Slide
Slide
Slide
previous arrow
next arrow

ಜನಗಾದಲ್ಲಿ ಮಕ್ಕಳ ರಜಾ ಶಿಬಿರ

300x250 AD

ಹಳಿಯಾಳ: ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಜನಗಾದಲ್ಲಿ ರಜಾ ಶಿಬಿರವನ್ನು ಸ್ಕೊಡ್‌ವೇಸ್ ಸಂಸ್ಥೆ ಹಾಗೂ ದೇಸಾಯಿ ಫೌಂಡೇಷನ್ ಗುಜರಾತ್‌ರವರ ವತಿಯಿಂದ ಸಂಸ್ಥೆಯ ತಾಲೂಕಾ ಸಂಘಟಕ ಮಂಜುನಾಥ ಕಾಕ್ತಿಕರ್ ಆಯೋಜಿದ್ದರು.

ಕಾರ್ಯಕ್ರಮವನ್ನು ಎಸ್‌ಡಿಎಂಸಿ ಅಧ್ಯಕ್ಷ ಮಹೇಶ ಗೌಡ ಉದ್ಘಾಟಿಸಿದರು. ಸದಸ್ಯರಾದ ಸುರೇಖಾ ಗೌಡ, ಹನುಮಂತ ಚಿನಗಿನಕೊಪ್ಪ, ಸಂತೋಷ್ ಗುರವ, ಪರಶುರಾಮ ಚೂರ್ಲೇಕರ್, ಮಾರುತಿ ಭಾಲೇಕರ್ ಹಾಗೂ ತರಬೇತಿ ಶಿಕ್ಷಕರಾದ ಮಂಜುನಾಥ ಗೌಡ, ಮಾಧುರಿ ಮೆದಾರ್, ದಿವ್ಯಾ ಗೌಡ ಉಪಸ್ಥಿತರಿದ್ದರು.

300x250 AD

ಈ ಕಾರ್ಯಕ್ರಮದಲ್ಲಿ ಯೋಗ, ಪ್ರಾಣಾಯಾಮ, ಇಂಗ್ಲಿಷ್ ಮಾತನಾಡುವ ಕೌಶಲ್ಯ, ಕ್ರೀಡೆ ಚಿತ್ರಕಲೆ ಮುಂತಾದ ವೈವಿಧ್ಯಮಯ ಕಾರ್ಯಕ್ರಮ ಆಯೋಜಿಸಿದ್ದು, 200 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಐದು ದಿನಗಳ ಕಾಲ ತರಬೇತಿ ನಡೆದಿದ್ದು, ಸಮಾರೋಪ ಸಮಾರಂಭ ಮಾಡಿ ಭಾಗವಹಿಸಿದ ಮಕ್ಕಳಿಗೆ ರಜಾ ಶಿಬಿರದ ಪ್ರಮಾಣ ಪತ್ರ ನೀಡಲಾಯಿತು.

Share This
300x250 AD
300x250 AD
300x250 AD
Back to top