Slide
Slide
Slide
previous arrow
next arrow

ಕಲೆಗಳು ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಧನ: ಮುಕ್ತಾ ಶಂಕರ

300x250 AD

ಯಲ್ಲಾಪುರ: ಗ್ರಾಮೀಣ ಜನರ ಬದುಕು ಆತಂಕ್ಕೊಳಗಾಗುತ್ತಿದೆ. ಯುವಜನಾಂಗ ಅಧಿಕ ಸಂಖ್ಯೆಯಲ್ಲಿ ಪಟ್ಟಣಕ್ಕೆ ವಲಸೆ ಹೋಗುತ್ತಿದ್ದಾರೆ. ಯಕ್ಷಗಾನ, ಸಂಗೀತ, ಸಾಹಿತ್ಯ ಮುಂತಾದ ಕಲೆಗಳು ನಮ್ಮ ಸಂಸ್ಕೃತಿಯನ್ನು ಪ್ರತಿಬಿಂಬಿಸುವ ಸಾಧನವಾಗಿದೆ ಎಂದು ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲಾ ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಹೇಳಿದರು.
ಅವರು ಪಟ್ಟಣದ ಶಕ್ತಿಗಣಪತಿ ದೇವಸ್ಥಾನದಲ್ಲಿ `ಹವ್ಯಾಸಿ ಯಕ್ಷಗಾನ ಒಕ್ಕೂಟ’ವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಎಲ್ಲ ಕಲೆಗಳಿಗಿಂತ ಯಕ್ಷಗಾನ ಹೆಚ್ಚು ಪ್ರಭಾವಪೂರ್ಣ ಕಲೆಯಾಗಿದ್ದು, ತಾಳಮದ್ದಲೆ ಇನ್ನೂ ಹೆಚ್ಚಿನ ವಿಶೇಷತೆ ಹೊಂದಿದೆ. ನಮ್ಮ ಅಸ್ಮಿತೆಯನ್ನು ಸ್ಪಷ್ಠ ಪಡಿಸುವ ಶ್ರೇಷ್ಟ ಕಲೆಗಳಿವು. ಕನ್ನಡದ ಬಗ್ಗೆ ಮಾತನಾಡುವ ನಾವು, ಕೆಲವು ಸಂದರ್ಭಗಳಲ್ಲಿ ಅನ್ಯ ಭಾಷೆಯ ಶಬ್ದಗಳನ್ನು ಬಳಸಲೇಬೇಕಾದ ಅನಿವಾರ್ಯವಿದೆ. ಆದರೆ ಯಕ್ಷಗಾನದಲ್ಲಿ ಮಾತ್ರ ಪರಿಶುದ್ದ ಕನ್ನಡ ಉಳಿದುಕೊಂಡಿದೆ. ಇಂತಹ ಕನ್ನಡ ಉಳಿಯಬೇಕೆಂದರೆ ಯಕ್ಷಗಾನವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಇಲ್ಲಿನ ನಾರಾಯಣ ಭಾಗ್ವತ ದೇವರಗದ್ದೆ, ನಡುತೋಟದ ಮಂಜು ಹೆಬ್ಬಾರ್ ತಂಡ ಪ್ರಯತ್ನಿಸುತ್ತಿರುವುದು ಆದರ್ಶಪ್ರಾಯವಾದುದು ಎಂದರು.
ವಿದ್ವಾನ್ ವೆಂಕಟರಮಣ ಭಟ್ಟ ಸುಳಗಾರ ಮಾತನಾಡಿ, ಆಸಕ್ತರನ್ನು ಕಲೆಹಾಕಿ ಇಂತಹ ಸಂಘಟನೆಯನ್ನು ಹಿರಿ-ಕಿರಿಯರೊಂದಿಗೆ ಆರಂಭಿಸಿರುವುದು ಸಮಾಜದೃಷ್ಟಿಯಿಂದ ಉತ್ತಮ ಪ್ರಯತ್ನ. ಯಕ್ಷಗಾನ ಪದ್ಯಗಳಲ್ಲಿ ಕನ್ನಡದ ಶಬ್ದ ಮತ್ತುಅದರ ಭಾವನೆಗಳು ಪ್ರತಿಬಿಂಬಿಸುವಷ್ಟು ಪ್ರ‍್ರಭಾವ ಹೊಂದಿದೆ ಎಂದರು.
ಧರ್ಮಸ್ಥಳ ಮೇಳದ ಭಾಗವತ ದಿನೇಶ ಅಬ್ಬಿತೋಟ, ನಾರಾಯಣ ಭಾಗವತ್, ಗಣಪತಿ ಶಿಂಬ್ಳಗಾರ್, ನಾಗರಾಜ ಹೆಗಡೆ, ಮತ್ತಿತರರು ಉಪಸ್ಥಿತರಿದ್ದರು.

ಮೆಚ್ಚುಗೆಗೆ ಪಾತ್ರವಾದ ಶ್ರೀಕೃಷ್ಣ ಸಂಧಾನ’ ತಾಳಮದ್ದಲೆ….

300x250 AD

ಹವ್ಯಾಸಿ ಯಕ್ಷಗಾನ ಒಕ್ಕೂಟ’ದ ಉದ್ಘಾಟನಾ ಸಮಾರಂಭದ ಪ್ರಯುಕ್ತ ಆಯೋಜಿಸಲಾಗಿದ್ದ `ಶ್ರೀಕೃಷ್ಣ ಸಂಧಾನ’ ತಾಳಮದ್ದಲೆ ಕಲಾಸಕ್ತರ ಮೆಚ್ಚುಗೆಗೆ ಪಾತ್ರವಾಯಿತು.
ಹಿಮ್ಮೇಳದಲ್ಲಿ ಭಾಗವತರಾಗಿ ನಾರಾಯಣ ಭಾಗ್ವತ್ ಮತ್ತು ನಾಗೇಂದ್ರ ಶೇಡಿಜಡ್ಡಿ; ಮದ್ದಲೆವಾದಕರಾಗಿ ಗಣಪತಿ ದುರ್ಗದ ಮುಮ್ಮೇಳದ ಕಲಾವಿದರಾಗಿ ವಿದ್ವಾನ್ ವೆಂಕಟರಮಣ ಭಟ್ಟ ಸೂಳಗಾರ (ಕೃಷ್ಣ), ಗಣಪತಿ ಭಾಗ್ವತ್ ಶಿಂಬ್ಳಗಾರ (ಕೌರವ), ನಾಗರಾಜ ಹೆಗಡೆ (ದ್ರೌಪದಿ) ಮತ್ತು ಮಂಜುನಾಥ ಹೆಬ್ಬಾರ (ವಿದುರ) ಉತ್ತಮ ಅರ್ಥಧಾರಿಗಳಾಗಿ ಕಾರ್ಯಕ್ರಮದ ಮೆರುಗನ್ನು ಹೆಚ್ಚಿಸಿದರು.

Share This
300x250 AD
300x250 AD
300x250 AD
Back to top