Slide
Slide
Slide
previous arrow
next arrow

ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿ ಹೆಚ್ಚು ನೋಟಾ ಚಲಾವಣೆ

300x250 AD

ಹೊನ್ನಾವರ: ಲೋಕಸಭಾ ಚುನಾವಣೆಯಲ್ಲಿ ಉತ್ತರ ಕನ್ನಡ ಕ್ಷೇತ್ರದಿಂದ ವಿಶ್ವೇಶ್ವರ ಹೆಗಡೆ ಕಾಗೇರಿ ವಿಜಯಶಾಲಿಯಾಗಿ ಹೊರಹೊಮ್ಮಿದ್ದು, ರಾಜ್ಯದಲ್ಲಿಯೇ ಅತಿಹೆಚ್ಚು ಮತಗಳ ಅಂತರದಿಂದ ಗೆದ್ದಿದ್ದಾರೆ.ಕಾರವಾರ- ಅಂಕೋಲಾ ವಿಧಾನಸಭಾ ಕ್ಷೇತ್ರದಿಂದ ಕಾಗೇರಿಗೆ ಅತಿ ಹೆಚ್ಚು ಲೀಡ್ ಕೊಟ್ಟಿದ್ದು, ರೂಪಾಲಿ ನಾಯ್ಕ ಪಾತ್ರ ಎದ್ದು ಕಾಣುತ್ತದೆ.

ಅದರಂತೆಯೇ ಒಟ್ಟೂ ಚಲಾವಣೆಯಾದ ಮತಗಳಲ್ಲಿ 10,176 ಮತಗಳು ನೋಟಾ ಆಗಿದೆ. ವಿಧಾನಸಭಾ ಕ್ಷೇತ್ರಗಳ ಪೈಕಿ ಖಾನಾಪುರ – 823 ಮತ, ಕಿತ್ತೂರು – 1077 ಮತ, ಹಳಿಯಾಳ – 952 ಮತ, ಕಾರವಾರ – 1373, ಕುಮಟಾ – 1706, ಭಟ್ಕಳ – 1252, ಶಿರಸಿ – 2002 ಮತ ಹಾಗು ಯಲ್ಲಾಪುರ-ಮುಂಡಗೋಡು – 966 ಮತಗಳು ನೋಟಾ ಚಲಾವಣೆಯಾಗಿವೆ. ಶಿರಸಿ-ಸಿದ್ದಾಪುರ ವಿಧಾನಸಭಾ ಕ್ಷೇತ್ರದಲ್ಲಿ ಅತಿಹೆಚ್ಚು ನೋಟಾ ದಾಖಲಾಗಿದೆ.

300x250 AD
Share This
300x250 AD
300x250 AD
300x250 AD
Back to top