Slide
Slide
Slide
previous arrow
next arrow

ಮೈಸೂರಿನಿಂದ ಗೋವಾಕ್ಕೆ ಸೈಕಲ್ ಪಯಣ; ಹಿರಿಯರ ಸಾಹಸ

300x250 AD

ಕುಮಟಾ: ಏಜ್ ಈಸ್ ಜಸ್ಟ್ ನಂಬರ್… ಎಂದು ಇಂಗ್ಲೀಷ್ ಸಾಹಿತಿ ಜೋನ್ ಕಾಲಿನ್ಸ್ ಹೇಳಿದ್ದಾರೆ. ಮನುಷ್ಯ ಎಷ್ಟು ಕಾಲ ಬದುಕುತ್ತಾನೆ ಅನ್ನುವುದಕ್ಕಿಂತ ಇದ್ದಷ್ಟು ಕಾಲ ಅರ್ಥಪೂರ್ಣವಾಗಿ, ಆರೋಗ್ಯಯುತವಾಗಿ, ಉತ್ಸಾಹದಿಂದ ಬದುಕುತ್ತಾನೆ ಎನ್ನುವುದು ಮುಖ್ಯವಾಗುತ್ತದೆ. ಮನೆಯಲ್ಲಿ ಸಾಲು ಸಾಲು ಐಶಾರಾಮಿ ಕಾರುಗಳನ್ನು ಹೊಂದಿರುವ, ಪ್ರತಿಷ್ಠಿತ ಸಂಸ್ಥೆಗಳ ಮುಖ್ಯಸ್ಥರಾಗಿ ಲಕ್ಷಗಟ್ಟಲೆ ನಿವೃತ್ತಿ ಸಂಬಳ ಎಣಿಸುತ್ತಿರುವವರು ಸೈಕಲ್ ಮೇಲೆ ಪ್ರವಾಸ ಮಾಡುತ್ತಾರೆಂದರೆ ನಿಮಗೆ ಆಶ್ಚರ್ಯವಾಗಬಹುದು. ನಿವೃತ್ತಿಯ ನಂತರ ಗಾಳಿ ತೆಗೆದ ಬಲೂನಿನಂತೆ ಆಗುವವರ ಮಧ್ಯದಲ್ಲಿ ಇವರ ಬದುಕಿನ ಬಗ್ಗೆ ಉತ್ಸಾಹ, ಪ್ರೀತಿ, ಊರು ಸುತ್ತುವ ಹಂಬಲದ ಹಿರಿಯ ನಾಗರಿಕರ ಸೈಕಲ್ ಪ್ರವಾಸ ಮೆಚ್ಚುಗೆಯಾಗುತ್ತದೆ.

ಮೈಸೂರಿನ ಹಿರಿಯ ನಾಗರಿಕರು ಅರಮನೆಯ ನಗರಿ ಮೈಸೂರಿನಿಂದ ಸುಂದರ ರಾಜ್ಯ ಗೋವಾದ ಪಣಜಿಗೆ ಸೈಕಲ್ ಸವಾರಿ ಮಾಡುತ್ತಿದ್ದಾರೆ. ಉಡುಪಿ, ಕುಂದಾಪುರ, ಕುಮಟಾ ಮಾರ್ಗವಾಗಿ ಸೈಕಲ್ ತುಳಿದು ಇಂದು ಅಂಕೋಲೆಗೆ ಆಗಮಿಸಿದ್ದರು. ಬಹುದೂರದ ಪ್ರಯಾಣದ ನಂತರವೂ ಅವರ ಮೊಗದಲ್ಲಿ ಇನಿತು ಆಯಾಸ ಕಾಣಲಿಲ್ಲ. 8 ಜನರ ತಂಡದಲ್ಲಿ ಇಬ್ಬರನ್ನು ಹೊರತು ಪಡಿಸಿದರೆ ಉಳಿದವರೆಲ್ಲರ ವಯಸ್ಸು 65 ರಿಂದ 72. ಮೈಸೂರು ಅಥ್ಲೆಟಿಕ್ ಸಂಸ್ಥೆಯ ಸದಸ್ಯರಾಗಿರುವ ಇವರು ಸೈಕಲ್ ಸವಾರಿಯನ್ನು ಹವ್ಯಾಸವಾಗಿ ಹೊಂದಿದ್ದಾರೆ.

ಉದ್ದೇಶ: ಆರೋಗ್ಯಕ್ಕಾಗಿ ಸೈಕಲ್ ಪಯಣ ಎಂದು ಪ್ರಚಾರ ಪಡಿಸುವುದು, ದೈಹಿಕ ಆರೋಗ್ಯದ ಪ್ರಾಮುಖ್ಯತೆ ಬಗ್ಗೆ ತಿಳುವಳಿಕೆ ನೀಡುವುದು, ಸರಕಾರಿ ಶಾಲೆಗಳಿಗೆ ಭೇಟಿ, ಪರಿಸರ ರಕ್ಷಣೆ ಕುರಿತು ವಿದ್ಯಾರ್ಥಿಗಳಿಗೆ ಉಪನ್ಯಾಸ ನೀಡುವುದು, ಮಹಾಮಾರಿ ಪ್ಲಾಸ್ಟಿಕ್ ಬಳಕೆಯ ಬಗ್ಗೆ ತಿಳುವಳಿಕೆ ಇತ್ಯಾದಿ ಇವರ ಪ್ರವಾಸದ ಉದ್ದೇಶವಾಗಿದೆ. ಪ್ರವಾಸಿ ತಾಣಗಳ ವೀಕ್ಷಣೆ ಕೂಡ ಪ್ರವಾಸದ ಭಾಗವಾಗಿದೆ.

ಪಯಣ: ಪ್ರತಿದಿನ 100 ರಿಂದ 150 ಕಿ.ಮೀ. ಪಯಣಿಸುತ್ತಿದ್ದಾರೆ. ಕಳೆದ ಅಕ್ಟೋಬರ್ 1 ರಂದು ಮೈಸೂರಿನಿಂದ ಹೊರಟಿರುವ ಈ ತಂಡ ಸೂಳ್ಯ, ಉಡುಪಿ, ಕುಂದಾಪುರ, ಕುಮಟಾ ಮಾರ್ಗವಾಗಿ ಇಂದು ಅಂಕೋಲಾ ತಲುಪಿದೆ. ಕದಂಬ ನೌಕಾನೆಲೆಗೆ ಭೇಟಿ ಕೊಟ್ಟು ಕಾರವಾರ ತಲುಪಲಿದೆ. ಅಲ್ಲಿಂದ ಪಣಜಿಗೆ ತೆರಳಿ ಅಲ್ಲಿ ನಡೆಯುವ ಐರನ್ ಮ್ಯಾನ್ ಸ್ಪರ್ಧೆಯಲ್ಲಿ ಈ ತಂಡದ ಕೆಲವು ಸದಸ್ಯರು ಭಾಗವಹಿಸಲಿದ್ದಾರೆ. ಅತ್ಯಂತ ಕಠಿಣವಾದ ಈ ಸ್ಪರ್ಧೆ 90 ಕಿ.ಮೀ. ಸೈಕಲ್ ತುಳಿಯುವುದು, 9 ಕಿ.ಮೀ. ಈಜುವುದು, 21 ಕಿ.ಮೀ. ಮೆರಥಾನ್ ಓಟವನ್ನು ಒಳಗೊಂಡಿರುತ್ತದೆ.

300x250 AD

ತAಡದ ಸದಸ್ಯರು: ಈ ತಂಡ ವಿವಿಧ ರಂಗದ ಪ್ರತಿಷ್ಠಿತರನ್ನು ಒಳಗೊಂಡಿದೆ. ನಿವೃತ್ತ ಬ್ರಿಗೇಡಿಯರ್ ಮುನಿಸ್ವಾಮಿ, ಕೋಲ್ ಇಂಡಿಯಾದ ಮಾಜಿ ಜನರಲ್ ಮೇನೆಜರ್ ವೇದಮೂರ್ತಿ, ಎ.ಎಸ್.ಪಿ ಡಿಜೈನ್ ಕಂಪನಿಯ ಮೇನೆಜಿಂಗ್ ಡೈರೆಕ್ಟರ್ ಅನಿಲ, ಸ್ಟಾಂಪ್ ಹಾಗೂ ರಿಜಿಸ್ಟೆçÃಶನ್ನಿನ ಮಾಜಿ ಮುಖ್ಯಸ್ಥ ವೇಣು ಗೋಪಾಲ, ರಿಸರ್ವ್ ಬ್ಯಾಂಕಿನ ಹಿರಿಯ ಅಧಿಕಾರಿ ಸಾದಿಕ್ ಅಲಿ, ಸ್ಟçಕ್ಚರಲ್ ಡಿಸೈನರ್ ಅಶೋಕ, ಆಖಆಔ ದ ವಿಜ್ಞಾನಿ ಬಾಬು ಕಮಲಾಕರ, ನಿವೃತ್ತ ಡೆಪ್ಯುಟಿ ಕಮೀಶನರ್ ರಮೇಶ ನರಸಯ್ಯ ಇದ್ದಾರೆ.

ಅಜ್ಜಿಕಟ್ಟಾ ಶಾಲೆಗೆ ಭೇಟಿ: ಪ್ರವಾಸದ ಉದ್ದೇಶದಲ್ಲಿ ಒಂದಾದ ಸರಕಾರಿ ಶಾಲೆಗೆ ಭೇಟಿಯಂತೆ ಅಂಕೋಲೆಯ ಸರಕಾರಿ ಹಿರಿಯ ಮಾದರಿ ಪ್ರಾಥಮಿಕ ಶಾಲೆಗೆ ಈ ತಂಡ ಭೇಟಿ ಕೊಟ್ಟಿತು. ಶಿಕ್ಷಕರು, ವಿದ್ಯಾರ್ಥಿಗಳೊಂದಿಗೆ ಬೆರತ ಈ ತಂಡದ ಸದಸ್ಯರು ವಿದ್ಯಾರ್ಥಿಗಳಿಗೆ ಬೇಕಾದ ಶಾಲಾ ಪರಿಕರಗಳನ್ನು ದಾನವಾಗಿ ನೀಡಿದರು. ಸಿಹಿ-ತಿಂಡಿಗಳನ್ನು ಹಂಚಿ ಸಂಭ್ರಮಿಸಿದರು. ವಿದ್ಯಾರ್ಥಿಗಳಿಗೆ ದೇಶಪ್ರೇಮ, ಪರಿಸರ ರಕ್ಷಣೆಯ ಬಗ್ಗೆ ತಿಳಿಹೇಳಿದರು. ಶಾಲೆಯಲ್ಲಿ ನಡೆದ ಪುಟ್ಟ ಕಾರ್ಯಕ್ರಮದಲ್ಲಿ ಈ ತಂಡವನ್ನು ಗೌರವಿಸಲಾಯಿತು. ಶಾಲೆಯ ಶಿಕ್ಷಕರು, ಎಸ್.ಡಿ.ಎಂ.ಸಿ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

Share This
300x250 AD
300x250 AD
300x250 AD
Back to top