Slide
Slide
Slide
previous arrow
next arrow

ವಿಶೇಷ ಚೇತನ ಮಕ್ಕಳಿಗೆ ಮಾಶಾಸನಕ್ಕೆ ಪಾಲಕರ ಆದಾಯಮಿತಿ ತೆಗೆಯಬೇಕು; ಶಾಸಕ ಭೀಮಣ್ಣ

300x250 AD

ಶಿರಸಿ: ಇಲ್ಲಿನ ಅಜಿತ ಮನೋಚೇತನಾ ವಿಕಾಸ ಶಾಲಾ ಆವರಣದಲ್ಲಿ ಏರ್ಪಡಿಸಿದ್ದ ಗಾಂಧಿಜಯ0ತಿ ಕಾರ್ಯಕ್ರಮವನ್ನು ಶಾಸಕ ಭೀಮಣ್ಣ ನಾಯ್ಕ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು, ಅಂಗವಿಕಲರ ಸೌಲಭ್ಯಗಳನ್ನು ನಗರ ಸಭೆಯ ಮೂಲಕ ನೀಡಲು ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು. ಅಲ್ಲದೇ, ಬುದ್ಧಿಮಾಂದ್ಯ ಮಕ್ಕಳಿಗೆ ಮಾಶಾಸನ ನೀಡಲು ಪಾಲಕರ ಆದಾಯ ಮಿತಿ ತೆಗೆಯಬೇಕು ಎಂದು ಸರ್ಕಾರವನ್ನು ಒತ್ತಾಯಿಸಿದರು.

ನಂತರ ಬುದ್ಧಿಮಾಂದ್ಯ ಮಕ್ಕಳ ಪಾಲಕರಿಗೆ ಆಯುಷ್ಮಾನ್ ಕಾರ್ಡ್ ವಿತರಿಸಿದರು. ಯುನಿಫಾರಂ ಬಟ್ಟೆ, ಆಯುಷ್ ಕಿಟ್, ವೀಲ್‌ಚೇರ್, ಕಲಿಕಾ ಕಿಟ್, ಹಣ್ಣಿನ ಗಿಡಗಳನ್ನು ನೀಡಿದರು. ಮಕ್ಕಳಿಗೆ ಹಣ್ಣು ಮತ್ತು ಸಂಸ್ಥೆಗೆ 25000 ರೂ.ದೇಣಿಗೆ ನೀಡಿದರು.

300x250 AD

ಆಯುಷ್ ವೈದ್ಯಾಧಿಕಾರಿ ಡಾ. ಜಗದೀಶ ಯಾಜಿ, ಆಯುರ್ವೇದ ಪ್ರಯೋಗದಿಂದ ಮಕ್ಕಳಿಗೆ ಪ್ರಯೋಜನ ಆಗಿದೆ ಎಂಬ ಮಾಹಿತಿ ನೀಡಿದರು. ಸಂಸ್ಥೆಯ ಕಾರ್ಯದರ್ಶಿ ಅನಂತ ಹೆಗಡೆ ಅಶೀಸರ ಶಾಸಕರಿಗೆ ವಿವಿಧ ಬೇಡಿಕೆಗಳ ಮನವಿ ನೀಡಿದರು. ಅಧ್ಯಕ್ಷತೆ ವಹಿಸಿದ ಸುಧೀರ ಭಟ್ಟ ಪ್ಲಾಸ್ಟಿಕ್ ಬದಲಿಗೆ ವಿಶೇಷ ಮಕ್ಕಳು ತಯಾರಿಸಿದ ಪೇಪರ್ ಕವರ್ಸ್ಗಳನ್ನು ರೋಟರಿ ಆಸ್ಪತ್ರೆಯ ನಿತಿನ ಕಾಸರಕೋಡ ಅವರಿಗೆ ನೀಡಿದರು. ಶಿಕ್ಷಕಿ ಸುಮಿತ್ರಾ ಮರಾಠಿ ಮಕ್ಕಳಿಂದ ಭಜನೆ ಪ್ರಸ್ತುತ ಪಡಿಸಿದರು. ಮುಖ್ಯಾಧ್ಯಾಪಕಿ ನರ್ಮದಾ ವಂದನಾರ್ಪಣೆ ಮಾಡಿದರು. ಗ್ರಾಮ 1 ಕಾರ್ಯಕರ್ತೆ ಅನ್ನಪೂರ್ಣ ಸೌಲಭ್ಯಗಳ ಮಾಹಿತಿ ನೀಡಿದರು. ಶ್ಯಾಮಲಾ ನಿರ್ವಹಿಸಿದರು. ಉದಯ ಸ್ವಾದಿ, ಪ್ರೊ. ರವಿ ನಾಯಕ, ವಿನಾಯಕ ಭಟ್ಟ ಪಾಲ್ಗೊಂಡರು. ಕಾರ್ಯಕ್ರಮಕ್ಕೂ ಮೊದಲು ಮಕ್ಕಳು ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡರು.

ಶಾಸಕರಿಗೆ ನೀಡಿದ ಮನವಿಯ ವಿವರ:

  1. ಅಜಿತ ಮನೋಚೇತನಾ ವಿಕಾಸ ವಿಶೇಷ ಶಾಲೆಯ ಮಕ್ಕಳಿಗೆ ಬಿಸಿಯೂಟ ಒದಗಿಸಿಕೊಡುವುದು.
  2. ಶಿರಸಿ ನಗರಸಭೆಯ ಅಂಗವಿಕಲರ ಸೇವಾ ನಿಧಿಯಲ್ಲಿ ಅಜಿತ ಮನೋಚೇತನಾ ಮಕ್ಕಳ ವೈದ್ಯಕೀಯ ವೆಚ್ಚ ವೈದ್ಯಕೀಯ ಶಿಬಿರ ವೆಚ್ಚ ಭರಿಸಲುಕೊಡುವುದು.
  3. ನಗರಸಭೆ ಮೂಲಕ ಸ್ವಉದ್ಯೋಗ ತರಬೇತಿ ಮತ್ತು ಕರಕುಶಲ ವಸ್ತು ತಯಾ ಕುರಿತು ಅಜಿತ ಮನೋಚೇತನಾಕ್ಕೆ 2 ಲಕ್ಷ ರೂ. ಅನುದಾನ ಒದಗಿಸಿಕೊಡುವುದು.
  4. ಆಯುಷ್ ಇಲಾಖೆ ಮತ್ತು ತೋಟಗಾರಿಕೆ ಇಲಾಖೆ ಮೂಲಕ ಮಕ್ಕಳಲ್ಲಿ ಪೌಷ್ಠಿಕಾಂಶ ಹೆಚ್ಚಿಸುವ ಹಣ್ಣಿನ ಗಿಡ, ನುಗ್ಗೆ, ಪಪಾಯಿ, ಪೇರಲ ಮುಂತಾದ 200 ಗಿಡಗಳನ್ನು ಅಜಿತ ಮನೋಚೇತನ ಶಾಲೆಯ ಮಕ್ಕಳ ಪಾಲಕರಿಗೆ ವಿತರಿಸುವುದು.
  5. ಬುದ್ಧಿಮಾಂದ್ಯ ಮಕ್ಕಳಿಗೆ ಸರ್ಕಾರ ಮಾಸಾಶನ ನೀಡುವಾಗ ಅವರ ಪಾಲಕರ ಆದಾಯಮೀತಿ ಇರುವದರಿಂದ ಹಲವರಿಗೆ ಈ ಸೌಲಭ್ಯ ಸಿಗುವುದಿಲ್ಲ. ಈ ಮಕ್ಕಳ ಪಾಲನೆ ಬಹುದೊಡ್ಡ ಕೆಲಸ. ಪಾಲಕರ ಆದಾಯ ಮಿತಿಯನ್ನು ತೆಗೆದುಹಾಕಬೇಕು ಹಾಗೂ ಅಂಗವಿಕಲರ ಕಲ್ಯಾಣ ಇಲಾಖೆಗೆ ಈ ಬಗ್ಗೆ ಆದೇಶ ಮಾಡಬೇಕು.
Share This
300x250 AD
300x250 AD
300x250 AD
Back to top