ಸಿದ್ದಾಪುರ: ಇಲ್ಲಿನ ಆಶಾಕಿರಣ ಟ್ರಸ್ಟ್ ಆಶ್ರಯದಲ್ಲಿ ಜಗದ್ಗುರು ಮುರುಘ ರಾಜೇಂದ್ರ ಅಂಧ ಮಕ್ಕಳ ಶಾಲೆಯಲ್ಲಿ ವಿಕಲಚೇತನರ ವಿವಿಧ ಚಟುವಟಿಕೆಗಳ ಸಪ್ತಾಹಕ್ಕೆ ಚಾಲನೆ ನೀಡಲಾಯಿತು. ಸಪ್ತಾಹ ಉದ್ಘಾಟಿಸಿದ ಸಿದ್ದಾಪುರದ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಎ.ಜಿ.ನಾಯ್ಕ ಮಾತನಾಡಿ ಶುಭ ಕೋರಿದರು. ಎಂ.ಆರ್.ಡಬ್ಲ್ಯೂ. ಶ್ರೀಧರ ಹರಗಿ ಮಾತನಾಡಿ ವಿಕಲ ಚೇತನರ ಹಕ್ಕಿನ ಕುರಿತು ಅರಿವು ಮೂಡಿಸಲು ಈ ಸಪ್ತಾಹ ನೆರವಾಗಲಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ಆಶಾಕಿರಣ ಟ್ರಸ್ಟ್ ಅಧ್ಯಕ್ಷ. ಡಾ. ರವಿ ಹೆಗಡೆ ಹೂವಿನಮನೆ ಇವರು ಮಾತನಾಡಿ ವಿಶೇಷ ಚೇತನರು ಸಮಾಜದ ಮುಖ್ಯ ವಾಹಿನಿಗೆ ಬರಲು ಎಲ್ಲರೂ ಶ್ರಮಿಸಬೇಕು. ವಿವಿಧ ಕಾರ್ಯ ಕ್ರಮಗಳ ಮೂಲಕ ಅರಿವು ಮೂಡಿಸಿ ಸಮಾಜ ಎಚ್ಚರಿಸುವ ಚಟುವಟಿಕೆ ನಡೆಸಲು ಸಹಕರಿಸಬೇಕು ಎಂದು ಕರೆ ಇತ್ತರು. ಆಶಾಕಿರಣ ಟ್ರಸ್ಟ್ ಉಪಾದ್ಯಕ್ಷ ಸಿಇ. ಎಸ್. ಗೌಡರ ಮಾತನಾಡಿದರು. ಲತಾ ಮಡಿವಾಳ ಸ್ವಾಗತಿಸಿ ವಂದಿಸಿದರು.