• Slide
    Slide
    Slide
    previous arrow
    next arrow
  • ಅರಣ್ಯ ಭೂಮಿ ಹಕ್ಕಿಗಾಗಿ ಸರಕಾರಗಳು ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವುದು ಅವಶ್ಯ: ರವೀಂದ್ರ ನಾಯ್ಕ

    300x250 AD

    ಹೊನ್ನಾವರ: ಅರಣ್ಯ ಭೂಮಿ ಹಕ್ಕು ಕಾಯಿದೆ ಅಡಿಯಲ್ಲಿ ತಿರಸ್ಕಾರವಾದ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸಬೇಕೆಂಬ ಸುಪ್ರೀಂ ಕೋರ್ಟನ ಪ್ರಕರಣದಲ್ಲಿ ಕೇಂದ್ರ, ರಾಜ್ಯ ಸರಕಾರ ತಿದ್ದುಪಡಿ ಪ್ರಮಾಣ ಪತ್ರ ಸಲ್ಲಿಸುವುದು ಅವಶ್ಯ. ಈ ದಿಶೆಯಲ್ಲಿ ಹೋರಾಟಗಾರರ ವೇದಿಕೆಯು ಸರಕಾರದ ಮೇಲೆ ಒತ್ತಡ ತರಲಾಗುವುದೆಂದು ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಹೇಳಿದ್ದಾರೆ.

    ಅವರು ಪ್ರಭಾತನಗರದ ಮೂಡಗಣಪತಿ ದೇವಾಲಯದ ಸಭಾಂಗಣದಲ್ಲಿ ಜರುಗಿದ ಅರಣ್ಯವಾಸಿಗಳ ಸಭೆಯಲ್ಲಿ ಸ್ಥಳೀಯ ಅರಣ್ಯವಾಸಿಗಳಿಗೆ ಹೋರಾಟಗಾರರ ವೇದಿಕೆಯ ಗುರುತಿನ ಪತ್ರ ವಿತರಿಸಿ, ಅರಣ್ಯವಾಸಿಗಳನ್ನ ಉದ್ದೇಶಿಸಿ ಮಾತನಾಡುತ್ತಿದ್ದರು. ಕಾನೂನಿನ ಸಂಕೋಲೆಯಲ್ಲಿ ಸಿಲುಕಿರುವ ಅರಣ್ಯವಾಸಿಗಳಿಗೆ ಕೇಂದ್ರ ಮತ್ತು ರಾಜ್ಯ ಸರಕಾರ ಕಾನೂನಾತ್ಮಕ ಪ್ರಕ್ರಿಯೆ ಮೂಲಕ ಅರಣ್ಯವಾಸಿಗಳ ಪರವಾಗಿ ನಿಲುವನ್ನು ಪ್ರಕಟಿಸುವ ಅವಶ್ಯವಿದೆಯೆಂದು ಅವರು ಈ ಸಂದರ್ಭದಲ್ಲಿ ಹೇಳಿದರು.

    ಸಭೆಯ ಅಧ್ಯಕ್ಷತೆಯನ್ನ ವಹಿಸಿದ ತಾಲೂಕು ಅಧ್ಯಕ್ಷ ಚಂದ್ರಕಾoತ ಕೊಚರೆಕರ ಅವರು ಮಾತನಾಡಿ, ಹೋರಾಟ ನಿರಂತರವಾಗಿರಬೇಕು. ಸಮಸ್ಯೆಗಳನ್ನ ಈಡೇರಿಸುವ ದಿಶೆಯಲ್ಲಿ ಅರಣ್ಯವಾಸಿಗಳಿಗೆ ಹೋರಾಟ ಧ್ವನಿಯಾಗಿರುತ್ತದೆ. ಸಂಘಟಿತ ಹೋರಾಟದ ಮೂಲಕ ಹಕ್ಕು ಪಡೆಯಲು ಕಾರ್ಯ ಪ್ರವೃತ್ತರಾಗಬೇಕೆಂದು ಅವರು ಹೇಳಿದರು. ಅರಣ್ಯ ಅಧಿಕಾರಿಗಳ ವಿರುದ್ಧ ಆಕ್ರೋಶ: ಅರಣ್ಯ ಸಿಬ್ಬಂದಿಗಳಿ0ದ ಉಂಟಾಗುತ್ತಿರುವ ಕಿರುಕುಳ ಹಾಗೂ ಸಮಸ್ಯೆಗಳ ಕುರಿತು ಗಜಾನನ ನಾಯ್ಕ ಸಾಲ್ಕೋಡ, ಖಯಾಜ್ ನಗರ ಬಸ್ತಿಕೇರಿ ಗ್ರಾಮ ಪಂಚಾಯತ ಸದಸ್ಯ, ಯೋಗೇಶ್ ಮರಾಠಿ ಅಡಿಕೆಗುಳಿ, ಮಧುಕರ ಶೇಟ್ ಉಪ್ಪೋಣಿ, ತಿಮ್ಮಪ್ಪ ಗೌಡ ಮಹಿಮೆ, ಮಂಜುನಾಥ ನಾಯ್ಕ ಗುಡ್ಡೇಕೇರಿ, ಸುಬ್ರಾಯ ಮೇಸ್ತ ಪ್ರಭಾತ ನಗರ, ರಮೇಶ್ ನಾಯ್ಕ ಸಾಲ್ಕೋಡ, ಮುಜಾಸ್ ಇರಂದರ್ ಸಂಶಿ ಮುಂತಾದವರು ಅರಣ್ಯ ಸಿಬ್ಬಂದಿಗಳ ವಿರುದ್ಧ ಸಭೆಯಲ್ಲಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

    300x250 AD

    ನಗರ ಅಧ್ಯಕ್ಷ ಸುರೇಶ್ ಮೇಸ್ತ ಹಾಗೂ ಜಿಲ್ಲಾ ಸಂಚಾಲಕ ಮಾಭ್ಲೆಶ್ವರ ನಾಯ್ಕ ಬೇಡ್ಕಣಿ ಪ್ರಾಸ್ತಾವಿಕ ಮಾತನಾಡಿದರು. ಸಭೆಯನ್ನು ಉದ್ದೇಶಿಸಿ ಸುರೇಶ್ ನಾಯ್ಕ ನಗರಬಸ್ತಿಕೇರಿ, ಕೇಶವ ನಾಯ್ಕ ಮಾಗೋಡ, ಮಂಜುನಾಥ ಗೌಡ ಕನ್ನಡ ರಕ್ಷಣಾ ವೇದಿಕೆ ಅಧ್ಯಕ್ಷ ಅವರು ಮಾತನಾಡಿದರು. ರಾಮ ಮರಾಠಿ, ವಿನೋದ ನಾಯ್ಕ ಯಲಕೊಟಗಿ, ದಾವೂದ್ ಸಾಬ್, ರಜಾಕ್, ಗಿರಿಶ್ ಚಿತ್ತಾರ ಮುಂತಾದವರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಅನಂತ ನಾಯ್ಕ ಹೆಗ್ಗಾರ್ ವಂದಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top