ಭಟ್ಕಳ: 18 ದಿನಗಳ ಮಹಾಭಾರತದ ಯುದ್ಧದಲ್ಲಿ ಶ್ರೀಕೃಷ್ಣನು ಭಗವದ್ಗೀತೆಯನ್ನು ಬೋಧಿಸಿದನು. ಧರ್ಮಪಾಲನೆ ಮಾಡುವ ಪಾಂಡವರನ್ನು ತನ್ನ ಪ್ರಾಣವೇ ಎಂದು ರಕ್ಷಣೆ ಮಾಡಿದನು. ಭಗವದ್ಗೀತೆಯು ವಿದ್ಯಾರ್ಥಿಗಳಲ್ಲಿ ಜ್ಞಾನ, ವಿವೇಕ, ಕೌಶಲ್ಯ ಮತ್ತು ಸ್ಪರ್ಧಾತ್ಮಕ ಮನೋಭಾವನೆಯನ್ನು ಬೆಳೆಸುವಲ್ಲಿ ಈಗಿನ ಯುವಪೀಳಿಗೆಗೆ ಈ ಸ್ಪರ್ಧೆ ಉಪಯುಕ್ತವಾಗಿದೆ ಎಂದು ಗಜಾನನ ಗಣಪತಿ ಕೊಲ್ಲೆರಾಯ್ಕರ ಫೌಂಡೇಶನ್‌ನ ಮುಖ್ಯಸ್ಥ ಆರ್.ಜಿ.ಕೊಲ್ಲೆ ಹೇಳಿದರು.
ಅವರು ಭಟ್ಕಳ ಎಜುಕೇಶನ್ ಟ್ರಸ್ಟ್ ಮತ್ತು ಗಜಾನನ ಗಣಪತಿ ಕೊಲ್ಲೆ ರಾಯ್ಕರ ಫೌಂಡೇಶನ್ ಸಹಯೋಗದಲ್ಲಿ ಭಟ್ಕಳ, ಹೊನ್ನಾವರ ಮತ್ತು ಬೈಂದೂರು ತಾಲೂಕಿನ ಆಯ್ದ ಸರ್ಕಾರಿ, ಅನುದಾನಿತ ಮತ್ತು ಅನುದಾನರಹಿತ ಹಿರಿಯ ಪ್ರಾಥಮಿಕ, ಪ್ರೌಢಶಾಲೆ, ಪದವಿಪೂರ್ವ ಮತ್ತು ಕರಾವಳಿ ಭಾಗದ ಶಿಕ್ಷಣ ಮಹಾವಿದ್ಯಾಲಯಗಳ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ 3 ನೇ ವರ್ಷದ ‘ಭಗವದ್ಗೀತಾ ಕಂಠಪಾಠ ಸ್ಪರ್ಧೆ’ಯ ಬಹುಮಾನ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಭಟ್ಕಳ ಎಜುಕೇಶನ್ ಟ್ರಸ್ಟಿನ ಟ್ರಸ್ಟಿ ಮ್ಯಾನೇಜರ್ ರಾಜೇಶ ನಾಯಕ, ಪಾಶ್ಚಿಮಾತ್ಯ ಸಂಸ್ಕೃತಿಯಅನುಕರಣೆಯಲ್ಲಿ ನಮ್ಮ ಸಂಸ್ಕಾರ ಮತ್ತ ಸಂಸ್ಕೃತಿಯನ್ನು ಮರೆಯುತ್ತಿರುವ ಇಂದಿನ ವಿದ್ಯಾರ್ಥಿಗಳಲ್ಲಿ ಭಗವದ್ಗೀತೆ ಬೌದ್ಧಿಕ ಪ್ರೇರಣೆಯನ್ನು ನೀಡುತ್ತದೆ. ಮುಂದಿನ ವರ್ಷಇನ್ನೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಈ ಅವಕಾಶವನ್ನುತಲುಪಪಿಸಲು ಪ್ರುತ್ನಿಸಲಾಗುವುದು ಎಂದು ಹೇಳಿದರು.
ಟ್ರಸ್ಟಿಗಳಾದ ಶ್ರೀಧರ ಶಾನಭಾಗ ಮತು ್ತರಮೇಶ ಖಾರ್ವಿ ಉಪಸ್ಥಿತರಿದ್ದರು. ದಿ ನ್ಯೂ ಇಂಗ್ಲೀಷ್ ಪಿಯು ಕಾಲೇಜಿನ ವಿದ್ಯಾರ್ಥಿಗಳಾದ ಕೌಶಿಕ್ ಮತ್ತು ಸಂಗಡಿಗರು ಪ್ರಾರ್ಥಿಸಿದರು. ಪ್ರಾಂಶುಪಾಲ ವೀರೇಂದ್ರ ಶಾನಭಾಗ ಸ್ವಾಗತಿಸಿದರು. ಉಪನ್ಯಾಸಕರಾದ ನಯನ, ಶಿವಾನಂದ ಭಟ್ ಮತ್ತು ನಾಗೇಂದ್ರ ಪೈ ನಿರೂಪಿಸಿದರು. ದಿ ನ್ಯೂ ಇಂಗ್ಲೀಷ್ ಪ್ರೌಢಶಾಲೆಯ ಮುಖ್ಯಾಧ್ಯಾಪಕ ಗಣಪತಿ ಶಿರೂರು ವಂದಿಸಿದರು. 25 ವಿಭಾಗಗಳ 125 ವಿದ್ಯಾರ್ಥಿಗಳಿಗೆ ಒಟ್ಟು 1,12,500 ರೂಪಾಯಿ ನಗದು ಬಹುಮಾನ, ಪ್ರಶಸ್ತಿ ಪತ್ರ ಮತ್ತು ಪರ್ಯಾಯ ಫಲಕಗಳನ್ನು ನೀಡಲಾಯಿತು.