Slide
Slide
Slide
previous arrow
next arrow

ಈಶ್ವರಪ್ಪ ಹೇಳಿಕೆಗೆ ಮಂಕಾಳ ವೈದ್ಯ ತಿರುಗೇಟು

300x250 AD

ಕಾರವಾರ: ಈಶ್ವರಪ್ಪನವರಿಗೆ ಮೊದಲು ವಿರೋಧ ಪಕ್ಷದ ನಾಯಕರನ್ನು ಆಯ್ಕೆ ಮಾಡಲು ಹೇಳಿ. ಅವರ ಯೋಗ್ಯತೆಗೆ ವಿರೋಧ ಪಕ್ಷದ ನಾಯಕರನ್ನು ಮಾಡಲು ಆಗಿಲ್ಲ. ಅವರು ಏನು ನಮಗೆ ಬುದ್ದಿ ಹೇಳುವುದು ಎಂದು ಸಚಿವ ಮಂಕಾಳ ವೈದ್ಯ ಕಿಡಿಕಾರಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಈಶ್ವರಪ್ಪ ಅವರು ಕಾಂಗ್ರೆಸ್ ಸರ್ಕಾರ ರಾಜ್ಯದಲ್ಲಿ ಇರುವುದಿಲ್ಲ ಎನ್ನುವ ಹೇಳಿಕೆಗೆ ತಿರುಗೇಟು ನೀಡಿದರು. ಈಶ್ವರಪ್ಪ ಅವರ ಹೆಸರು ಹೇಳಿ ಉಡುಪಿಗೆ ಬಂದು ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಂಡರು. ಅವರು ಎಷ್ಟು ಹೊತ್ತಿಗೆ ಏನು ಮಾತಾಡ್ತಾರೆ ಅವರಿಗೆ ಗೊತ್ತಿರಲ್ಲ. ಅವರು ಐದು ವರ್ಷ ಅವರ ಪಕ್ಷದ ವಿರುದ್ಧವೇ ಮಾತನಾಡಿದವರು. ಯಾರಾದರು ಒಳ್ಳೆಯವರು ಮಾತನಾಡಿದರೇ ಮಾತನಾಡಬಹುದು ಎಂದು ಕಿಡಿಕಾರಿದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಐದು ವರ್ಷ ನಾನೇ ಸಿಎಂ ಎನ್ನುವ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಮುಖ್ಯಮಂತ್ರಿ ಯಾರಾಗುತ್ತಾರೆ, ಎಷ್ಟು ವರ್ಷ ಆಗುತ್ತಾರೆ ಎನ್ನುವ ವಿಚಾರವನ್ನು ಹೈಕಮಾಂಡ್ ನಿರ್ಧರಿಸಲಿದೆ. ನಮ್ಮ ಪಕ್ಷಕ್ಕೆ 136 ಸ್ಥಾನದಲ್ಲಿ ಗೆಲ್ಲಿಸಿ ಐದು ವರ್ಷ ಅಧಿಕಾರ ನಡೆಸಲು ಜನರು ಅವಕಾಶ ಮಾಡಿಕೊಟ್ಟಿದ್ದಾರೆ. ಸಿಎಂ ಯಾರನ್ನು ಯಾವಾಗ ಮಾಡುತ್ತಾರೆ ಎನ್ನುವ ವಿಚಾರ ಹೈಕಮಾಂಡ್‌ಗೆ ಬಿಟ್ಟದ್ದು ಎಂದಿದ್ದಾರೆ. ಮಾಜಿ ಮುಖ್ಯಮಂತ್ರಿ, ಬಿಜೆಪಿ ಮುಖಂಡ ಎಸ್.ಎಂ.ಕೃಷ್ಣ ಸಿದ್ದರಾಮಯ್ಯ ನಾನೇ ಸಿಎಂ ಎನ್ನುವ ಹೇಳಿಕೆಗೆ ಟೀಕೆ ಮಾಡಿರುವ ಕುರಿತು ಪ್ರತಿಕ್ರಿಯಿಸಿದ ಅವರು, ಎಸ್.ಎಂ.ಕೃಷ್ಣ ಅವರಿಗೆ ಕಾಂಗ್ರೆಸ್ ತವರು ಮನೆ ಇದ್ದಂತೆ. ನಮ್ಮ ಪಕ್ಷದಲ್ಲೇ ಇದ್ದು ಸಿಎಂ ಆದವರು. ಅವರ ಮೇಲೆ ತನಗೆ ಗೌರವವಿದೆ. ಅವರ ಅನುಭವದ ಮೇಲೆ ಸಲಹೆಯನ್ನ ನೀಡಿದ್ದು ತಪ್ಪು ತಿಳಿದುಕೊಳ್ಳುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ. ಮುಖ್ಯಮಂತ್ರಿಗಳ ಬ್ರೇಕ್ ಫಾಸ್ಟ್ ಮೀಟಿಂಗ್ನಲ್ಲಿ ಏನು ವಿಶೇಷ ಇಲ್ಲ. ನಮಗೂ ಆಹ್ವಾನ ನೀಡಿದ್ದರು. ಆದರೆ ಕೆಡಿಪಿ ಸಭೆ ಹಿನ್ನಲೆಯಲ್ಲಿ ಹೋಗಲು ಆಗಲಿಲ್ಲ ಎಂದು ಮಂಕಾಳ ವೈದ್ಯ ಹೇಳಿದ್ದಾರೆ.

300x250 AD

Share This
300x250 AD
300x250 AD
300x250 AD
Back to top