Slide
Slide
Slide
previous arrow
next arrow

ಶಾಸಕ ಭೀಮಣ್ಣ ಅಭಿವೃದ್ಧಿಯತ್ತ ಗಮನ ಹರಿಸಲಿ; ಮಾರುತಿ ನಾಯ್ಕ

300x250 AD

ಸಿದ್ದಾಪುರ: ರಾಜ್ಯದಲ್ಲಿ ಕಾಂಗ್ರೆಸ್ ಸರಕಾರ ಬಂದ 8 ತಿಂಗಳ ನಂತರದಲ್ಲಿ ತಾಲೂಕಿನಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹೊಸದಾಗಿ 8 ಮೀ.ರಸ್ತೆಯೂ ಆಗಿಲ್ಲ. ಯಾವುದೇ ಇಲಾಖೆಗಳಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಹಿಂದಿನ ಸರಕಾರದಲ್ಲಿ ಮಂಜೂರಿಯಾದ ಕಾಮಗಾರಿಗಳ ಉದ್ಘಾಟನೆ ನಡೆಯುತ್ತಿದೆಯೇ ಹೊರತು ಹೊಸತಾದ ಕಾಮಗಾರಿಗಳಿಗೆ ಭೂಮಿಪೂಜೆ ನಡೆದಿಲ್ಲ ಎಂದು ಬಿಜೆಪಿ ಮಂಡಲ ಅಧ್ಯಕ್ಷ ಮಾರುತಿ ನಾಯ್ಕ ಹೊಸೂರು ಆರೋಪಿಸಿದರು.
ಅವರು ಬಿಜೆಪಿ ಮಂಡಲ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ಕ್ಷೇತ್ರದ ಶಾಸಕರಾದ ಭೀಮಣ್ಣ ನಾಯ್ಕ ಈ ಬಗ್ಗೆ ಮೌನವಾಗಿದ್ದಾರೆ. ಅವರ ಒಳ್ಳೆಯತನ, ಶಾಂತ ಸ್ವಭಾವ ಅನುದಾನ ತರುವಲ್ಲಿ ಉಪಯೋಗಕ್ಕೆ ಬರುವದಿಲ್ಲ. ಅವರು ಮುಖ್ಯಮಂತ್ರಿಗಳ, ಮಂತ್ರಿಗಳ ಬಳಿ ಗಟ್ಟಿಯಾಗಿ ಧ್ವನಿ ಎತ್ತಬೇಕು. ಶಾಸಕರು ಅಭಿವೃದ್ಧಿ ಕಾರ್ಯಗಳ ಬಗ್ಗೆ ಗಮನ ಹರಿಸಬೇಕು ಎಂದರು.

ಗ್ರಾಮೀಣ ಭಾಗದ ಅತಿಕ್ರಮಣದಾರರಿಗೆ ಮನೆ ನೀಡುವಲ್ಲಿ ಹಿಂದಿನ ಶಾಸಕರಾದ ವಿಶ್ವೇಶ್ವರ ಹೆಗಡೆ ಗಮನಹರಿಸಿದ್ದರು. ಇದರಿಂದ ಬಡವರಿಗೆ ಅನುಕೂಲವಾಗುತ್ತದೆ.ವಸತಿ ಯೋಜನೆಯಲ್ಲಿ ಅರ್ಜಿ ಸಲ್ಲಿಸಲು ಆರ್.ಟಿ.ಸಿ. ಕೇಳುತ್ತಿದ್ದು ಇದರಿಂದ ಹಲವು ವಸತಿರಹಿತರಿಗೆ ಅನ್ಯಾಯವಾಗುತ್ತಿದೆ. ಮನೆ ನಂಬರ್ ಮೂಲಕ ವಸತಿ ನೀಡುವ ಕ್ರಮವಾಗಬೇಕು. ಲಿಂಗನಮಕ್ಕಿಯಿಂದ ಪಟ್ಟಣಕ್ಕೆ ನೀರು ತರುವ ಯೋಜನೆಗೆ ಹಿಂದಿನ ಸರಕಾರ ಕ್ರಮವಹಿಸಿತ್ತು. ಈಗ ಅದು ಕೈ ಬಿಟ್ಟ ಲಕ್ಷಣ ಕಾಣಿಸುತ್ತಿದ್ದು ಬೇಸಿಗೆಯಲ್ಲಿ ನೀರಿನ ಕ್ಷಾಮ ಕಾಣಿಸಿಕೊಳ್ಳಲಿದೆ. ಕಾಂಗ್ರೆಸ್ ಪಕ್ಷ ಕಳೆದ ವಿಧಾನಸಭಾ ಚುನಾವಣೆಯಲ್ಲಿ ನೀರು ಪೂರೈಸುವ ಭರವಸೆ ನೀಡಿತ್ತು. ಶಾಸಕರು ಕುಡಿಯುವ ನೀರಿನ ಶಾಶ್ವತ ಪರಿಹಾರಕ್ಕೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ದೇವಸ್ಥಾನಗಳಿಗೆ ಹಿಂದಿನ ಸರಕಾರದಲ್ಲಿ ಮಂಜೂರಿಯಾಗಿದ್ದ 85 ಲಕ್ಷ ರೂ.ಹಣ ಈವರೆಗೆ ಬಿಡುಗಡೆಯಾಗಿಲ್ಲ. ಪಟ್ಟಣ ಪಂಚಾಯತಕ್ಕೆ 3 ಕೋಟಿ ರೂ.ವಿಶೇಷ ಅನುದಾನ ಮಂಜೂರಿಯನ್ನು ಹಿಂದಿನ ಬಿಜೆಪಿ ಸರಕಾರ ಮಾಡಿತ್ತು. ಅದು ಸ್ಥಗಿತವಾಗಿದೆ. ಎಸ್.ಸಿ., ಎಸ್.ಟಿ. ಕಾಲೋನಿ ಅಭಿವೃದ್ಧಿಗೆ ಬರಬೇಕಿದ್ದ ಅನುದಾನವೂ ಬಂದಿಲ್ಲ. ಶಾಸಕ ಭೀಮಣ್ಣ ನಾಯ್ಕ ಈ ಬಗ್ಗೆ ಗಮನಹರಿಸಬೇಕು ಎಂದರು.
ಸುದ್ದಿಗೋಷ್ಟಿಯಲ್ಲಿ ಪ.ಪಂ ಸದಸ್ಯ ಗುರುರಾಜ ಶಾನಭಾಗ, ನಂದನ ಬರ‍್ಕರ್, ರಾಘವೇಂದ್ರ ನಾಯ್ಕ, ಸುರೇಶ ಬಾಲಿಕೊಪ್ಪ, ಮಂಜುನಾಥ ಭಟ್, ತೋಟಪ್ಪ ನಾಯ್ಕ, ರಾಜೇಂದ್ರ ಕಿಂದ್ರಿ, ರೋಹಿದಾಸ ಮಡಿವಾಳ, ವಿಜಯೇಂದ್ರ ಗೌಡರ್ ಮುಂತಾದವರಿದ್ದರು.

300x250 AD
Share This
300x250 AD
300x250 AD
300x250 AD
Back to top