Slide
Slide
Slide
previous arrow
next arrow

ಪದವಿ ಫಲಿತಾಂಶ: ಎಸ್‌ಜಿಎಸ್ ಕಾಲೇಜು ವಿದ್ಯಾರ್ಥಿಗಳ ಸಾಧನೆ

300x250 AD

ಭಟ್ಕಳ: ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ನಡೆಸಿದ ಅಂತಿಮ ವರ್ಷದ 6ನೇ ಸೆಮಿಸ್ಟರ್ ಪರೀಕ್ಷೆಯಲ್ಲಿ ಶ್ರೀಗುರು ಸುಧೀಂದ್ರ ಕಾಲೇಜಿನ ಬಿಸಿಎ, ಬಿಕಾಂ, ಬಿಬಿಎನಲ್ಲಿ ಅನುಕ್ರಮವಾಗಿ ಶೇ 100, ಶೇ 98.50, ಶೇ 96 ಫಲಿತಾಂಶ ಪಡೆದು ಸಾಧನೆಗೈಯುವ ಮೂಲಕ ಕಾಲೇಜಿಗೆ ಕೀರ್ತಿ ತಂದಿದ್ದಾರೆ.

ಬಿಸಿಎ ವಿಭಾಗದ ವೀಣಾ ಪಟಗಾರ ಶೇ 95.40 ಪ್ರಥಮ, ದೀಕ್ಷಾ ಖಾರ್ವಿ ಶೇ 94.60 ದ್ವಿತೀಯ, ಆದಿತ್ಯ ನಾಯ್ಕ, ಕವನಾ ಭಟ್ಟ, ರಕ್ಷಾ ಫಾಯದೇ ಶೇ 94 ತೃತಿಯ ಸ್ಥಾನ ಗಳಿಸಿದ್ದಾರೆ. ಬಿಕಾಂ ವಿಭಾಗದ ರಂಜಿತಾ ಭಟ್ಟ ಶೇ 97.14 ಪ್ರಥಮ, ರಂಜಿತಾ ನಾಯ್ಕ ಶೇ 95.57 ದ್ವಿತೀಯ, ಗಜೇಂದ್ರ ನಾಯ್ಕ ಶೇ 95.00 ತೃತಿಯ ಸ್ಥಾನ ಗಳಿಸಿದ್ದಾರೆ. ಬಿಬಿಎ ವಿಭಾಗದ ವೃಂದಾ ಜೋಗಿ ಶೇ 93.67 ಪ್ರಥಮ, ಎಲ್ವಿಯಾ ಡಿಸೋಜಾ ಶೇ 93.33 ದ್ವಿತೀಯ, ನಿಶಾ ಮಚಾಡೋ ಶೇ 89.83 ತೃತಿಯ ಸ್ಥಾನ ಗಳಿಸಿದ್ದಾರೆ.

300x250 AD

ಈ ಸಾಧನೆಗೆ ಭಟ್ಕಳ ಎಜುಕೇಶನ್ ಟ್ರಸ್ಟ್ನ ಅಧ್ಯಕ್ಷ ಡಾ.ಸುರೇಶ ನಾಯಕ, ಮ್ಯಾನೇಜಿಂಗ್ ಟ್ರಸ್ಟಿ ಶ್ರೀ ರವೀಂದ್ರ ಕೊಲ್ಲೆ, ಟ್ರಸ್ಟಿ ಮ್ಯಾನೇಜರ್ ಶ್ರೀ ರಾಜೇಶ ಬಿ ನಾಯಕ, ಟ್ರಸ್ಟಿಗಳು, ಪ್ರಾಂಶುಪಾಲರು, ಉಪಪ್ರಾಂಶುಪಾಲರು, ಉಪನ್ಯಾಸಕರು ಹಾಗೂ ಸಿಬ್ಬಂದಿಗಳು ಅಭಿನಂದಿಸಿದ್ದಾರೆ.

Share This
300x250 AD
300x250 AD
300x250 AD
Back to top