Slide
Slide
Slide
previous arrow
next arrow

ಭಾಗ್ವತ್ ಕಲಾ ಸಂಭ್ರಮದಲ್ಲಿ ಗಾನ-ನೃತ್ಯ ನಮನ

300x250 AD

ಶಿರಸಿ: ನಗರದ ನಟರಾಜ ನೃತ್ಯ ಶಾಲೆಯ ಪಾಲಕರು ಹಾಗೂ ಅಭಿಮಾನಿ ವೃಂದದವರು ಸಂಘಟಿಸಿದ್ದ ಭಾಗ್ವತ್ ಕಲಾಸಂಭ್ರಮ ಕಿಕ್ಕಿರಿದ ಅಭಿಮಾನಿಗಳ ನಡುವೆ ಅತ್ಯಂತ ಸಂಭ್ರಮದಿಂದ ನಡೆಯಿತು.

ಇತ್ತೀಚೆಗೆ ಅಗಲಿದ ಮೊರ್ಚಿಂಗ್ ಹಾಗೂ ಮೃದಂಗ ವಾದಕ ಪ್ರದೀಪ ಭಾಗ್ವತ ಅವರ ಸ್ಮರಣಾರ್ಥ ಗಾನ-ನೃತ್ಯ ನಮನ ಅಂಗವಾಗಿ ಇಲ್ಲಿಯ ವಿದ್ಯಾಧಿರಾಜ ಕಲಾಕ್ಷೇತ್ರದಲ್ಲಿ ಈ ವಿಶೇಷ ಕಾರ್ಯಕ್ರಮ ಸಂಘಟಿಸಲಾಗಿತ್ತು. ಗಾನ-ನಮನದಲ್ಲಿ ನಟರಾಜ ನೃತ್ಯ ಶಾಲೆ ವಿದ್ಯಾರ್ಥಿಗಳಿಂದ ಕರ್ನಾಟಕೀ ಸಂಗೀತ ಕಾರ್ಯಕ್ರಮ ನಡೆದಿದ್ದು, ಪುಟ್ಟಮಕ್ಕಳು ಸೇರಿದಂತೆ ಹಿರಿಯ ವಿದ್ಯಾರ್ಥಿಗಳು ಪಾಲ್ಗೊಂಡು ಭಕ್ತಿಪ್ರಧಾನ ಹಾಡುಗಳನ್ನು ಹಾಡಿದರು.

ಮಕ್ಕಳ ಗಾನಕ್ಕೆ ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಪುರುಷೋತ್ತಮ ಹಾಗು ವಯಲಿನ್‌ನಲ್ಲಿ ಮೈಸೂರಿನ ಶ್ರೀಕಾಂತ ಸಾಥ್ ನೀಡಿದರು. ಪ್ರತಿಯೊಂದು ರಾಗ, ತಾಳ, ಲಯ ಕುರಿತು ನೃತ್ಯಗುರು ಸೀಮಾ ಭಾಗ್ವತ್ ವಿವರಿಸಿದರು. ನಂತರ ನೃತ್ಯನಮನದಲ್ಲಿ ಖ್ಯಾತ ನೃತ್ಯಪಟು ವಿದ್ವಾನ್ ಸೂರ್ಯರಾವ್ ಅವರು ಏಕವ್ಯಕ್ತಿ ನೃತ್ಯದಲ್ಲಿ ‘ರಾವಣ’ ಎಂಬ ಸುಂದರ ಕಥಾನಕವನ್ನು ಗತಕಾಲದ ವೈಭವ ಮರುಕಳಿಸಿದಂತೆ ಅಭಿನಯಿಸಿ, ಕಲಾಭಿಮಾನಿಗಳನ್ನು ಮಂತ್ರಮುಗ್ಧಗೊಳಿಸಿದರು.

ಸೂರ್ಯರಾವ್ ನೃತ್ಯ ಸಂದರ್ಭದಲ್ಲಿ ಹಿನ್ನೆಲೆಯ ಕೋರಿಯೊಗ್ರಾಫಿ ವ್ಯವಸ್ಥೆಯಲ್ಲಿ ಯೋಗಿತಾ ಜೈನ್ ಬೆಂಗಳೂರು ಪಾಲ್ಗೊಂಡು ವಿಶೇಷ ನೃತ್ಯ ನಮನ ಕಾರ್ಯಕ್ರಮಕ್ಕೆ ಮೆರಗು ಹೆಚ್ಚಿಸಿದರು. ಭಾಗ್ವತ್ ಕಲಾಸಂಭ್ರಮ ಕಾರ್ಯಕ್ರಮವನ್ನು ಉದ್ಯಮಿ ವಿಷ್ಣುದಾಸ್ ಕಾಸರಕೋಡ ಉದ್ಘಾಟಿಸಿ ಮಾತನಾಡಿ, ನೃತ್ಯಕ್ಕೆ ಪುರಾಣ ಕಾಲದಿಂದಲೂ ಮಹತ್ವವಿದ್ದು, ಆರೋಗ್ಯಕ್ಕೆ ನೃತ್ಯಾಭ್ಯಾಸ ಹಾಗೂ ಯೋಗಾಭ್ಯಾಸ ಮಾಡುವುದು ಎರಡೂ ಒಂದೇ. ನೃತ್ಯಾಭ್ಯಾಸದಿಂದ ಮನುಷ್ಯನ ಆರೋಗ್ಯ ಸದಾ ಪರಿಪೂರ್ಣವಾಗಿರುತ್ತದೆ ಎಂದ ಅವರು, ಮೂರು ದಶಕಗಳ ನಟರಾಜ ನೃತ್ಯ ಶಾಲೆಯ ನೃತ್ಯ ತರಬೇತಿ ಹಾಗೂ ಸಂಘಟನೆ ಶ್ಲಾಘಿಸಿದರು.

300x250 AD

ಪಾಲಕ ವೃಂದದ ಪರವಾಗಿ ನುಡಿನಮನದಲ್ಲಿ ರಾಮು ಕಿಣಿ ಮಾತನಾಡಿ, ನೃತ್ಯ ಶಾಲೆಯ ಬೆನ್ನೆಲುಬಾಗಿದ್ದ ದಿವಂಗತ ಪ್ರದೀಪ ಭಾಗ್ವತ್ ಅವರ ಕಲಾಸಕ್ತಿ, ತುಡಿತ, ಶ್ರದ್ಧೆ ಹಾಗೂ ಅವರೊಂದಿಗಿನ ಒಡನಾಟ ಮತ್ತು ಕ್ರಿಯಾಶೀಲತೆ ತಿಳಿಸಿದರು.ಈಶ್ವರಿ ವಿಶ್ವವಿದ್ಯಾಲಯದ ವೀಣಾಜಿ ಕಲಾವಿದರನ್ನು ಗೌರವಿಸಿ ಮಾತನಾಡಿದರು. ವಿದುಷಿ ಸೀಮಾ ಭಾಗ್ವತ್, ಕೊಳಲುವಾದಕ ದೀಪಕ ಹೆಬ್ಬಾರ್, ವಿದುಷಿ ದೀಪಾ ಭಾಗ್ವತ್, ಮಮತಾ ಹೆಗಡೆ, ಸುಶೀಲಾ ಜಾರ್ಜ್ ದಾನಂದಿ ಮುಂತಾದವರು ಉಪಸ್ಥಿತರಿದ್ದರು.

ನಟರಾಜ ನೃತ್ಯಶಾಲೆಯ ವಿದ್ಯಾರ್ಥಿಗಳ ಭರತನಾಟ್ಯ ಈ ಸಂದರ್ಭದಲ್ಲಿ ನಡೆಯಿತು. ಪಾಲಕವೃಂದದ ಡಾ.ರಮೇಶ ಹೆಗಡೆ ಸ್ವಾಗತಿಸಿದರು. ಗಿರಿಧರ ಕಬ್ನಳ್ಳಿ ಪ್ರಾಸ್ತಾವಿಕ ಮಾತನಾಡಿ ನಿರೂಪಿಸಿದರು. ಶಿಕ್ಷಕ ಉದಯ ಭಟ್ಟ ವಂದಿಸಿದರು.

Share This
300x250 AD
300x250 AD
300x250 AD
Back to top