Slide
Slide
Slide
previous arrow
next arrow

ಈ ಬಾರಿ ದೆಹಲಿಗೆ ಕಾಗೇರಿ..

300x250 AD

ಎನ್ಡಿಎಗೆ ಸರಳ ಬಹುಮತ ನೀಡಿದ ದೇಶದ ಜನತೆ | ಬಾರೀ ಅಂತರದಿಂದ ಗೆದ್ದ ಕಾಗೇರಿ

ಲೋಕಸಭಾ ಚುನಾವಣೆಯಲಿ ದೇಶದ ಜನ ಬಿಜೆಪಿ ನೇತೃತ್ವದ ಎನ್ಡಿಎಗೆ ಸ್ಪಷ್ಟ ಬಹುಮತ ನೀಡಿದ್ದು, ಬಿಜೆಪಿಗೆ ತುಸು ಹಿನ್ನಡೆಯಾಗಿದೆ. ರಾಜ್ಯದಲ್ಲಿಯೂ ಅಧಿಕಾರದಲ್ಲಿದ್ದ ಕಾಂಗ್ರೆಸ್ ಈ ಹಿಂದಿಗಿಂತ ಕೆಲವೇ ಸೀಟುಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದೆ. ರಾಜ್ಯದಲ್ಲಿ ಬಿಜೆಪಿ 17, ಜೆಡಿಎಸ್ 2 ಮತ್ತು ಕಾಂಗ್ರೆಸ್ 9 ಸೀಟುಗಳನ್ನು ಪಡೆದುಕೊಂಡಿದೆ. ಸರಳ-ಸಜ್ಜನ ರಾಜಕಾರಣಿಯೆಂದೇ ಗುರುತಿಸಿಕೊಂಡಿರುವ ವಿಶ್ವೇಶ್ವರ ಹೆಗಡೆ ಕಾಗೇರಿ ರಾಜ್ಯದಲ್ಲಿಯೇ ಅತಿ ಹೆಚ್ಚು 3.37 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುವ ಮೂಲಕ ತಮ್ಮ ಛಾಪನ್ನು ಮೂಡಿಸಿದ್ದಾರೆ.

ಗೆಲುವಿನ ನಿರೀಕ್ಷೆಯಲ್ಲಿ ಸಹಜವಾಗಿ ಇದ್ದ ಕಾಗೇರಿ ಬಣ, ಎರಡು ಲಕ್ಷಕ್ಕಿಂತಲೂ ಅಧಿಕ ಮತದಿಂದ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದ್ದರು. ಆದರೆ ಮತದಾರ ನಿರೀಕ್ಷೆಗಿಂತ ಹೆಚ್ಚಿನದನ್ನೇ ನೀಡಿದ್ದಾರೆ. ಲೋಕಸಭಾ ಕ್ಷೇತ್ರದ ಎಂಟೂ ವಿಧಾನಸಭಾ ಕ್ಷೇತ್ರದಲ್ಲಿಯೂ ಮುನ್ನಡೆಯನ್ನು ಕಾಯ್ದುಕೊಳ್ಳುವ ಮೂಲಕ ತಮ್ಮ ಗೆಲುವಿನ ರಹದಾರಿಯಲ್ಲಿ ಸಾಗಿರುವ ಕಾಗೇರಿ, ಮತ್ತೊಮ್ಮೆ ಜನನಾಯಕರಾಗಿ ಜನಸೇವೆಗೆ ಆಯ್ಕೆಯಾಗಿದ್ದಾರೆ.

ಜಿಲ್ಲೆಯ ಸಮಸ್ತ ಜನತೆಗೆ ಗೆಲುವನ್ನು ಅರ್ಪಿಸಿದ ವಿಶ್ವೇಶ್ವರ ಹೆಗಡೆ ಕಾಗೇರಿ

ಪ್ರಧಾನಿ ಮೋದಿಯವರ ಜನಹಿತ ಕಾರ್ಯ, ಅಭಿವೃದ್ಧಿ ಕೆಲಸಗಳ ಪರಿಣಾಮ, ಪಕ್ಷದ ನಿಷ್ಟಾವಂತ ಕಾರ್ಯಕರ್ತರ ಪರಿಶ್ರಮ ಪ್ರತಿಫಲವಾಗಿ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿದೆ. ಈ ಗೆಲುವನ್ನು ಸಮಸ್ತ ಜನತೆಗೆ ಅರ್ಪಿಸುವುದಾಗಿ ಬಿಜೆಪಿಯ ವಿಜೇತ ಅಭ್ಯರ್ಥಿ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದ್ದಾರೆ.

ಅವರು ಕುಮಟಾದ ಮತ ಎಣಿಕಾ ಕೇಂದ್ರದಲ್ಲಿ ತಮ್ಮ ಗೆಲುವಿನ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಉತ್ತರ ಕನ್ನಡದಲ್ಲಿ ಬಿಜೆಪಿಯು ಗಟ್ಟಿಯಾಗಿದೆ. ಯಾರೋ ಒಬ್ಬರ ಸ್ವತ್ತಲ್ಲ. ತಾವು ಕೂಗಿದರೆ ಮಾತ್ರ ಬೆಳಗಾಗುತ್ತದೆ ಎಂಬ ಕೋಳಿಗಳಿಗೆ ಜಿಲ್ಲೆಯ ಜನ ತಕ್ಕ ಪಾಠ ಕಲಿಸಿದ್ದಾರೆ. ಗೆಲುವಿಗಾಗಿ ಶ್ರಮಿಸಿದ ಪ್ರತಿಯೊಬ್ಬರಿಗೂ ಧನ್ಯವಾದ ಅರ್ಪಿಸುವುದಾಗಿ ಪ್ರತಿಕ್ರಿಯಿಸಿದ್ದಾರೆ.

8 ವಿಧಾನಸಭಾ ಕ್ಷೇತ್ರಗಳಲ್ಲಿ ಕಾಗೇರಿ ಗೆಲುವಿನ ಅಂತರದ ಮಾಹಿತಿ ಇಲ್ಲಿದೆ

ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಿಂದ ಮಾಜಿ ವಿಧಾನಸಭಾಧ್ಯಕ್ಷ‌ ವಿಶ್ವೇಶ್ವರ ಹೆಗಡೆ ಕಾಗೇರಿ 782.495 ಮತಗಳನ್ನು ಪಡೆದಿದ್ದು, ಅವರ ಎದುರಾಳಿ ಕಾಂಗ್ರೆಸಿನ ಅಂಜಲಿ ನಿಂಬಾಳ್ಕರ್ 445,067 ಮತಗಳನ್ನು ಗಳಿಸಿದ್ದು, ಸುಮಾರು 337, 428 ಮತಗಳ ಅಂತರದಿಂದ ಕಾಗೇರಿ ಗೆಲುವಿನ ನಗೆ ಬೀರಿದ್ದಾರೆ.

300x250 AD

8 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದ, ಕೆನರಾ ಲೋಕಸಭಾ ಕ್ಷೇತ್ರದಲ್ಲಿ ಕಾಗೇರಿಯವರು ಪಡೆದ ಮತಗಳ ಮುನ್ನಡೆಯ ಮಾಹಿತಿ ಇಲ್ಲಿದೆ. ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರ – 39,928 ಮತಗಳ ಮುನ್ನಡೆ , ಕಿತ್ತೂರು – 36,242 ಮತ ಮುನ್ನಡೆ, ಖಾನಾಪುರ – 59,830 ಮತ ಮುನ್ನಡೆ, ಯಲ್ಲಾಪುರ – ಮುಂಡಗೋಡು – 18,387 ಮತಗಳ ಮುನ್ನಡೆ, ಕುಮಟಾ – ಹೊನ್ನಾವರ – 53,493 ಮತಗಳ ಮುನ್ನಡೆ, ಭಟ್ಕಳ – 32,403 ಮತ ಮುನ್ನಡೆ, ಕಾರವಾರ- ಅಂಕೋಲಾ ಅತಿ ಹೆಚ್ಚು – 65,428 ಮತಗಳ ಮುನ್ನಡೆ, ಹಳಿಯಾಳ – 28,880 ಮತಗಳಿಂದ ಕಾಗೇರಿ ಮುನ್ನಡೆ ಪಡೆದಿದ್ದಾರೆ.

ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ನೋಟಾ ಚಲಾವಣೆ

ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಕಾಗೇರಿಗೆ ಅತಿ ಹೆಚ್ಚು ಲೀಡ್ ಕೊಟ್ಟಿದ್ದು, ರೂಪಾಲಿ ನಾಯ್ಕ ಪಾತ್ರ ಎದ್ದು ಕಾಣುತ್ತದೆ.

ಅದರಂತೆಯೇ ಒಟ್ಟೂ ಚಲಾವಣೆಯಾದ ಮತಗಳಲ್ಲಿ 10,176 ಮತಗಳು ನೋಟಾ ಆಗಿದೆ. ವಿಧಾನಸಭಾ ಕ್ಷೇತ್ರಗಳ ಪೈಕಿ ಖಾನಾಪುರ – 823 ಮತ, ಕಿತ್ತೂರು – 1077 ಮತ, ಹಳಿಯಾಳ – 952 ಮತ, ಕಾರವಾರ – 1373, ಕುಮಟಾ – 1706, ಭಟ್ಕಳ – 1252, ಶಿರಸಿ – 2002 ಮತ ಹಾಗು ಯಲ್ಲಾಪುರ-ಮುಂಡಗೋಡು – 966 ಮತಗಳು ನೋಟಾ ಚಲಾವಣೆಯಾಗಿವೆ. ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ನೋಟಾ ದಾಖಲಾಗಿದೆ.

ಕೋಟ್ :
ಯಲ್ಲಾಪುರ ತಾಲೂಕಿನಲ್ಲಿ ಬಿಜೆಪಿಗೆ ಹಿರಿಯರು ಹಾಕಿಕೊಟ್ಟ ಬುನಾದಿ, ಕಾರ್ಯಕರ್ತರ ಪರಿಶ್ರಮ, ನೇತೃತ್ವ ಮತ್ತು ಬದ್ದತೆಯ ಕಾರಣಕ್ಕೆ ಪಕ್ಷ ಈ ದೊಡ್ಡಮಟ್ಟದ ಲೀಡ್ ಕೊಡಲು ಕಾರಣವಾಗಿದೆ. ಸುಮಾರು 14,000 ಕ್ಕೂ ಹೆಚ್ಚಿನ ಲೀಡನ್ನು ಯಲ್ಲಾಪುರದಲ್ಲಿಯೇ ಗಳಿಸಿದ್ದೇವೆ. ಹಗಲಿರುಳು ದುಡಿದ ಕಾರ್ಯಕರ್ತರಿಗೆ‌ ನಮನಗಳನ್ನು ಸಲ್ಲಿಸುತ್ತೇನೆ. ರಾಜ್ಯದಲ್ಲೇ ಹೆಚ್ಚಿನ ಮತಗಳ (3,37ಲಕ್ಷ) ಅಂತರದಿಂದ ಗೆದ್ದ ಶ್ರೀ ವಿಶ್ವೇಶ್ವರ ಹೆಗಡೆ ಕಾಗೇರಿಯವರಿಗೆ ಮತ್ತು ಕಾರ್ಯಕರ್ತರಿಗೆ ಅಭಿನಂದನೆಗಳು. ಜೈ ಬಿಜೆಪಿ

  • ಪ್ರಸಾದ ಪ್ರಮೋದ ಹೆಗಡೆ, ತಾಲೂಕಾ ಬಿಜೆಪಿ ಅಧ್ಯಕ್ಷರು, ಯಲ್ಲಾಪುರ

ಸಂಘಟನಾತ್ನಕ ಪ್ರಯತ್ನದಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ಬಿಜೆಪಿ ಗೆದ್ದಿದೆ. ಕಾಗೇರಿಯವರ ಸಜ್ಜನ ನಡತೆ, ಕಾರ್ಯಕರ್ತರ ಪರಿಶ್ರಮದ ಕಾರಣಕ್ಕೆ ಪಕ್ಷಕ್ಕೆ ಗೆಲುವಾಗಿದೆ. ಅದರಲ್ಲಿಯೂ ವಿಶೇಷವಾಗಿ ಯಲ್ಲಾಪುರ- ಮುಂಡಗೋಡು ವಿಧಾನಸಭಾ ಕ್ಷೇತ್ರದಲ್ಲಿ 18,000 ಕ್ಕೂ ಅಧಿಕ ಮುನ್ನಡೆ ನೀಡಿರುವುದು ಪಕ್ಷದ ಸಂಘಟನೆ ದೃಷ್ಟಿಯಿಂದ ಒಳ್ಳೆಯ ಬೆಳವಣಿಗೆಯಾಗಿದೆ.– ಜಿ. ಎನ್. ಗಾಂವ್ಕರ್, ಬಿಜೆಪಿ ಪ್ರಮುಖರು, ಯಲ್ಲಾಪುರ

Share This
300x250 AD
300x250 AD
300x250 AD
Back to top