ಸಿದ್ದಾಪುರ: ತಾಲೂಕಾ ಕೊಂಕಣಿ ಖಾರ್ವಿ ಸಮಾಜದ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ಸಮಾಜದ ಸಭಾಭವನದಲ್ಲಿ ರವಿವಾರ ನಡೆದು ಅಧ್ಯಕ್ಷರಾಗಿ ಸುರೇಶ್ ಕೆ. ಮೇಸ್ತ ಪುನರಾಯ್ಕೆಯಾದರು.
ಈ ವೇಳೆ ಮಾತನಾಡಿದ ಅವರು ಹಿಂದಿನ ಮೂರು ವರ್ಷದ ಅವಧಿಯಲ್ಲಿ ಹಲವು ಉತ್ತಮ ಕೆಲಸಗಳು ಆಗಿದ್ದು, ಈ ಅವಧಿಯಲ್ಲಿಯೂ ಸಮಾಜದ ಎಲ್ಲರ ಸಹಕಾರದೊಂದಿಗೆ ಮತ್ತಷ್ಟು ಕೆಲಸಗಳನ್ನು ಮಾಡುವ ಮೂಲಕ ಸಮಾಜದ ಅಭಿವೃದ್ಧಿಗೆ ಹೆಚ್ಚು ಮಹತ್ವ ನೀಡುತ್ತೇನೆ. ಸಮಾಜದ ಮಕ್ಕಳ ವಿದ್ಯಾಭ್ಯಾಸ ಅನುಕೂಲವಾಗುವಂತೆ ಮುಂದಿನ ದಿನಗಳಲ್ಲಿ ಹೊಸ ಯೋಜನೆಯನ್ನು ಕಾರ್ಯರೂಪಕ್ಕೆ ತರಲಾಗುವುದು ಎಂದು ಹೇಳಿದರು.
ಉಳಿದಂತೆ ಸಂಘದ ಉಪಾಧ್ಯಕ್ಷರಾಗಿ ಉಮೇಶ್ ಎಸ್. ಮೇಸ್ತ, ಪ್ರಧಾನ ಕಾರ್ಯದರ್ಶಿಯಾಗಿ 2ನೇ ಬಾರಿಗೆ ಗಣೇಶ್ ಆರ್. ಮೇಸ್ತ, ಖಜಾಂಚಿಯಾಗಿ ಹೇಮಂತ್ ಡಿ. ಮೇಸ್ತ, ಮಹಿಳಾ ಕಾರ್ಯದರ್ಶಿಯಾಗಿ ಜಯಂತಿ ಜಿ. ಮೇಸ್ತ, ಸದಸ್ಯರಾಗಿ ದತ್ತಾತ್ರೇಯ ಎಸ್.ಮೇಸ್ತ, ಗಣಪತಿ ಟಿ. ಮೇಸ್ತ, ಮಂಜುನಾಥ್ ಡಿ. ಮೇಸ್ತ, ಶೇಖರ್ ಜಿ. ಮೇಸ್ತ, ವಸಂತ್ ಎನ್. ಮೇಸ್ತ, ಕೇಶವ್ ಎಸ್. ಮೇಸ್ತ ಆಯ್ಕೆಯಾಗಿರುತ್ತಾರೆ.