Slide
Slide
Slide
previous arrow
next arrow

e – ಉತ್ತರ ಕನ್ನಡ ಪ್ರತಿದಿನ ಪಿಡಿಎಫ್ ರೂಪದಲ್ಲಿಯೂ ಬರಲಿದೆ

300x250 AD

ಸಹೃದಯೀ ಓದುಗ ಮಿತ್ರರೇ,

ಕಳೆದ 6 ವರ್ಷಗಳಿಂದ ನಮ್ಮ ಹೆಮ್ಮೆಯ ಉತ್ತರ ಕನ್ನಡ ಜಿಲ್ಲೆಯ ಆಗು-ಹೋಗುಗಳನ್ನು ಡಿಜಿಟಲ್ ವೇದಿಕೆಯಲ್ಲಿ ಅಪ್ಲಿಕೇಷನ್, ವೆಬ್ಸೈಟ್ ಮೂಲಕ ಸುದ್ದಿರೂಪದಲ್ಲಿ ನೀಡುತ್ತಾ ಬಂದಿರುವ ”e – ಉತ್ತರ ಕನ್ನಡ” ಓದುಗರ ಒತ್ತಾಸೆ ಕಾರಣಕ್ಕೆ ದಿನಪತ್ರಿಕೆ ಮಾದರಿಯಲ್ಲಿ ಪಿಡಿಎಫ್ ರೂಪದಲ್ಲಿ ಪ್ರತಿದಿನ ಪ್ರಕಟಗೊಳ್ಳಲಿದೆ.

ನಮ್ಮ ಈ ಹಿಂದಿನ ಎಲ್ಲ ಕಿರು ಹೆಜ್ಜೆಗಳಿಗೆ ಓದುಗ ಬಂಧುಗಳ ಅತ್ಯಮೂಲ್ಯ ಸಹಕಾರ, ವಿಶ್ವಾಸವೇ ಕಾರಣ. ಬರೆದ ಅಕ್ಷರಕ್ಕೆ ಜೀವ ನೀಡುವ ಓದುಗ ಮಿತ್ರರಿಲ್ಲದೇ ಯಾವ ಸಾಧನೆಯೂ ಸಾಧ್ಯವಿಲ್ಲ ಎಂಬುದು ನಮಗೆ ಅರಿವಿದೆ.

300x250 AD

“e – ಉತ್ತರ ಕನ್ನಡ” ನ್ಯೂಸ್ ಅಪ್ಲಿಕೇಷನ್ 46,000 ಕ್ಕೂ ಅಧಿಕ ಜನರಿಂದ ಡೌನ್‌ಲೋಡ್ ಆಗಿದ್ದು, ವಾಟ್ಸಪ್ ಅಡ್ಮಿನ್ ಓನ್ಲಿ ಗ್ರುಪ್ ಮೂಲಕ 15,000ಕ್ಕೂ ಅಧಿಕ ಓದುಗರನ್ನು ಪ್ರತಿ ನಿತ್ಯ ತಲುಪುತ್ತಿದೆ. ಇದರ ಜೊತೆಗೆ ಇಂದಿನಿಂದ ಪಿಡಿಎಫ್ ಮಾದರಿಯಲ್ಲಿಯೂ ಸಹ ಪ್ರಕಟಗೊಳ್ಳುತ್ತಿದೆ. ಓದುಗರ ಅಭಿರುಚಿ ತಕ್ಕಂತೆ ನವೀನ ಪ್ರಯೋಗಗಳನ್ನು ಮಾಡುವ ಅಭಿಲಾಷೆ ನಮ್ಮದು.

ನಮ್ಮ ಎಲ್ಲ ಕೆಲಸಗಳಿಗೆ ಸದಾ ಬೆನ್ನುಲುಬಾಗಿ ನಿಂತಿರುವ ಎಲ್ಲ ಸಹೃದಯೀ ಓದುಗರಿಗೆ, ಜಾಹೀರಾತುದಾರರಿಗೆ, ಹಿತೈಷಿಗಳಿಗೆ ಮನದಾಳದ ಅನಂತಾನಂತ ಕೃತಜ್ಞತೆ ಸಲ್ಲಿಸುತ್ತೇವೆ. ಸಾಧನೆಗೆ ಹೆಜ್ಜೆ ಜೊತೆಯಾಗಲಿ.. ರಾಷ್ಟ್ರ ಕಲ್ಯಾಣ ಕಾರ್ಯಕ್ಕೆ ಸದಾ ಸಿದ್ಧರಿರೋಣ..

  • ಸಂ
Share This
300x250 AD
300x250 AD
300x250 AD
Back to top