ಸಿದ್ದಾಪುರ: ಕಳೆದ ವರ್ಷದಿಂದ ಆರಂಭಿಸಲಾಗಿದ್ದ ಸಿದ್ದಾಪುರ ಉತ್ಸವವನ್ನು ಫೆ.17ರಂದು ಪಟ್ಟಣದ ನೆಹರೂ ಮೈದಾನದಲ್ಲಿ ನಡೆಸಲು ಉದ್ದೇಶಿಸಲಾಗಿದ್ದು ಈ ಕುರಿತಂತೆ ವಿವಿಧ ಸಮಿತಿಗಳಿಗೆ ಪದಾಧಿಕಾರಿಗಳ ನೇಮಕ ನಡೆದಿದ್ದು ವಿಜೃಂಭಣೆಯಿಂದ ಆಚರಿಸಲು ಸಿದ್ಧತೆಗಳು ನಡೆದಿವೆ ಎಂದು ಪಪಂ ಸದಸ್ಯ, ಉತ್ಸವ ಅಧ್ಯಕ್ಷ ಕೆ.ಜಿ.ನಾಯ್ಕ ಹಣಜೀಬೈಲ್ ತಿಳಿಸಿದರು.
ಅವರು ಪಟ್ಟಣದ ಗಂಗಾಂಬಿಕಾ ದೇವಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ವಿವರ ನೀಡುತ್ತಾ ಪ್ರಕೃತಿ ವಿಕೋಪದ ಹಿನ್ನೆಲೆಯಲ್ಲಿ ಮೂರು ದಿನಗಳ ಬದಲಾಗಿ ಈ ಬಾರಿ ಒಂದು ದಿನ ಉತ್ಸವ ನಡೆಸಲು ತೀರ್ಮಾನಿಸಲಾಗಿದೆ. ಅಂದು ಬೆಳಿಗ್ಗೆ 8 ಗಂಟೆಯಿಂದ ಪುರುಷರ ಮತ್ತು ಮಹಿಳೆಯರ ವಿವಿಧ ಕ್ರೀಡಾ ಸ್ಪರ್ಧಾ ಕಾರ್ಯಕ್ರಮಗಳು ನಡೆಯಲಿವೆ. ಸಂಜೆ 6ರಿಂದ ಪ್ರಸಿದ್ಧ ಜಾದೂಗಾರ ಸತೀಶ ಹೆಮ್ಮಾಡಿಯವರಿಂದ ಜಾದೂ ಪ್ರದರ್ಶನ ನಡೆಯುವದು. ರಾತ್ರಿ 8 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು ಈ ಸಂದರ್ಭದಲ್ಲಿ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ ಹಾಗೂ ವಿವಿಧ ಕ್ಷೇತ್ರಗಳಲ್ಲಿ ಪಾರಂಪಾರಿಕವಾಗಿ ಕಾರ್ಯನಿರ್ವಹಿಸುತ್ತ ಬಂದಿರುವ 25 ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯುವದು. ಈ ಸಂದರ್ಭದಲ್ಲಿ ಸಂಸದ ಅನಂತಕುಮಾರ ಹೆಗಡೆ, ಶಾಸಕ ಭೀಮಣ್ಣ ನಾಯ್ಕ, ಶಿ.ಪ್ರ.ಸಮಿತಿ ಉಪಾಧ್ಯಕ್ಷ ಶಶಿಭೂಷಣ ಹೆಗಡೆ ದೊಡ್ಮನೆ, ಜೀವಜಲ ಕಾರ್ಯಪಡೆ ಅಧ್ಯಕ್ಷ ಶ್ರೀನಿವಾಸ ಹೆಬ್ಬಾರ ಮುಂತಾದವರು ಅತಿಥಿಗಳಾಗಿ ಉಪಸ್ಥಿತರಿರುವರು. ನಂತರ ಹೊರಭಾಗದ ಕಲಾವಿದರುಗಳಿಂದ ವಿವಿಧ ಮನರಂಜನಾ ಕಾರ್ಯಕ್ರಮಗಳು ಜರುಗುವುದು ಎಂದರು.
ತಾಲೂಕಿನ ಎಲ್ಲರಿಗೂ ಸ್ಪರ್ಧಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಅವಕಾಶವಿದೆ. ಮುಂದಿನ ವರ್ಷಗಳಲ್ಲಿ ಕೊಂಡ್ಲಿ ಜಾತ್ರೆ ಇರುವ ವರ್ಷವನ್ನು ಹೊರತುಪಡಿಸಿ ಉಳಿದೆಲ್ಲ ವರ್ಷಗಳಲ್ಲಿ ಉತ್ಸವವನ್ನು ನಡೆಸಲಾಗುವದು. ಉತ್ಸವ ಸಮಿತಿಯ ಅಧ್ಯಕ್ಷರಾಗಿ ಕೆ.ಜಿ.ನಾಯ್ಕ ಹಣಜೀಬೈಲ್, ಕಾರ್ಯಾಧ್ಯಕ್ಷರಾಗಿ ವಿಜಯ ಡಿ.ಪ್ರಭು, ಸತೀಶ ಹೆಗಡೆ ಬೈಲಳ್ಳಿ, ಉಪಾದ್ಯಕ್ಷರಾಗಿ ನಾಗರಾಜ ನಾಯ್ಕ ಬೇಡ್ಕಣಿ, ಅಂಥೋನಿ ಕುಂಜುನಾಥ, ಅನಿಲ ದೇವನಳ್ಳಿ, ರವಿ ಐ.ನಾಯ್ಕ, ಮಂಜುನಾಥ ನಾಯ್ಕ ತ್ಯಾರ್ಸಿ, ಕೃಷ್ಣಮೂರ್ತಿ ಮಡಿವಾಳ ಕಡಕೇರಿ, ಪ್ರಧಾನ ಕಾರ್ಯದರ್ಶಿಗಳಾಗಿ ಎಸ್.ಕೆ.ಮೇಸ್ತ, ಹರೀಶ ಗೌಡರ್, ಎಚ್.ಕೆ.ಶಿವಾನಂದ, ರವಿಕುಮಾರ ನಾಯ್ಕ, ವಿನಾಯಕ ನಾಯ್ಕ ಕೊಂಡ್ಲಿ, ಪ್ರವೀಣ ನಾಯ್ಕ ವಾಟಗಾರ, ಕೋಶಾಧ್ಯಕ್ಷರಾಗಿ ವಿನಯ ಹೊನ್ನೆಗುಂಡಿ, ಕಾರ್ಯದರ್ಶಿಗಳಾಗಿ ಕೆ.ಆರ್.ವಿಆಯಕ, ಶ್ರೀಧರ ನಾಯ್ಕ, ಚೌಡ ಗೌಡ, ಶ್ರವಣ ಕುಮಾರ ಹೊಸೂರು, ರಫೀಕ್ ಸಾಬ್, ರಾಘವೇಂದ್ರ ರಾಯ್ಕರ್ ಮುಂತಾದವರಿದ್ದಾರೆ ಎಂದು ಕೆ.ಜಿ.ನಾಯ್ಕ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ವಿನಯ ಹೊನ್ನೆಗುಂಡಿ, ಸುಧೀರ ಕೊಂಡ್ಲಿ, ವೀರಭದ್ರ ನಾಯ್ಕ ವಿನಾಯಕ ಕೊಂಡ್ಲಿ ಮುಂತಾದವರಿದ್ದರು.