ದಾಂಡೇಲಿ : ಪ್ರತಿದಿನ ಈ ಸಮಸ್ಯೆ ತಪ್ಪಿದ್ದಲ್ಲ. ಪ್ರತಿ ದಿನವೂ ಅದರಲ್ಲಿ ವಿಶೇಷವಾಗಿ ಸಿಟಿ ಬಸ್ಗಳ ಚಾಲಕರು ಮತ್ತು ನಿರ್ವಾಹಕರು ಹಿಡಿಶಾಪ ಹಾಕುವಂತ ಸ್ಥಿತಿಯನ್ನು ನಗರದ ಬಸ್ ನಿಲ್ದಾಣದ ಮುಂಭಾಗದ ಜೆ.ಎನ್.ರಸ್ತೆಯಲ್ಲಿ ನಿಲ್ಲಿಸಲಾದ ಖಾಸಗಿ ವಾಹನಗಳು ತಂದಿಟ್ಟಿವೆ.
ಬಸ್ ನಿಲ್ದಾಣದಿಂದ ಪ್ರಯಾಣಿಕರನ್ನು ಹೊತ್ತುಕೊಂಡು ಹೊರಬರುವ ಸಿಟಿ ಬಸ್ ಮುಂದೆ ಹೋಗಬೇಕಾದರೆ ಕನಿಷ್ಠವೆಂದರೂ ಅರ್ಧ ತಾಸು ಹೆಣಗಾಡಬೇಕಾಗಿದೆ. ಇಲ್ಲಿ ರಸ್ತೆಯ ಬದಿಯಲ್ಲಿ ವಾಹನಗಳನ್ನು ನಿಲ್ಲಿಸಿ ಹೋಗುವುದರಿಂದ ಬಸ್ಸಿಗೆ ಒಮ್ಮೆಲೇ ತಿರುಗಲು ಕಷ್ಟ ಸಾಧ್ಯವಾಗುತ್ತಿದೆ. ಇತ್ತ ಆ ವಾಹನಗಳ ಚಾಲಕರನ್ನು ಹುಡುಕಲು ದುರ್ಬಿನೇ ಬೇಕಾದ ಸ್ಥಿತಿ ಇದೆ. ಸಿಟಿ ಬಸ್ಸಿನ ಚಾಲಕ ಮತ್ತು ನಿರ್ವಾಹಕರು ಆ ವಾಹನಗಳ ಚಾಲಕರು ಬರುವವರೆಗೆ ಕಾಯಬೇಕಾಗಿರುವುದು ಅನಿವಾರ್ಯವಾಗಿದೆ. ಇಲ್ಲಿ ಸುಗಮ ಸಂಚಾರಕ್ಕೆ ಅಡಚಣೆಯಾಗುತ್ತಿದ್ದು, ಪೊಲೀಸರು ಇತ್ತ ಕಡೆ ಗಮನ ಹರಿಸಬೇಕಾಗಿದೆ.