Slide
Slide
Slide
previous arrow
next arrow

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರಗೆ ಬೀಳ್ಕೊಡುಗೆ

300x250 AD

ಕಾರವಾರ: ಕಾರವಾರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ 1 ವರ್ಷ 7 ತಿಂಗಳ ಕಾಲ ಅಪರ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ರಾಜು ಮೊಗವೀರ ಅವರು ಬೆಂಗಳೂರಿಗೆ ವರ್ಗಾವಣೆಗೊಂಡಿರುವ ಹಿನ್ನೆಲೆ ಜಿಲ್ಲಾಧಿಕಾರಿ ಕಚೇರಿಯ ಸಭಾಂಗದಲ್ಲಿ ಆತ್ಮೀಯವಾಗಿ ಬೀಳ್ಕೊಡಲಾಯಿತು.

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ ಸನ್ಮಾನ ಸ್ವೀಕರಿಸಿ ಮಾತನಾಡಿ ಉತ್ತರ ಕನ್ನಡ ಜಿಲ್ಲೆಯ ಉದ್ಯೋಗ ಅಧಿಕಾರಿಯಾಗಿ ಬಂದು, ತಶೀಲ್ದಾರರಾಗಿ, ಸಹಾಯಕ ಆಯುಕ್ತತರಾಗಿ ಹಾಗೆಯೇ ಜಿಲ್ಲಾಧಿಕಾರಿ ಕಚೇರಿಯಲ್ಲಿ ಒಂದು ವರ್ಷ ಏಳು ತಿಂಗಳ ಕಾಲ ಅಪರ ಜಿಲ್ಲಾಧಿಕಾರಿ ಸೇವೆ ಸಲ್ಲಿಸಿದ್ದಾನೆ. ಉತ್ತರ ಕನ್ನಡ ಜಿಲ್ಲೆಯಲ್ಲಿ ಇದು ನನ್ನ ಆರನೇ ಯಶಸ್ಸು ಎಂದು ಹೇಳಿದರು.

ಕರ್ತವ್ಯದಲ್ಲಿ ಸಮಯ ಪ್ರಜ್ಞೆ ಬಹಳ ಮುಖ್ಯವಾಗಿದೆ ಅದನ್ನು ಎಲ್ಲರೂ ಅರಿತುಕೊಂಡು ಕರ್ತವ್ಯ ನಿರ್ವಹಿಸಿ, ಯಾರಾದರೂ ಸಮಸ್ಯೆ ಎಂದು ಕಚೇರಿಯ ಬಳಿ ಬಂದಾಗ ಸ್ಪಂದಿಸಿ ಅವರ ಸ್ಥಾನದಲ್ಲಿ ನಿಂತು ತಕ್ಷಣ ಪರಿಹಾರ ಕೊಡಿಸಲು ಪ್ರಯತ್ನಿಸಿ, ಪ್ರತಿಯೊಬ್ಬರು ಕಲಿಯುವುದು ತುಂಬಾ ಇದೆ. ನೂತನವಾಗಿ ಜಿಲ್ಲಾಡಳಿತದಲ್ಲಿ ಕರ್ತವ್ಯ ನಿರ್ವಹಿಸಲು ಬಂದವರಿಗೆ ಮಾರ್ಗದರ್ಶನ ಮತ್ತು ಉತ್ತೇಜನ ನೀಡಿ ಎಲ್ಲರೂ ಒಗ್ಗಟ್ಟಿನಿಂದ, ಜಿಲ್ಲೆಯ ಅಭಿವೃದ್ಧಿಗೆ ಕಾರ್ಯ ನಿರ್ವಹಿಸಿ. ಕಂದಾಯ ಇಲಾಖೆ ಹಾಗೂ ಆರ್.ಟಿ.ಸಿ, ಕೋರ್ಟ್ ಕೇಸಸ್ ಕೆಲಸಗಳನ್ನು ಕಲಿಯುವುದರಿಂದ ಮುಂದೆ ಸಾಕಷ್ಟು ಅವಕಾಶಗಳನ್ನು ಪಡೆಯಬಹುದು. ಒಟ್ಟಾರೆಯಾಗಿ ನನಗೆ ಎಲ್ಲರೂ ಸಹಕಾರ ನೀಡಿರುವುದಕ್ಕೆ ನಿಮ್ಮಗೆ ಯಾವಾಗಲು ಚಿರಋಣಿ ಎಂದರು.

300x250 AD

ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ಮಾತನಾಡಿ, ಕಂದಾಯ ಇಲಾಖೆಯಲ್ಲಿ ಕಾರ್ಯ ನಿರ್ವಹಿಸುವವರು ಮನೆಗಿಂತ ಹೆಚ್ಚು ಕಚೇರಿಯಲ್ಲೇ ಸಮಯ ಕಳೆಯಬೇಕಾಗುತ್ತದೆ. ಸಾರ್ವಜನಿಕರ ಸೇವೆ ಮಾಡಲು ದೇವರು ಒಂದು ಉತ್ತಮ ಅವಕಾಶವನ್ನು ಕಲ್ಪಿಸಿದ್ದಾನೆ. ಅಂತಹ ಅವಕಾಶವನ್ನು ಸದುಪಯೋಗ ಪಡೆದುಕೊಂಡು ಒಂದು ಅಂಶವು ಬಿಡದೆ ಸಂಪೂರ್ಣವಾಗಿ ಸಾರ್ವಜನಿಕರ ಸೇವೆ ಮಾಡಿವುದರ ಮೂಲಕ ದೇಶ ಮತ್ತು ದೇವರನ್ನು ಕಾಣಬೇಕು. ಅದರಂತೆ ಅಪರ ಜಿಲ್ಲಾಧಿಕಾರಿ ಅವರು ತಮ್ಮ ಕರ್ತವ್ಯವನ್ನು ಶಿಸ್ತು ಮತ್ತು ಸಮಯ ಪ್ರಜ್ಞೆಯಿಂದ ಅಚ್ಚು ಕಟ್ಟಾಗಿ ನಿರ್ವಹಿಸಿದ್ದಾರೆ ಎಂದು ಹೇಳಿದರು.

ಉಪವಿಭಾಗಾಧಿಕಾರಿಗಳಾದ ಜಯಲಕ್ಷ್ಮೀ ರಾಯಕೋಡ್, ಆರ್.ದೇವರಾಜ, ಕಲ್ಯಾಣಿ ಕಾಂಬ್ಳೆ, ಡಾ.ನಯನಾ, ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ಸ್ಟೈಲ್ಲಾ ವರ್ಗಿಸ್, ತಹಸೀಲ್ದಾರರು ಹಾಗೂ ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತಿತರರು ಇದ್ದರು.

Share This
300x250 AD
300x250 AD
300x250 AD
Back to top