ಶಿರಸಿ: ಇಲ್ಲಿಯ ಕೆಡಿಸಿಸಿ ಬ್ಯಾಂಕಿನ ವಿಭಾಗಾಧಿಕಾರಿಯಾಗಿ ಸೇವಾ ನಿವೃತ್ತಿ ಹೊಂದಿದ ಎಸ್.ಎಸ್. ಭಟ್ಟ ಕಳಚೆ ಅವರನ್ನು ಬ್ಯಾಂಕಿನ ಪ್ರಧಾನ ಕಚೇರಿಯಲ್ಲಿ ಶನಿವಾರ ಬೀಳ್ಕೊಡಲಾಯಿತು.
ಬ್ಯಾಂಕಿನ ಅಧ್ಯಕ್ಷ ಶಿವರಾಮ ಹೆಬ್ಬಾರ, ಉಪಾಧ್ಯಕ್ಷ ಮೋಹನದಾಸ್ ನಾಯಕ, ಮತ್ತು ನಿರ್ದೇಶಕರು ಮತ್ತು ವ್ಯವಸ್ಥಾಪಕ ನಿರ್ದೇಶಕ ಆರ್ .ಜಿ.ಭಾಗ್ವತ ಹಾಗೂ ಬ್ಯಾಂಕಿನ ನೌಕರರ ಅಸೋಶಿಯೇಶನ್ ನವರು ಎಸ್.ಎಸ್. ಭಟ್ಟ ಅವರಿಗೆ ಶಾಲು ಹೊದೆಸಿ ಸನ್ಮಾನಿಸಿ ಬೀಳ್ಕೊಟ್ಟರು.
ಯಲ್ಲಾಪುರ ತಾಲೂಕಿನ ಕಳಚೆ ಗ್ರಾಮದ ಮೂಲದವರಾದ ಎಸ್.ಎಸ್. ಭಟ್ಟ ಕಳೆದ 38 ವರ್ಷಗಳ ಕಾಲ ಯಲ್ಲಾಪುರ, ಮುಂಡಗೋಡ, ಶಿರಸಿ, ಸಿದ್ದಾಪುರ ಸೇರಿದಂತೆ ಬ್ಯಾಂಕಿನ ವಿವಿಧ ಶಾಖೆಗಳಲ್ಲಿ ಹಾಗೂ ಬ್ಯಾಂಕಿನ ಪ್ರಧಾನ ಕಛೇರಿಯಲ್ಲಿ ವಿವಿಧ ಹುದ್ದೆಗಳಲ್ಲಿ ದಕ್ಷತೆಯಿಂದ ಕಾರ್ಯನಿರ್ವಹಿಸಿದ್ದಾರೆ ಎಂದು ಈ ಸಂದರ್ಭದಲ್ಲಿ ಶ್ಲಾಘನೆ ವ್ಯಕ್ತಪಡಿಸಲಾಯಿತು.