ಶಿರಸಿ: ತಾಲೂಕಿನ ಮಾಡನಕೇರಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಹಾತ್ಮ ಗಾಂಧಿಜೀ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿ ಜನ್ಮದಿನವನ್ನು ವಿದ್ಯಾರ್ಥಿಗಳು ಹಾಗೂ ಪಾಲಕರು ಶ್ರಮದಾನದ ಮೂಲಕ ಆಚರಿಸಿದರು.
ಶಾಲೆಗೆ ವಿವಿಧ ಸೌಲಭ್ಯಗಳನ್ನು ಒದಗಿಸಿದ ಹಾಗೂ ಅಡುಗೆ ಕೋಣೆಯ ಮುಂಭಾಗದಲ್ಲಿ ಸಿಮೆಂಟ್ ನೆಲವನ್ನು ನಿರ್ಮಿಸಿಕೊಟ್ಟ ಪೂರ್ವ ವಿದ್ಯಾರ್ಥಿ ಹಾಗೂ ಗ್ರಾಮ ಪಂಚಾಯತ ಸದಸ್ಯರೂ ಸದಾನಂದ ನಾಯ್ಕ ಅವರನ್ನು ಎಸ್.ಡಿ.ಎಂ.ಸಿ. ವತಿಯಿಂದ ಸನ್ಮಾನಿಸಲಾಯಿತು.
ಶಾಲೆಯ ಆವರಣದಲ್ಲಿ ವೇದಿಕೆ ನಿರ್ಮಿಸಲು ಶಿವಾನಂದ ಭಟ್ಟ 6000 ರೂ., ಮಹೇಶ ನಾಯ್ಕ 5000, ಮಂಜುನಾಥ ಬೂರ್ಯಾ ಬಡಗಿ 3000, ರಾಜು ಧರ್ಮಾ ನಾಯ್ಕ 2000, ದುರ್ಗಾ ಶಕ್ತಿ ಸ್ತ್ರೀ ಶಕ್ತಿ ಸಂಘ ಮಾಡನಕೇರಿ 2000 ರೂ. ಹಾಗೂ ಸಿಮೆಂಟ್ ಖರ್ಚಿನ ನೆರವನ್ನು ವಿಶ್ವನಾಥ ನಾಯ್ಕ ಘೋಷಿಸಿದರು.
ವೇದಿಕೆಯಲ್ಲಿ ಎಸ್.ಡಿ.ಎಂ.ಸಿ. ಉಪಾಧ್ಯಕ್ಷೆ ರೇಖಾ ಗೌಡರ , ಪಂಚಾಯತ ಸದಸ್ಯ ಸದಾನಂದ ನಾಯ್ಕ, ಮುಖ್ಯಾಧ್ಯಾಪಕಿ ಎಚ್.ಪಿ.ಗೀತಾ ಹಾಗೂ ಎಸ್.ಡಿ.ಎಂ.ಸಿ.ಸದಸ್ಯರು ಉಪಸ್ಥಿತರಿದ್ದರು. ಶಿಕ್ಷಕ ಎನ್.ಎಸ್.ಭಾಗ್ವತ್ ನಿರ್ವಹಿಸಿ, ವಂದಿಸಿದರು. ಸದಾನಂದ ನಾಯ್ಕ ಸಿಹಿ ವಿತರಿಸಿದರು.