Slide
Slide
Slide
previous arrow
next arrow

ಹೊನ್ನಾವರ ಅರ್ಬನ್ ಬ್ಯಾಂಕ್ 105ನೇ ವಾರ್ಷಿಕ ಮಹಾಸಭೆ: 1ಕೋಟಿ 40ಲಕ್ಷ ರೂ.ನಿಕ್ಕಿ ಲಾಭ

300x250 AD

ಹೊನ್ನಾವರ : ಹೊನ್ನಾವರ ನಗರ ಸಹಕಾರಿ ಬ್ಯಾಂಕಿನ 105 ನೇ ವಾರ್ಷಿಕ ಸರ್ವಸಾಧಾರಣ ಸಭೆಯು ಆ. 25ರಂದು ಪಟ್ಟಣದ ನ್ಯೂ ಇಂಗ್ಲೀಷ ಸ್ಕೂಲ್ ಆವಾರದಲ್ಲಿ ಬ್ಯಾಂಕಿನ ಅಧ್ಯಕ್ಷ ರಾಘವ ವಿಷ್ಣು ಬಾಳೇರಿಯವರ ಅಧ್ಯಕ್ಷತೆಯಲ್ಲಿ ನಡೆಯಿತು.

1919ರಿಂದ ಬ್ಯಾಕಿಂಗ್ ಕ್ಷೇತ್ರದಲ್ಲಿ ವಿಶೇಷವಾಗಿ ಗುರುತಿಸಲ್ಪಟ್ಟಿರುವ ಪ್ರತಿಷ್ಠಿತ ದಿ ಹೊನ್ನಾವರ ಅರ್ಬನ್ ಕೋ-ಒಪರೇಟಿವ್ ಬ್ಯಾಂಕ್ ಲಿ., ಹೊನ್ನಾವರ 2023-24 ನೇ ಸಾಲಿನಲ್ಲಿ ರೂ.1 ಕೋಟಿ 90ಲಕ್ಷ ನಿರ್ವಹಣಾ ಲಾಭ ಗಳಿಸಿದ್ದು, ಸರಕಾರಕ್ಕೆ ಆದಾಯ ತೆರಿಗೆ ಪಾವತಿಸುವ ಬಗ್ಗೆ ಅನುವು ಮಾಡಿದ ನಂತರ ರೂ.1ಕೋಟಿ 40 ಲಕ್ಷ ನಿಕ್ಕಿ ಲಾಭ ಗಳಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷ ರಾಘವ ವಿಷ್ಣು ಬಾಳೇರಿಯವರು ವಾರ್ಷಿಕ ಸರ್ವಸದಸ್ಯರ ಸಾಧಾರಣ ಸಭೆಯಲ್ಲಿ ತಿಳಿಸಿದರು.

ಬ್ಯಾಂಕಿನ ಠೇವು ಸಂಗ್ರಹಣೆ ರೂ.229 ಕೋಟಿ ತಲುಪಿದ್ದು, ಸಾಲ-ಮುಂಗಡಗಳು ರೂ.145.29 ಕೋಟಿಗಳಿಗೆ ತಲುಪಿವೆ. ಶೇರು ಭಂಡವಾಳ ಮತ್ತು ಸ್ವಂತ ನಿಧಿಗಳು ರೂ.25.20 ಕೋಟಿಗಳಾಗಿದ್ದು, ಒಟ್ಟೂ ದುಡಿಯುವ ಭಂಡವಾಳ ರೂ.262.11 ಕೋಟಿಗಳಿಗೆ ಏರಿಕೆಯಾಗಿದೆ. ಒಟ್ಟೂ ರೂ.98.20 ಕೋಟಿ ಹಣವನ್ನು ಬ್ಯಾಂಕು ಕೇಂದ್ರ ಸರ್ಕಾರದ ಸಾಲಪತ್ರಗಳಲ್ಲಿ,Non-SLR ಬೋಂಡ್‌ಗಳಲ್ಲಿ ಹಾಗೂ ವಿವಿಧ ಬ್ಯಾಂಕುಗಳಲ್ಲಿ ಗುಂತಾಯಿಸಿರುವದು ಬ್ಯಾಂಕಿನ ಆರ್ಥಿಕ ಸ್ಥಿರತೆಯನ್ನು ದೃಢೀಕರಿಸಿದೆ. ಬ್ಯಾಂಕು ಪ್ರಸಕ್ತ ಸಾಲಿನಲ್ಲಿ ರೂ.324.29ಕೋಟಿ ಒಟ್ಟೂ ವ್ಯವಹಾರವನ್ನು ನಡೆಸಿದೆ. ಬ್ಯಾಂಕಿನ ಅಖಂಖ 12.74 ಇದ್ದು, ಇದು ಬ್ಯಾಂಕಿನ ಆರ್ಥಿಕ ಸುಭದ್ರತೆಯ ಸಂಕೇತವಾಗಿದೆ. ಒಟ್ಟೂ 25753ಶೇರು ಸದಸ್ಯರನ್ನು ಹೊಂದಿರುವ ಬ್ಯಾಂಕು ರೂ.7.59 ಕೋಟಿಗಳಿಗೆ ಶೇರು ಭಂಡವಾಳ ವೃದ್ಧಿಸಿಕೊಂಡಿದೆ. ಬ್ಯಾಂಕು ಲೆಕ್ಕಪರಿಶೋಧನೆಯಲ್ಲಿ ‘ಅ’ ವರ್ಗದಲ್ಲಿ ಮುಂದುವರೆದಿದೆ. ಬೇಂಕಿನ ಸಾಲ ವಸೂಲಾತಿ ಪ್ರಮಾಣ 96.70% ಇರುತ್ತದೆ ಎಂದು ತಿಳಿಸಲು ಹರ್ಷವೆನಿಸುತ್ತದೆ ಎಂತ ಅವರು ತಿಳಿಸಿದ್ದಾರೆ. ಬ್ಯಾಂಕು ಪ್ರಸಕ್ತ ಸಾಲಿನ ಬಗ್ಗೆ ಶೇರು ಸದಸ್ಯರಿಗೆ 9% ಡಿವಿಡೆಂಡ್ ಘೋಷಿಸಿದೆ. ಈ ಬಗ್ಗೆಯೇ ಬ್ಯಾಂಕು ರೂ. 66.95ಲಕ್ಷ ವ್ಯಯಿಸಲಿದೆ.

ಬ್ಯಾಂಕು ಸಾಲ ಮತ್ತು ಮುಂಗಡಗಳನ್ನು ನೀಡಲು ಹೆಚ್ಚಿನ ಸಂಪನ್ಮೂಲವನ್ನು ಹೊಂದಿದ್ದು, ಅತ್ಯಂತ ಸ್ಪರ್ಧಾತ್ಮಕ ದರಗಳಲ್ಲಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ಪ್ರತಿ ಗ್ರಾಂ ಬಂಗಾರಕ್ಕೆ ಗರಿಷ್ಠ ರೂ. 4500/- ಬಂಗಾರ ದಾಗಿನೆ ಸಾಲವನ್ನು ಶೇ. 8.50 ರಿಂದ ಶೇ.11.50ವರೆಗಿನ ಬಡ್ಡಿದರಗಳಲ್ಲಿ ನೀಡುತ್ತಿದೆ. ಇದರ ಹೊರತಾಗಿ ಬ್ಯಾಂಕಿನ ಶರತ್ತುಗಳಿಗೆ ಒಳಪಟ್ಟು ವಿಶೇಷ ಸಾಲ ಯೋಜನೆಗಳಾದ ಕಾರು ಸಾಲ 8.25% ಹಾಗೂ ವ್ಯವಹಾರ ಉದ್ದಿಮೆಗಳಿಗೆ 9% ರ ಬಡ್ಡಿದರಗಳಲ್ಲಿ ಸಾಲವನ್ನು ನೀಡಲಾಗುತ್ತಿವೆ.

300x250 AD

ಬ್ಯಾಂಕು ಕೋರ್ ಬ್ಯಾಂಕಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಂಡು ಬ್ಯಾಂಕಿನ ಗ್ರಾಹಕರಿಗೆ ತಂತ್ರಜ್ಞಾನ ಪೂರಿತ ಅತ್ಯಾಧುನಿಕ ಬ್ಯಾಂಕಿಂಗ್ ಸೌಲಭ್ಯಗಳನ್ನು ನೀಡುತ್ತಿದೆ. ತನ್ಮೂಲಕ ಎಲ್ಲಾ ಶಾಖೆಗಳಲ್ಲಿ ಆರ್.ಟಿ.ಜಿ.ಎಸ್./ನೆಫ್ಟ್, ಸಿ.ಟಿ.ಎಸ್.ಕ್ಲಿಯರಿಂಗ್, ಎಸ್.ಎಂ.ಎಸ್. ಅಲರ್ಟ್ ಸರ್ವೀಸ್, ರುಪೇ ಕಾರ್ಡ್, ಇ-ಸ್ಟಾಂಪಿಂಗ್ ಮುಂತಾದ ಗ್ರಾಹಕ ಸ್ನೇಹಿ ಸೌಲಭ್ಯಗಳನ್ನು ಪ್ರಚುರಪಡಿಸಿದೆ. ಬ್ಯಾಂಕು ಸ್ವಂತ ಎ.ಟಿ.ಎಮ್. ಹೊಂದಿದೆ. ಹಾಗೂ ಬ್ಯಾಂಕು ಡಿಜಿಟಲ್ ಬ್ಯಾಂಕಿಂಗ್ ಹಾಗೂ ಇ-ಪೇಮೆಂಟ್‌ಗಳಿಗೆ ಹೆಚ್ಚಿನ ಒತ್ತು ನೀಡುತ್ತಿದೆ. ಮೊಬೈಲ್ ಬ್ಯಾಂಕ್ IMPS, NACH ಅಳವಡಿಸಿದ್ದು, UPI ಸೇವೆಗಳನ್ನು ಅಳವಡಿಸುವ ಪ್ರಕ್ರಿಯೆ ಪ್ರಗತಿಯಲ್ಲಿ ಇದೆ.

ಬ್ಯಾಂಕು ಸಮಾಜಮುಖಿಯಾಗಿ ತನ್ನ ಕಾರ್ಯನಿರ್ವಹಿಸುತ್ತಿದೆ. ಪ್ರತಿ ವರ್ಷ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ನಡೆಸುತ್ತಿದ್ದು, ಶಿಕ್ಷಣ, ಕ್ರೀಡೆ ಹಾಗೂ ಇನ್ನಿತರ ಕ್ಷೇತ್ರಗಳಲ್ಲಿ ಅಪೂರ್ವ ಸಾಧನೆ ಮಾಡಿದ ಜಿಲ್ಲೆಯ ವಿದ್ಯಾರ್ಥಿಗಳನ್ನು ಪುರಸ್ಕರಿಸುವ ಪರಿಪಾಠ ಹಾಕಿಕೊಂಡಿದೆ. ವಿಕಲಚೇತನ ವಿದ್ಯಾರ್ಥಿಗಳನ್ನು ಸಹ ಪ್ರೋತ್ಸಾಹಿಸಿದೆ. ಬ್ಯಾಂಕು ತನ್ನ ಸಂಸ್ಥಾಪಕರಾದ ದಿ. ಎಮ್. ಎ. ಕಿಣಿ ಹಾಗೂ ದಿ. ಎಲ್. ಕೆ. ಶ್ಯಾನಭಾಗ ಶ್ರೋಫ್‌ರವರ ಸ್ಮರಣಾರ್ಥ ನಿರ್ಮಿಸಿರುವ ಸಭಾಭವನವನ್ನು ಸಹಕಾರಿ ವಲಯದ ತರಬೇತಿ ಕಾರ್ಯಕ್ರಮಗಳಿಗೆ ಉಚಿತವಾಗಿ ನೀಡುತ್ತಿದೆ. ಜನತೆಗೆ ಶುದ್ಧ ಕುಡಿಯುವ ನೀರನ್ನು ಪೂರೈಸಿ ಜನತೆಯ ಅಗತ್ಯಕ್ಕೆ ಸ್ಪಂದಿಸಿ ತನ್ನ ಸಾಮಾಜಿಕ ಬದ್ಧತೆಯನ್ನು ನಿರ್ವಹಿಸಿದೆ ಎಂದು ಬ್ಯಾಂಕಿನ ಅಧ್ಯಕ್ಷರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share This
300x250 AD
300x250 AD
300x250 AD
Back to top