ಕುಮಟಾ: ಇಲ್ಲಿನ ಕೊಂಕಣ ಎಜ್ಯುಕೇಶನ ಟ್ರಸ್ಟಿನ ಸಿ.ವಿ.ಎಸ್.ಕೆ. ಪ್ರೌಢಶಾಲೆಯಲ್ಲಿ ಕಾನೂನು ಸೇವಾ ಪ್ರಾಧಿಕಾರ ದಿನಾಚರಣೆಯ ನಿಮಿತ್ತ ಕುಮಟಾದ ಸಿವಿಲ್ ನ್ಯಾಯಾಧೀಶರು ಮತ್ತು ಪ್ರಥಮ ದರ್ಜೆಯ ನ್ಯಾಯಿಕ ದಂಡಾಧಿಕಾರಿಗಳಾದ ಶ್ರೀಮತಿ ಭಾಮಿನಿಯವರು ಆಗಮಿಸಿ ವಿದ್ಯಾರ್ಥಿಗಳಿಗೆ ಕಾನೂನಿನ ಕುರಿತು ಮಾಹಿತಿ ನೀಡಿದರು.
ಭಾರತದ ಪ್ರಜೆಗಳಾದ ಇಂದಿನ ವಿದ್ಯಾರ್ಥಿಗಳಿಗೆ ಕಾನೂನು ಕುರಿತು ಜ್ಞಾನ ಅತೀ ಅವಶ್ಯ, ಅಬಾಲವೃದ್ಧರವರೆಗೆ ಎಲ್ಲರು ಕಾನೂನನ್ನು ಪಾಲಿಸುವುದು, ಗೌರವಿಸುವುದು ಅನಿವಾರ್ಯ. ಸರಿ – ತಪ್ಪುಗಳ ಅರಿವು ಉಂಟಾಗಲು ಸತ್ಯ- ಪ್ರಾಮಾಣಿಕತೆಯನ್ನು ವಿದ್ಯಾರ್ಥಿ ದೆಸೆಯಿಂದಲೇ ಬೆಳೆಸಿಕೊಳ್ಳಿ ಎಂದು ಕರೆ ನೀಡಿದರು.ಶಿಕ್ಷಕ ಶಿವಾನಂದ ಭಟ್ಟ ಸ್ವಾಗತಿಸಿ ಕಾನೂನು ಸೇವಾದಿನಾಚರಣೆಯ ಕುರಿತು ಪ್ರಸ್ತಾವಿಕ ಮಾತುಗಳನ್ನಾಡಿದರು. ವೇದಿಕೆಯಲ್ಲಿ ರಾಜೇಶ ಎಚ್.ಜಿ., ಚಿದಾನಂದ ಭಂಡಾರಿ, ಶ್ರೀಮತಿ ವಿನಯಾ ನಾಯಕ ಉಪಸ್ಥಿತರಿದ್ದರು. ಶಿಕ್ಷಕ ಆದರ್ಶ ರೇವಣಕರ್ ನಿರೂಪಿಸಿದರೆ, ಸೃಜನಾ ನಾಯಕ ಪ್ರಾರ್ಥಿಸಿದರು.