ಶಿರಸಿ: ಜೂ.5,ಗುರುವಾರದಂದು ಶಿರಸಿ ಲಯನ್ಸ್ ಶಾಲೆಯಲ್ಲಿ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ಪರಿಸರದ ದಿನಾಚರಣೆಯ ಅಂಗವಾಗಿ LKG ಯಿಂದ 4 ನೆ ತರಗತಿ ವಿದ್ಯಾರ್ಥಿಗಳಿಗೆ ಪರಿಸರ ಸಂರಕ್ಷಣೆ ಹಾಗೂ ಪರಿಸರದ ಬಗ್ಗೆ ಕಾಳಜಿ, ಪ್ರೀತಿ ಬೆಳಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಯಿತು.
ಪರಿಸರಕ್ಕೆ ಸಂಬಂಧಿಸಿದಂತೆ, ವಿದ್ಯಾರ್ಥಿಗಳು ವಿವಿಧ ಬಗೆಯ ಚಿತ್ರಗಳನ್ನು ಸಂಗ್ರಹಿಸಿದರು ಹಾಗೂ ಚಿತ್ರಕಲೆ, ಭಾಷಣ ಮುಂತಾದ ಚಟುವಟಿಕೆಯಲ್ಲಿ ಪಾಲ್ಗೊಂಡರು. ಈ ಶುಭ ಸಂದರ್ಭದಲ್ಲಿ ಶಾಲೆಯ ಗೌರವ ಕಾರ್ಯದರ್ಶಿಗಳಾದ ಲಯನ್ ಪ್ರೋ. ರವಿ ನಾಯಕ್ ಇವರು ಉಪಸ್ಥಿತರಿದ್ದು, ಪರಿಸರದ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಿಗೆ ಕಿವಿಮಾತು ತಿಳಿಸಿದರು. ಲಯನ್ಸ್ ಪಿ.ಯು. ಕಾಲೇಜಿನ ಪ್ರಾಂಶುಪಾಲರಾದ ಶಶಾಂಕ ಹೆಗಡೆ ಇವರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು, ಪರಿಸರ ದಿನಾಚರಣೆಯ ಶುಭಾಷಯ ಕೋರಿದರು. ಹಾಗೂ ಮುಖ್ಯಾಧ್ಯಾಪಕರಾದ ಗಣಪತಿ ಗೌಡ ಇವರು ವಿದ್ಯಾರ್ಥಿಗಳಿಗೆ ಪರಿಸರ ದಿನಾಚರಣೆಯ ಮಹತ್ವ ತಿಳಿಸಿ ಶುಭ ಕೋರಿದರು. ಈ ಶುಭ ಸಂದರ್ಭದಲ್ಲಿ ಆರ್. ಎನ್. ಎಸ್. ಮೊಟಾರ್ಸ್, ಶಿರಸಿ ಇವರು ಶಾಲೆಗೆ ನೀಡಿರುವ ಸಸಿಯನ್ನು ಸ್ಕೌಟ್ಸ್ ಮತ್ತು ಗೈಡ್ಸ್ ಕ್ಯಾಪ್ಟನ್‌ಗಳಾದ ರಾಘವೇಂದ್ರ ಹೊಸೂರು ಮತ್ತು ಶ್ರೀಮತಿ ಚೇತನಾ ಪಾವಸ್ಕರ್ ಇವರುಗಳು ಹಾಗೂ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಸೇರಿ ಸಸಿಗಳನ್ನು ನೆಟ್ಟರು.
ಲಯನ್ಸ್ ಶಾಲೆಯಲ್ಲಿ ಪರಿಸರ ದಿನಾಚರಣೆ
