ಯಲ್ಲಾಪುರ: ಶವ ಸಂಸ್ಕಾರಕ್ಕೆ ಉರುವಲು ಕಟ್ಟಿಗೆ ಪೂರೈಕೆ ಸಮರ್ಪಕವಾಗಿ ಆಗಬೇಕೆಂದು ವಿಶ್ವ ಹಿಂದೂ ಪರಿಷತ್ ತಾಲೂಕು ಘಟಕ ಅರಣ್ಯ ಇಲಾಖೆಗೆ ಮನವಿ ನೀಡಿ ಆಗ್ರಹಿಸಿದೆ.
ಮೊದಲು ಕಟ್ಟಿಗೆ ಡಿಪೋಗಳಲ್ಲಿ ಶವ ಸಂಸ್ಕಾರಕ್ಕೆಂದು ಕಟ್ಟಿಗೆಯನ್ನು ಮೀಸಲಿಡಲಾಗುತ್ತಿತ್ತು. ಆದರೆ ಇದೀಗ ಆ ವ್ಯವಸ್ಥೆಯನ್ನು ನಿಲ್ಲಿಸಲಾಗಿದೆ. ಇದರಿಂದ ಶವ ಸಂಸ್ಕಾರಕ್ಕೆ ಹೆಚ್ಚಿದ ದರ ನೀಡಿ ಉರುವಲು ಖರೀದಿಸಬೇಕಾಗಿದೆ. ಇದು ಹೊರೆಯಾಗುತ್ತಿದೆ. ಮಾತ್ರವಲ್ಲದೇ ಮಳೆಗಾಲದಲ್ಲಿ ಒಣ ಕಟ್ಟಿಗೆಗಳು ದೊರಕದೆ ತೊಂದರೆಯಾಗುತ್ತಿದೆ. ಹೀಗಾಗಿ ಅರಣ್ಯ ಇಲಾಖೆ ಹಿಂದೂ ಬಾಂಧವರ ಶವ ಸಂಸ್ಕಾರಕ್ಕದು ಕಟ್ಟಿಗೆಯನ್ನು ಮೀಸಲಿಡಬೇಕು. ಅಗತ್ಯ ಸಂದರ್ಭದಲ್ಲಿ ರಿಯಾಯತಿ ದರದಲ್ಲಿ ಉತ್ತಮ ಕಟ್ಟಿಗೆ ಪೂರೈಕೆ ಮಾಡಬೇಕು ಎಂದು ಅರಣ್ಯಾಧಿಕಾರಿ ನರೇಶ ಜಿ.ವಿ. ಅವರಿಗೆ ನೀಡಿದ ಮನವಿಯಲ್ಲಿ ಆಗ್ರಹಿಸಲಾಗಿದೆ.
ಮನವಿ ಸ್ವೀಕರಿಸಿದ ಅರಣ್ಯಾಧಿಕಾರಿ ಶವ ಸಂಸ್ಕಾರಕ್ಕೆ ಕಟ್ಟಿಗೆ ಮೀಸಲಿಡುವ ಭರವಸೆ ನೀಡಿದ್ದಾರೆ.
ಈ ಸಂದರ್ಭದಲ್ಲಿ ವಿಶ್ವ ಹಿಂದೂ ಪರಿಷತ್ ತಾಲೂಕು ಅಧ್ಯಕ್ಷ ಗಜಾನನ ನಾಯ್ಕ ,ಪ್ರಮುಖರಾದ ಅನಂತ ಗಾಂವ್ಕರ್,ನಾಗಾರ್ಜುನ ಬದ್ದಿ, ಗಿರೀಶ ಭಾಗ್ವತ್, ಶ್ರೀನಂದನ ನಾಯ್ಕ, ನಾರಾಯಣ ಭಟ್ಟ, ಧೀರಜ ತಿನೇಕರ್ ಮುಂತಾದವರಿದ್ದರು.