Slide
Slide
Slide
previous arrow
next arrow

ಚೆಕ್‌ಬೌನ್ಸ್ ಪ್ರಕರಣ; ಆರೋಪಿಗೆ 1.39 ಲಕ್ಷ ರೂ. ದಂಡ

300x250 AD

ಹೊನ್ನಾವರ: ಪಟ್ಟಣದ ಪಿಎಲ್‌ಡಿ ಬ್ಯಾಂಕ್‌ನಲ್ಲಿ ಪಡೆದ ಸಾಲಮರುಪಾವತಿ ಸಮಯದ ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ಜೆಎಮ್‌ಎಫ್‌ಸಿ ನ್ಯಾಯಾಲಯವು ತೀರ್ಪು ನೀಡಿದೆ.

ಹೊನ್ನಾವರ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ನಿಯಮಿತದಲ್ಲಿ ಸಾಲಗಾರರಾದ ತುಳಸಿನಗರದ ವೆಂಕಟೇಶ ಮೇಸ್ತ ಇವರ ವಿರುದ್ಧ ಸಾಲದ ಮರುಪಾವತಿಗಾಗಿ ದಾಖಲಿಸಿದ್ದ ಚೆಕ್‌ಬೌನ್ಸ್ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಧೀಶ ಚಂದ್ರಶೇಖರ ಭಣಕಾರ ತೀರ್ಪು ನೀಡಿದ್ದಾರೆ.

300x250 AD

ಆರೋಪಿಗೆ 1.39 ಲಕ್ಷ ರೂ. ದಂಡ ಪಾವತಿಗೆ ಆದೇಶಿಸಿರುವ ಅವರು, ದಂಡ ತಪ್ಪಿದ್ದಲ್ಲಿ 6 ತಿಂಗಳ ಜೈಲುವಾಸ ಶಿಕ್ಷೆ ನೀಡಿ ತೀರ್ಪು ನೀಡಿದ್ದಾರೆ. ಪ್ರಕರಣದಲ್ಲಿ ಬ್ಯಾಂಕಿನ ಪರವಾಗಿ ವಕೀಲ ಜಿ.ಎಸ್.ಹೆಗಡೆ ಮತ್ತು ಎ.ಆರ್.ನಾಯ್ಕ ವಾದಿಸಿದ್ದರು

Share This
300x250 AD
300x250 AD
300x250 AD
Back to top