ಗೋಕರ್ಣ: ಇಲ್ಲಿ ಪಾರಂಪರಿಕವಾಗಿ ನಡೆಯುವ ಕದಿರು (ಹೊಸ್ತು) ಹಬ್ಬ ಸಂಭ್ರಮ ಸಡಗರದಿಂದ ನಡೆಯಿತು.
ಹಬ್ಬದ ನಿಮಿತ್ತ ಶ್ರೀ ಮಹಾಬಲೇಶ್ವರ ಉತ್ಸವ ಸೋಮವಾರ ರಾತ್ರಿ ಮಂದಿರ ದಿಂದ ತೆರಳಿ ಬಂಕಿಕೊಡ್ಲದ ಮಿರ್ಜಾನ ಸೀಮೆ ವಿವೇಕ ನಾಡಕರ್ಣಿ ಅವರ ಮನೆಯಲ್ಲಿ ವಾಸ್ತವ್ಯ ಮಾಡಿತು. ಬೆಳಿಗ್ಗೆ ಆನುವಂಶಿಯ ಉಪಾಧಿವಂತ ವೇ. ಪ್ರಸನ್ನ ಕೃಷ್ಣ ಜೋಗಭಟ್ ಮತ್ತು ವೈದಿಕರ ನೇತೃತ್ವದಲ್ಲಿ ಪೂಜಾ ವಿಧಿ ನಡೆಯಿತು.
ಆ ನಂತರ ಬಾವಿಕೊಡ್ಲದ ದೇವರ ಗದ್ದೆಗೆ ತೆರಳಿ ನಾಡಕರ್ಣಿ ಮನೆತನದ ನೇತೃತ್ವದಲ್ಲಿ ಹೊಸ ಕದಿರಿಗೆ ಪೂಜೆ ಮಾಡಿ ಶ್ರೀ ದೇವರಿಗೆ ಅರ್ಪಿಸಲಾಯಿತು. ಪೂಜೆ ನಂತರ ಉತ್ಸವ ತಿರುಗಿ ಮಂದಿರಕ್ಕೆ ಆಗಮಿಸಿತು. ಈ ವೇಳೆ ಭಕ್ತರಿಗೆ ಹೊಸ ಕದಿರನ್ನು ಪ್ರಸಾದವಾಗಿ ನೀಡುವುದು ಇಲ್ಲಿನ ವಿಶೇಷವಾಗಿದೆ.