Slide
Slide
Slide
previous arrow
next arrow

ಬ್ರಹ್ಮ, ವಿಷ್ಣು, ಮಹೇಶ್ವರರ ಸೃಷ್ಟಿಕರ್ತ ಶಿಕ್ಷಕ: ರಾಮಚಂದ್ರ

300x250 AD

ಭಟ್ಕಳ: ದೇವತೆಗಳಾದ ಬ್ರಹ್ಮನಿಗೆ ಸೃಷ್ಠಿಯ ಕೆಲಸ, ವಿಷ್ಣುವಿಗೆ ಪಾಲನೆಯ ಕೆಲಸ ಮತ್ತು ಈಶ್ವರನಿಗೆ ಲಯದ ಕೆಲಸವಿದ್ದರೆ, ಈ ಮೂರನ್ನೂ ಸಹ ಶಿಕ್ಷಕರು ಮಾಡುವುದರಿಂದ ಶಿಕ್ಷಕರನ್ನು ಗುರುಸಾಕ್ಷಾತ ಪರಬ್ರಹ್ಮ ಎಂದು ಕರೆಯಲಾಗಿದೆ ಎಂದು ವನವಾಸಿ ಕಲ್ಯಾಣ, ಶಿರಸಿ ವಿಭಾಗದಗ್ರಾಮ ವಿಕಾಸ ಪ್ರಮುಖ ಹಾಗೂ ಕೃಷಿ ಗೋವಿಕಾಸ ಕೇಂದ್ರ ಪ್ರಕಲ್ಪ ಪ್ರಮುಖ ರಾಮಚಂದ್ರ ಹೇಳಿದರು.

ಅವರು ಶ್ರೀಜ್ಞಾನೇಶ್ವರಿ ಶಿಕ್ಷಣ ಮಹಾವಿದ್ಯಾಲಯವು ವನವಾಸಿ ಕಲ್ಯಾಣ, ವಂದಲ್ಸೆ, ಉತ್ತರಕೊಪ್ಪದಲ್ಲಿ ಆಯೋಜಿಸಿದ್ದ ಮೂರು ದಿನಗಳ ಸಮುದಾಯ ಬದುಕಿನ ಶಿಬಿರದ ಉದ್ಘಾಟನೆಯನ್ನು ನೆರವೇರಿಸಿ, ಶಿಕ್ಷಕರು ಸಮಾಜಕ್ಕೆ ಸುಸಂಸ್ಕೃತ ನಾಗರಿಕರನ್ನು ಸೃಷ್ಠಿಸುವ, ವಿದ್ಯಾರ್ಥಿಗಳಲ್ಲಿರುವ ಒಳ್ಳೆಯದನ್ನು ಪ್ರೋತ್ಸಾಹಿಸುವುದರ ಜೊತೆಗೆ ಕೆಟ್ಟದನ್ನು ದೂರ ಮಾಡುವ ಕೆಲಸ ಮಾಡುತ್ತಾ ದೇಶದ ಏಳ್ಗೆಯಲ್ಲಿ ಕೊಡುಗೆ ನೀಡುತ್ತಿದ್ದಾರೆ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ.ವೀರೇಂದ್ರ ವಿ.ಶಾನಭಾಗ ಮಾತನಾಡಿ, ಸುಂದರ ಪರಿಸರದ ವಂದಲ್ಸೆಯ ವನವಾಸಿ ಕಲ್ಯಾಣದಲ್ಲಿ ಪ್ರಶಿಕ್ಷಣಾರ್ಥಿಗಳು ಜೀವನ ಶಿಕ್ಷಣವನ್ನು ಕಲಿಯಲು ಬಂದಿದ್ದು, ಎಲ್ಲರ ಸಹಕಾರವನ್ನು ಬಯಸುತ್ತಿದ್ದೇವೆ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ವನಯೋಗಿ ಸಮಿತಿ, ವಂದಲ್ಸೆಯ ಅಧ್ಯಕ್ಷ ಮಾಸ್ತಿ ಗೊಂಡ, ಗ್ರಾಮ ವಿಕಾಸ ಸಮಿತಿ, ಕೊಪ್ಪದ ಅಧ್ಯಕ್ಷರಾದ ಗೋವಿಂದ ಆಲು ಮರಾಠಿ, ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ, ಭಟ್ಕಳದ ರಾಜ್ಯ ಪರಿಷತ್ತ ಸದಸ್ಯರಾದ ಪ್ರಕಾಶ ಶಿರಾಲಿ ಉಪಸ್ಥಿತರಿದ್ದರು.

300x250 AD

ಪ್ರಶಿಕ್ಷಣಾರ್ಥಿಗಳಾದ ಕಮಲಾಕ್ಷಿ ಮತ್ತುತಂಡದವರು ಪ್ರಾರ್ಥಿಸಿದರು, ವರದಾ ಸ್ವಾಗತಿಸಿದರು, ಉಷಾ ನಾಯ್ಕ ವಂದಿಸಿದರು, ಸನ್ನಿಧಿ ಹೋಬಳಿದಾರ ಮತ್ತು ನಾಗಲಕ್ಷ್ಮಿ ನಿರೂಪಿಸಿದರು. ಪ್ರಶಿಕ್ಷಣಾರ್ಥಿಗಳೇ ಮಹಾವಿದ್ಯಾಲಯದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳ ನೇತೃತ್ವದಲ್ಲಿ ಸಭಾ ಕಾರ್ಯಕ್ರಮ, ಸ್ವಚ್ಛತೆ ಮತ್ತು ನೂರಕ್ಕೂ ಹೆಚ್ಚು ಜನರಿಗೆ ಊಟ-ಉಪಹಾರ ಸಿದ್ಧಪಡಿಸಿದ್ದು ಎಲ್ಲರ ಮೆಚ್ಚುಗೆಗೆ ಕಾರಣವಾಯಿತು.

Share This
300x250 AD
300x250 AD
300x250 AD
Back to top