇಖನೀಯ.