Slide
Slide
Slide
previous arrow
next arrow

ಶಿರಸಿಯಲ್ಲಿ ಎಲಿಗಂಟ್ ಟೂರ್ಸ್‌ನ ಶಾಖಾ ಕಚೇರಿ ಪ್ರಾರಂಭ

300x250 AD

ಶಿರಸಿ: ನಗರದ ಬಣ್ಣದಮಠ ಕಾಂಪ್ಲೆಕ್ಸ್‌ನಲ್ಲಿ ಪ್ರಸನ್ನ ಹೆಗಡೆ ಹರೀಶಿ ಒಡೆತನದ ಎಲಿಗಂಟ್ ಟೂರ್ಸ್‌ನ ಶಿರಸಿಯ ನೂತನ ಶಾಖಾ ಕಚೇರಿ ಆರಂಭಗೊಂಡಿದೆ.

ಬೆಂಗಳೂರಿನಲ್ಲಿ ಕೇಂದ್ರ ಕಚೇರಿ ಹೊಂದಿರುವ ಎಲಿಗಂಟ್ ಟೂರ್ಸ್, ಈಗಾಗಲೇ ಮೂರು ಸಾವಿರಕ್ಕೂ ಅಧಿಕ ಯಾತ್ರಿಗಳನ್ನು ಕಾಶಿ, ಗುಜರಾಥ್, ರಾಮೇಶ್ವರಂ, ಚಾರ್‌ಧಾಮ, ಮುಕ್ತಿನಾಥ ಇತ್ಯಾದಿ ತೀರ್ಥಕ್ಷೇತ್ರ, ಪ್ರವಾಸಿ ತಾಣಗಳಿಗೆ ಕರೆದೊಯ್ದು ಹೆಸರು ಗಳಿಸಿದೆ. ಶಿರಸಿ, ಸಿದ್ದಾಪುರ, ಯಲ್ಲಾಪುರ, ಸಾಗರ ಮೊದಲಾದ ಪ್ರದೇಶಗಳ ಯಾತ್ರಾಸಕ್ತರಿಗೆ ಅನುಕೂಲ ಒದಗಿಸಲು ಶಿರಸಿಯಲ್ಲಿ ಕಚೇರಿ ಆರಂಭಿಸಿರುವುದಾಗಿ ಎಲಿಗಂಟ್ ಟೂರ್ಸ್‌ನ ಮಾಲಕರು ತಿಳಿಸಿದ್ದಾರೆ.
ಕಚೇರಿ ಉದ್ಘಾಟನೆ ವೇಳೆ ಗಣೇಶ ಹೆಗಡೆ ಅರಸಿಕೇರಿ, ವಿನಾಯಕ ಹೆಗಡೆ ಅರಸಿಕೇರಿ, ನೇತ್ರಾವತಿ ಹಳೆಮನೆ, ಜಯಶ್ರೀ ಪ್ರಕಾಶ ಹೆಗಡೆ ಮೊದಲಾದವರು ಉಪಸ್ಥಿತರಿದ್ದು ಕಚೇರಿಯ ಯಶಸ್ಸಿಗೆ ಹಾರೈಸಿದರು.

300x250 AD
Share This
300x250 AD
300x250 AD
300x250 AD
Back to top