Slide
Slide
Slide
previous arrow
next arrow

‘ವಾಜಗದ್ದೆ ಯುವಕ ಸಂಘಕ್ಕೆ ಸುವರ್ಣ ಸಂಭ್ರಮ’

300x250 AD

ಡಿ.28ಕ್ಕೆ ದುರ್ಗಾವಿನಾಯಕ ಸಭಾಭವನದಲ್ಲಿ ಕಾರ್ಯಕ್ರಮ | ಸ್ಮರಣೆ, ಸಾಂಸ್ಕೃತಿಕ ಕಾರ್ಯಕ್ರಮ

ಸಿದ್ದಾಪುರ: ತಾಲೂಕಿನ ಹಾರ್ಸಿಕಟ್ಟಾ ಗ್ರಾಮದ ವಾಜಗದ್ದೆಯ ಶ್ರೀ ದುರ್ಗಾವಿನಾಯಕ ಕೃಷಿಕ ಯುವಕ ಸಂಘಕ್ಕೆ ಸುವರ್ಣ ಸಂಭ್ರಮ. ಇದನ್ನು ಅದ್ದೂರಿಯಾಗಿ ಆಚರಿಸಬೇಕೆಂದು ತೀರ್ಮಾನಿಸಿ ಡಿ. 28ರಂದು ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ, ಕಾರ್ಯದರ್ಶಿ ಸಂಜಯ ಹೆಗಡೆ ಹುಲಿಮನೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶ್ರೀ ದುರ್ಗಾವಿನಾಯಕ ದೇವರ ಕೃಪಾಶೀರ್ವಾದದಿಂದ ವಾಜಗದ್ದೆಯಲ್ಲಿ 1974 ಡಿಸೆಂಬರ್ 24ರಂದು ಅಂದಿನ ತರುಣರು ಪರಸ್ಪರ ಸೇವೆ ಮತ್ತು ಶ್ರಮದಾನವನ್ನೇ ಆರಂಭಿಕ ಬಂಡವಾಳವಾಗಿಸಿಕೊಂಡು ಯುವಕ ಸಂಘವನ್ನು ಸ್ಥಾಪಿಸಿದರು. ಅವರ ಕನಸನ್ನು ನನಸಾಗಿಸುತ್ತ ಸ್ಥಾಪಿಸಿದವರ ಆಶಯವನ್ನು ಉಳಿಸಿಕೊಂಡು ಮತ್ತಷ್ಟು ಸಂಘವು ಬೆಳೆದಿದೆ. ಇರುವ ವಾಚನಾಲಯವನ್ನು ಅಭಿವೃದ್ಧಿ ಪಡಿಸಲಾಗಿದೆ. 3500 ಪುಸ್ತಕಗಳನ್ನು ಸಂಗ್ರಹಿಸಿ ಓದುಗರಿಗೆ ಒದಗಿಸುತ್ತಿದೆ. ಯಕ್ಷಮಿತ್ರ ಮಂಡಳಿ ಎನ್ನು ಪೂರಕ ಸಂಘಟನೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸುತ್ತ ಬರಲಾಗಿದೆ. ಗ್ರಾಮ ದೇವಸ್ಥಾನವನ್ನು ಕೇಂದ್ರವಾಗಿರಿಸಿಕೊಂಡು ಶ್ರೀ ದೇವಸ್ಥಾನದ ಆಡಳಿತ ಮಂಡಳಿಯ ಪ್ರೋತ್ಸಾಹ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಅಗತ್ಯ ಸಂಪನ್ಮೂಲಗಳನ್ನು ಮತ್ತು ಸೌಲಭ್ಯಗಳನ್ನು ಗಳಿಸಿಕೊಳ್ಳುತ್ತಾ ಬಂದಿದೆ. ಈ ಸಾರ್ಥಕ ಕ್ಷಣದಲ್ಲಿ ಹಲವು ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.

300x250 AD

ಡಿ. 28 ರಂದು ಸಮಯ ಬೆಳಗ್ಗೆ ಗಂಟೆಯಿಂದ ಧಾರ್ಮಿಕ ಕಾರ್ಯಕ್ರಮದೊಂದಿಗೆ ಸುವರ್ಣ ಸಂಭ್ರಮಕ್ಕೆ ಚಾಲನೆ ದೊರೆಯಲಿದೆ.
10.30 ಕ್ಕೆ ಸುವರ್ಣ ಸಂಭ್ರಮ ಕಾರ್ಯಕ್ರಮವನ್ನು ಸಿದ್ದಾಪುರ ಶಿಕ್ಷಣ ಪ್ರಸಾರ ಸಮಿತಿಯ ಅಧ್ಯಕ್ಷ ಶಶಿಭೂಷಣ ಹೆಗಡೆ ಉದ್ಘಾಟಿಸಲಿದ್ದಾರೆ. ಯುವಕ ಸಂಘದ ಸಂಸ್ಥಾಪಕ ಅಧ್ಯಕ್ಷ ಪಿ.ವಿ.ಹೆಗಡೆ ಪೇಟೇಸರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಶಾಸಕ ಭೀಮಣ್ಣ ನಾಯ್ಕ, ಶಿರಸಿ ಡೆವಲಪ್‌ಮೆಂಟ್ ಸೊಸೈಟಿ ಕೃಷಿ ಸಲಹೆಗಾರ ಡಾ.ವಿ.ಎಮ್. ಹೆಗಡೆ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಆರುಣ್ ಎಚ್.ಜಿ., ಶ್ರೀಮರ್ಗಾವಿನಾಯಕ ದೇವಸ್ಥಾನದ ಮೊತ್ತೇಸರ ಶ್ರೀಧರ ಹೆಗಡೆ ಪೇಟೇಸರ ಉಪಸ್ಥಿತರಿರಲಿದ್ದಾರೆ.

ಮಧ್ಯಾಹ್ನ 2.30 ರಿಂದ ಹಿಂದೂಸ್ಥಾನಿ ಸಂಗೀತ ಕಾರ್ಯಕ್ರಮ ನಡೆಯಲಿದೆ. ಮೇಧಾ ಭಟ್ ಅಗ್ಗೇರಿ, ಆರಾಧನಾ ಹೆಗಡೆ ಭಂಡಾರಕೇರಿ ಗಾಯನ ನಡೆಯಲಿದೆ. ಹಾರ್ಮೋನಿಯಂನಲ್ಲಿ ಅಜಯ ಹೆಗಡೆ ವರ್ಗಾಸರ, ಮಂಜೀರಾದಲ್ಲಿ ಅನಂತಮೂರ್ತಿ ಭಟ್ಟ ಮತ್ತಿಘಟ್ಟ, ತಬಲಾದಲ್ಲಿ ಶಂಕರ ಹೆಗಡೆ ಶಿರಸಿ, ವಿನಾಯಕ ಹೆಗಡೆ ಸಾಗರ ಸಹಕರಿಸಲಿದ್ದಾರೆ.
ಸಂಜೆ 5.30 ರಿಂದ ಸಂಘದ ನೆನಪು-ಮೆಲುಕು ಗೌರವ ಸಮರ್ಪಣೆ, ಸ್ಮರಣಿಕೆ ವಿತರಣೆ ಕಾರ್ಯಕ್ರಮ ನಡೆಯಲಿದೆ.
ಸಂಘದ ಸಂಸ್ಥಾಪಕ ಕಾರ್ಯದರ್ಶಿ ಭಾಸ್ಕರ ಹೆಗಡೆ ಭಂಡಾರಕೇರಿ, ಸಂಘದ ಸ್ಥಾಪನೆಯ ಪ್ರೇರಕ ಗೋಪಾಲ ಹೆಗಡೆ ವಾಜಗದ್ದೆ, ಸಂಘದ ಸಂಸ್ಥಾಪಕ ಖಜಾಂಚಿ ಸೀತಾರಾಮ ಹೆಗಡೆ ಸುಳಗಾರ, ಶ್ರೀದುರ್ಗಾವಿನಾಯಕ ದೇವಸ್ಥಾನದ ಮೊತ್ತೇಸರ ಶ್ರೀಧರ ಹೆಗಡೆ ಪೇಟೇಸರ, ಗ್ರಾಮ ಪಂಚಾಯಿತಿ ಸದಸ್ಯ ಅನಂತ ಹೆಗಡೆ ಹೊಸಗದ್ದೆ, ವಾಜಗದ್ದೆ ಶಾಲೆ ಮುಖ್ಯ ಅಧ್ಯಾಪಕ ಕೆ.ಎನ್. ಹೆಗಡೆ ಬಳ್ಳೂರು ಉಪಸ್ಥಿತರಿರಲಿದ್ದಾರೆ.
ಸಂಜೆ 6.30 ರಿಂದ ಸಮಾರೋಪ ಸಮಾರಂಭ ನಡೆಯಲಿದ್ದು, ಯುವಕ ಸಂಘದ ಅಧ್ಯಕ್ಷ ಗಣಪತಿ ಹೆಗಡೆ ಸುಳಗಾರ ಅಧ್ಯಕ್ಷತೆ ವಹಿಸಲಿದ್ದಾರೆ. ಅಭ್ಯಾಗತರಾಗಿ ಯಲ್ಲಾಪುರ ಸಂಕಲ್ಪ ಪ್ರಮೋದ ಹೆಗಡೆ, ಮಾಜಿ ಶಾಸಕ ವೈ. ಎಸ್. ವಿ. ದತ್ತಾ, ಹಿರಿಯ ಸಾಹಿತಿ ಸುಬ್ರಾಯ ಮತ್ತಿಹಳ್ಳಿ, ತಾಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಸುಧೀರ್ ಗೌಡರ್ ಭಾಗವಹಿಸಲಿದ್ದಾರೆ.
ರಾತ್ರಿ 9.30 ರಿಂದ ಊರವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಮತ್ತು ಯಕ್ಷಗಾನ ಪ್ರದರ್ಶನ ನಡೆಯಲಿದೆ. ಹಿಮ್ಮೇಳದಲ್ಲಿ ಭಾಗವತರಾಗಿ ಸತೀಶ ದಂಟಕಲ್, ನಂದನ ದಂಟಕಲ್, ಮದ್ದಲೆಯಲ್ಲಿ ಗಣೇಶ ಭಟ್ ಮಣಗಾರ, ಚಂಡೆಯಲ್ಲಿ ರಘುಪತಿ ಹೂಡೆಹದ್ದ, ಭಾರ್ಗವ ಹೆಗ್ಗೋಡು ಸಹಕರಿಸಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top