Slide
Slide
Slide
previous arrow
next arrow

ಕರಾಟೆ ಸ್ಪರ್ಧೆ: ಚಂದನ ವಿದ್ಯಾರ್ಥಿಗಳು ರಾಜ್ಯಮಟ್ಟಕ್ಕೆ ಆಯ್ಕೆ

300x250 AD

ಶಿರಸಿ: ಇಲ್ಲಿನ ಮಾರಿಕಾಂಬಾ ಪ್ರೌಢಶಾಲೆಯಲ್ಲಿ ಉಪನಿರ್ದೇಶಕರ ಕಾರ್ಯಾಲಯ ,ಶಾಲಾ ಶಿಕ್ಷಣ ಇಲಾಖೆ ಶಿರಸಿ ಶೈಕ್ಷಣಿಕ ಜಿಲ್ಲೆ ,ರಾಠೋಡ ಮಾರ್ಷಲ್ ಆರ್ಟ್ಸ ಆಂಡ್ ಸಿಲ್ಕ್ಯೂನಿಯನ್ ಉ.ಕ ,ಅಕ್ವಾ ರಾ ಕೊಂಬಾಟ್ ಬುಡೋಕಾನ್ ಕರಾಟೆ ಅಕಾಡೆಮಿ, ದಾಂಡೇಲಿ ಇವರು ಪ್ರಾಥಮಿಕ ಮತ್ತು ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ನ.10ರಂದು ನಡೆಸಿದ್ದ ಜಿಲ್ಲಾ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಮಿಯಾರ್ಡ್ಸ ಚಂದನ ಆಂಗ್ಲ ಮಾಧ್ಯಮ ಶಾಲೆ ನರೇಬೈಲ್ ನ ವಿದ್ಯಾರ್ಥಿಗಳು ಭಾಗವಹಿಸಿ ಗಮನಾರ್ಹ ಸಾಧನೆ ಮಾಡಿದ್ದಾರೆ.

8 ನೇ ತರಗತಿಯ ಕೆ. ಎಸ್. ಜೀವನ್ ಮತ್ತು 6 ನೇ ತರಗತಿಯ ಸಾಧನಾ ಗೌಡ ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 10ನೇ ವರ್ಗದ ಸಿಂಚನಾ ಹೆಗಡೆ, ಪ್ರತೀಕ್ ಭಟ್, 7 ನೇ ವರ್ಗದ ಕಿಶನ್ ಗೌಳಿ ದ್ವಿತೀಯ ಸ್ಥಾನ ಪಡೆದಿದ್ದು, 8ನೇ ವರ್ಗದ ಸಾಧನಾ ಆಚಾರಿ ತೃತೀಯ ಸ್ಥಾನ ಪಡೆದಿದ್ದಾರೆ. ಇವರ ಸಾಧನೆಗೆ ಆಡಳಿತ ಮಂಡಳಿ,ಶಿಕ್ಷಕರು,ಪಾಲಕರು ಹರ್ಷವ್ಯಕ್ತಪಡಿಸಿ ಮುಂದಿನ ಹಂತಕ್ಕೆ ಶುಭ ಹಾರೈಸಿದ್ದಾರೆ.

300x250 AD
Share This
300x250 AD
300x250 AD
300x250 AD
Back to top