• Slide
    Slide
    Slide
    previous arrow
    next arrow
  • ಒಬ್ಬರ ಕಪಿಮುಷ್ಟಿಯಿಂದ ಟಿಎಸ್ಎಸ್ ಹೊರಬರಲಿದೆ; ‘ನವ ಸಂಕಲ್ಪ ದಿನ’ದಲ್ಲಿ ವೈದ್ಯರ ಅಭಿಮತ

    300x250 AD

    ಶಿರಸಿ: ಟಿಎಸ್ ಎಸ್ ಆಡಳಿತ ವ್ಯವಸ್ಥೆಗೆ ನಾವು ಸರ್ಜರಿ ಮಾಡಲಿದ್ದೇವೆ. ಯಾರು ಸಂಸ್ಥೆಯನ್ನು ಕಪಿಮುಷ್ಟಿಯಲ್ಲಿ ಹಿಡಿದಿದ್ದಾರೋ ಅದನ್ನು ಸರಿಪಡಿಸುವ ಕಾರ್ಯ ಮಾಡಲಿದ್ದೇವೆ ಎಂದು ಸಂಸ್ಥೆಯ ನೂತನ ಅಧ್ಯಕ್ಷ ಗೋಪಾಲಕೃಷ್ಣ ವೈದ್ಯ ಹೇಳಿದರು.

    ತಾಲೂಕಿನ ಕೊಳಗಿಬೀಸ್ ಮಾರುತಿ ದೇವಾಲಯದಲ್ಲಿ ಶನಿವಾರ ನಡೆದ ನೂತನ ಆಡಳಿತ ಮಂಡಳಿಯಿಂದ ಕಾರ್ಯಕರ್ತರಿಗೆ ಅಭಿನಂದನೆ ಮತ್ತು ನವ ಸಂಕಲ್ಪ ದಿನದಲ್ಲಿ ಅವರು ಮಾತನಾಡಿದರು. ಇಡೀ ಸಂಸ್ಥೆ ಹಾಳು ಮಾಡುವ ಒಬ್ಬ ವ್ಯಕ್ತಿ, ತಾಳಕ್ಕೆ ತಕ್ಕಂತೆ ಕುಣಿಯುವ ಕಾರ್ಯಾಧ್ಯಕ್ಷರಿಂದಾಗಿ ಸಂಸ್ಥೆ ದಾರಿ ತಪ್ಪಿತ್ತು. ರಿಯಲ್ ಎಸ್ಟೇಟ್, ಸುಪರ್ ಮಾರ್ಕೆಟ್ ಬೇಕು. ಹೊಸ ಯೋಜನೆಗಳನ್ನೂ ಜಾರಿಗೆ ತರಬೇಕು. ಇದರ ಜೊತೆ ಹಣಕಾಸಿನ ಬಲ ಇದ್ದಾಗ ಇಂತಹ ಕಾರ್ಯಗಳಾಗಬೇಕು. ಅಮಾಯಕ ರೈತರ ಸಾಲಕ್ಕೆ ಬಡ್ಡಿ, ಚಕ್ರಬಡ್ಢಿ ಬೆಳೆಸಿ ಆ ಹಣವನ್ನು ರಿಯಲ್ ಎಸ್ಟೇಟ್ ಗೆ ಹಾಕುವುದು ಸರಿಯಲ್ಲ. 472 ಕೋಟಿ ಸಾಲ ರೈತರಿಗೆ ನೀಡಿರುವುದಾಗಿ ಹಿಂದಿನವರು ಹೇಳಿಕೊಳ್ಳುತ್ತಿದ್ದು, ಇದರಲ್ಲಿ ಬಹುತೇಕ ಪಾಲು ಇಬ್ಬರಿಗೇ ನೀಡಿದ್ದಾರೆ. ಪ್ರಚಾರದ ಹೆಸರಿನಲ್ಲಿ 51 ಲಕ್ಷ ರೂ. ಖರ್ಚು ಮಾಡಿದ್ದಾರೆ. ಎಲ್ಲ ಲೋಪ ದೋಷಗಳನ್ನೂ ಕೂಲಂಕುಷವಾಗಿ ಪರಿಶೀಲಿಸುತ್ತಿದ್ದೇವೆ ಎಂದರು.

    ನಮ್ಮ ಮುಂದಿನ ಜವಾಬ್ದಾರಿ ಬಹಳ ದೊಡ್ಡದಿದೆ. ಜವಾಬ್ದಾರಿಯ ಅರಿವು, ನಿಭಾಯಿಸುವ ದಾರಿ ನಾವು ಅರಿತಿದ್ದೇವೆ. ಅಭಿಮಾನಿ ಕಾರ್ಯಕರ್ತರು ನಮ್ಮ ಜೊತೆ ಇದ್ದಾರೆ. ಸ್ವಯಂ ಘೋಷಿತ ಪ್ರಧಾನ ವ್ಯವಸ್ಥಾಪಕ ಮತ್ತು ಹಿಂದಿನ ಆಡಳಿತ ಮಂಡಳಿ ಹೊಸ ಹೊಸ ನಿಯಮಗಳ ಮೂಲಕ ನಮಗೆ ತೊಡಕುಂಟುಮಾಡಲು ಯತ್ನಿಸಿದ್ದರು. ಅಭಿಮಾನವಿಟ್ಟು ಸದಸ್ಯರಿ ನಮ್ಮನ್ನು ಆರಿಸಿದ್ದಾರೆ. ಸಾಲ, ಸವಾಲುಗಳು ಸಂಸ್ಥೆಯುಂದಿದೆ. ಆಡಳಿಯ ವ್ಯವಸ್ಥೆಗೆ ಸರ್ಜರಿ ಮಾಡಬೇಕಿದೆ. ಪ್ರಧಾನ ವ್ಯವಸ್ಥಾಪಕರು ಸೌಜನ್ಯಕ್ಕೂ ನಮ್ಮನ್ನು ಅಭಿನಂದಿಸಲು ಬರಲಿಲ್ಲ ಎಂದರು.

    ನಮ್ಮ ವಿರುದ್ಧ ಹಿಂದೆ ಕೆಲಸ ಮಾಡಿರುವವರು ಹೆದರುವ ಅಗತ್ಯ ಇಲ್ಳ. ರಾಜಕೀಯ ದ್ವೇಷ, ಸ್ವಜನ ಪಕ್ಷಪಾತ ಹೊರಗಿಟ್ಟು ಪೂರ್ಣ ಪ್ರಮಾಣದಲ್ಲಿ ನಾವು ಸಂಸ್ಥೆಯ ಅಭಿವೃದ್ಧಿಯಲ್ಲಿ ತೊಡಗಿಸಿಕೊಳ್ಳುತ್ತೇವೆ. ನಮಗೆ ಯಾರದ್ದೇ ಹೆದರಿಕೆ ಇಲ್ಲ. ಇಡೀ ವ್ಯವಸ್ಥೆಯನ್ನು ಸರಿಪಡಿಸುತ್ತೇವೆ ಎಂದರು.

    300x250 AD

    ಉಪಾಧ್ಯಕ್ಷ ಎಂ.ಎನ್. ಭಟ್ ತೋಟಿಮನೆ ಮಾತನಾಡಿ, ಈ ಬಾರಿ ಬದಲಾವಣೆ ಆಗಬೇಕು ಎಂಬ ಹಂತಕ್ಕೆ ಜನ ಬಂದಿದ್ದರು. ದೈವಿ ಪ್ರೇರಣೆಯೂ ಗೆಲುವಿಕೆ ಕಾರಣವಾಗಿದೆ. ಇದು ಟಿಎಸ್ ಎಸ್ ಸದಸ್ಯರ ಗೆಲುವು. ಟಿಎಸ್ ಎಸ್ ಗೆ ಪ್ರಾಥಮಿಕ ಸಹಕಾರಿ ಸಂಘಗಳು ಬೆನ್ನೆಲುಬು ಎಂದರು.

    ನಿರ್ದೇಶಕರಾದ ಗಣಪತಿ ಕೊಪ್ಪಲತೋಟ ,ಪುರುಷೋತ್ತಮ ಹೆಗಡೆ ಕಳಲೆಮಕ್ಕಿ, ವಸಂತ ಹೆಗಡೆ ಶಿರೆಕುಳಿ, ದತ್ತಗುರು ಹೆಗಡೆ ಕಡವೆ, ರವೀಂದ್ರ ಹೆಗಡೆ ಹೀರೇಕೈ, ರವೀ ಹೆಗಡೆ ಹಳದೋಟ, ದೇವೇಂದ್ರ ನಾಯ್ಕ, ಕೃಷ್ಣ ಹೆಗಡೆ, ವೀರೇಂದ್ರ ಗೌಡ, ನಿರ್ಮಲಾ ಭಟ್ಟ, ವಸುಮತಿ ಭಟ್ಟ, ಸಂತೋಷ ಭಟ್ಟ ಹಲವಳ್ಳಿ ಇತರರು ಇದ್ದರು. ವಿ.ಆರ್.ಭಟ್ಟ ತೊಣ್ಣೆಮನೆ ಸ್ವಾಗತಿಸಿದರು. ಶ್ರೀನಿವಾಸ ಭಾಗವತ್ ನಿರ್ವಹಿಸಿದರು.ದೇವಸ್ಥಾನದ ಅಧ್ಯಕ್ಷ ಶ್ರೀಧರ ಹೆಗಡೆ ಇಳ್ಳುಮನೆ ಅಧ್ಯಕ್ಷತೆ ವಹಿಸಿದ್ದರು. ಇದೇ ವೇಳೆ ಸದಸ್ಯರು, ಕಾರ್ಯಕರ್ತರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    Share This
    300x250 AD
    300x250 AD
    300x250 AD
    Leaderboard Ad
    Back to top