• Slide
    Slide
    Slide
    previous arrow
    next arrow
  • ಸೆ.12ರವರೆಗೂ ವಿದ್ಯುತ್ ವ್ಯತ್ಯಯ

    300x250 AD

    ಕಾರವಾರ: ತಾಲೂಕಿನ ಶೇಕಡಾ 70 ಭಾಗಕ್ಕೆ ವಿದ್ಯುತ್ ಪೂರೈಸುವ 33/11 ಕೆ.ವಿ ಕೋಣೆ ಉಪಕೇಂದ್ರದಲ್ಲಿ ಹಾಲಿ ಇರುವ 5 ಎಂವಿಎಯ 2 ಶಕ್ತಿ ಪರಿವರ್ತಕಗಳನ್ನು ಬದಲಿಸಿ 8 ಎಂವಿಎ ಶಕ್ತಿ ಪರಿವರ್ತಕಗಳನ್ನು ಅಳವಡಿಸುವ ಕೆಲಸವನ್ನು ಸೆ.2ರಿಂದ ಕೈಗೆತ್ತಿಕೊಳ್ಳಲಾಗಿದ್ದು, ಇದರಿಂದಾಗಿ ಸೆ.12ರವರೆಗೂ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.

    ನಗರ ಪ್ರದೇಶ ಮತ್ತು ಬಿಣಗಾ, ಅಮದಳ್ಳಿ, ಸದಾಶಿವಗಡ, ಮಾಜಾಳಿ ಭಾಗಗಳಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಕಾಮಗಾರಿ ನಡೆಯುವ ಸಂದರ್ಭದಲ್ಲಿ ಅನಿಯಮಿತ ವಿದ್ಯುತ್ ವ್ಯತ್ಯಯ ಉಂಟಾದಾಗ ಸಾರ್ವಜನಿಕರು ಹೆಸ್ಕಾಂನೊoದಿಗೆ ಸಹಕರಿಸುವಂತೆ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಪ್ರಕಟಣೆಯಲ್ಲಿ ಕೋರಿದ್ದಾರೆ.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top