Slide
Slide
Slide
previous arrow
next arrow

ನಿರಂತರ ಸುರಿಯುತ್ತಿರುವ ಮಳೆ: ಕುಸಿದ ಶಾಲಾ ಕಂಪೌಂಡ್

300x250 AD

ಭಟ್ಕಳ: ಜಿಲ್ಲೆಯಲ್ಲಿ ಕಳೆದೊಂದು ವಾರದಿಂದ ಮಳೆ ಬಿಟ್ಟು ಬಿಡದೇ ಸುರಿಯುತ್ತಿದ್ದು, ಬಹುತೇಕ ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿವೆ. ಕೆಲವು ನಂದಿಯಂಚಿನ ಪ್ರದೇಶಗಳಲ್ಲಿ ಪ್ರವಾಹದ ಮುನ್ಸೂಚನೆ ನೀಡಲಾಗಿದ್ದು, ಮುಂಜಾಗೃತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆಯೆಂದು ಜಿಲ್ಲಾಡಳಿತ ತಿಳಿಸಿದೆ.

ಜಿಲ್ಲೆಯ ಸಿದ್ದಾಪುರ, ಭಟ್ಕಳ, ಹೊನ್ನಾವರ, ಕುಮಟಾ, ಶಿರಸಿ ತಾಲೂಕು ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಿದ್ದು, ಕೆಲವೆಡೆ ಭಾರೀ ಅನಾಹುತಗಳನ್ನು ಸೃಷ್ಟಿಸಿದೆ. ರಸ್ತೆ ಮೇಲೆ ಮರ ಬಿದ್ದು ರಸ್ತೆ ಸಂಚಾರದಲ್ಲಿ ವ್ಯತ್ಯಯ, ಮನೆ ಮೇಲೆ ಮರ ಬಿದ್ದಿರುವುದು, ಧರೆ ಕುಸಿಯುವುದು, ನೀರು ಮನೆಗೆ ನುಗ್ಗಿರುವುದು ಸೇರಿದಂತೆ ಅನೇಕ ಸಮಸ್ಯೆಗಳನ್ನು ಮಳೆ ಸೃಷ್ಟಿಸಿದೆ. ಜಿಲ್ಲಾಡಳಿತ, ತಾಲೂಕಾಡಳಿತದ ಜೊತೆಗೆ ಜನತೆಯೂ ಸಹ ಈ ನಿಟ್ಟಿನಲ್ಲಿ ಜಾಗೃತರಾಗಿರುವುದು ಅವಶ್ಯಕವಾಗಿದೆ.

300x250 AD

ಶಾಲಾ ಕಂಪೌಂಡ್ ಕುಸಿತ: ಶಿರಸಿಯ ಶಾಸಕರ ಮಾದರಿ ಪ್ರಾಥಮಿಕ ಶಾಲೆಯ ಕಂಪೌಂಡ್ ಭಾನುವಾರ ಕುಸಿದುಬಿದ್ದಿದೆ. ಸ್ಥಳಕ್ಕೆ ನಗರಸಭೆ ಕಂದಾಯ ಅಧಿಕಾರಿ ಆರ್.ಎಂ. ವರ್ಣೇಕರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಇನ್ನುಳಿದಂತೆ ಗುಡ್ನಾಪುರ ವ್ಯಾಪ್ತಿಯಲ್ಲಿ ಕಚ್ಚಾ ಮನೆಯ ಗೋಡೆ ಕುಸಿದಿದೆ. ಶಿರಸಿ ನಗರದ ರಾಜೀವ ನಗರದಲ್ಲಿ ವಾಸ್ತವ್ಯದ ಮನೆ ಗೋಡೆ ಕುಸಿದು ಹಾನಿಯಾದ ವರದಿಯಾಗಿದೆ.

Share This
300x250 AD
300x250 AD
300x250 AD
Back to top