Slide
Slide
Slide
previous arrow
next arrow

ಕಸದ ಗಾಡಿ ಓಡಿಸಿದ ಜಿ.ಪಂ ಸಿಇಒ!

300x250 AD

ಸಿದ್ದಾಪುರ: ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಈಶ್ವರ ಖಂಡೂ ಖುದ್ದು ತಾವೇ ಕಸ ಸಂಗ್ರಹಣೆ ವಾಹನ ಓಡಿಸುವ ಮೂಲಕ ವಿಶೇಷತೆ ಮೆರೆದಿದ್ದಾರೆ.

ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಿಗಳಿಗೆ ಭೇಟಿನೀಡಿದ ಸಂದರ್ಭದಲ್ಲಿ ಕಾನಗೋಡ ಗ್ರಾಪಂಗೆ ತೆರಳಿದ ಸಿಇಒ, ಸ್ವತಃ ವಾಹನ ಚಾಲನೆ ಮಾಡುವ ಮೂಲಕ ಚಾಲಕರಾದವರು ವಾಹನ ಚಾಲನೆ ಸಂದರ್ಭದಲ್ಲಿ ತೆಗೆದುಕೊಳ್ಳಬಹುದಾದ ಮುಂಜಾಗ್ರತಾ ಕ್ರಮಗಳು, ವಾಹನ ಸ್ಟಾರ್ಟ್, ಗೇರ್‌ಗಳ ಬದಲಾವಣೆ, ವಾಹನ ನಿಯಂತ್ರಣ, ಬ್ರೇಕ್ ಹಾಕುವ ವಿಧಾನ ಸೇರಿದಂತೆ ವಿವಿಧ ಚಾಲನಾ ಕೌಶಲ್ಯಗಳ ಕುರಿತು ತಿಳಿಸಿಕೊಟ್ಟರು.

ಜೊತೆಗೆ ಕೆನರಾ ಆರ್ ಸೆಟಿ ಮೂಲಕ ತರಬೇತಿ ಪಡೆದ ತಾಲ್ಲೂಕಿನ ಕಾನಗೋಡ ಗ್ರಾಮ ಪಂಚಾಯತಿಯ ಅನ್ನಪೂರ್ಣೇಶ್ವರಿ ಸ್ವಸಹಾಯ ಸಂಘದ ಮಹಿಳಾ ಚಾಲಕಿ ನೀಲಾವತಿ ಮಡಿವಾಳ ಅವರಿಂದ ವಾಹನ ಚಾಲನೆ ಮಾಡಿಸಿ ಪರಿಶೀಲಿಸಿ ಉತ್ತಮವಾಗಿ ವಾಹನ ಚಲಾಹಿಸುವಂತೆ ಪ್ರೇರೇಪಿಸಿದರು.

300x250 AD

ಈ ಸಂದರ್ಭದಲ್ಲಿ ತಾಪಂ ಇಒ ದೇವರಾಜ ಹಿತ್ತಲಕೊಪ್ಪ, ನರೇಗಾ ಎಡಿ ವಿದ್ಯಾ ದೇಸಾಯಿ, ಗ್ರಾಪಂ ಅಧ್ಯಕ್ಷರು, ಸದಸ್ಯರು, ಪಿಡಿಒ, ಸಿಬ್ಬಂದಿ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

Share This
300x250 AD
300x250 AD
300x250 AD
Back to top