Slide
Slide
Slide
previous arrow
next arrow

ಕಾಮಕೋಡ ದೇವರಕಾಡಿನಲ್ಲಿ ವನಮಹೋತ್ಸವ 24ಕ್ಕೆ

300x250 AD

ಹೊನ್ನಾವರ: ಕಾಮಕೋಡ ಶ್ರೀದುರ್ಗಮ್ಮ ದೇವಸ್ಥಾನ, ಗ್ರಾಮ ಪಂಚಾಯತ ಚಿಕ್ಕನಕೋಡ, ಅರಣ್ಯ ಇಲಾಖೆ ಹಾಗೂ ಕಾಮಕೋಡ ಪರಿಸರ ಕೂಟಗಳ ಸಂಯುಕ್ತ ಆಶ್ರಯದಲ್ಲಿ ‘ವನಮಹೋತ್ಸವ’ ಕಾರ್ಯಕ್ರಮ ಹೆರಾವಲಿ ಗ್ರಾಮದ ಹಾಚಲಮಕ್ಕಿಯ ಕಾಮಕೋಡ ದೇವರಕಾಡಿನಲ್ಲಿ ಆ.೨೪ರಂದು ಬೆಳಿಗ್ಗೆ ೧೧ಕ್ಕೆ ನಡೆಯಲಿದೆ.
ಕೆನರಾ ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ವಸಂತರೆಡ್ಡಿ ಕೆ.ವಿ., ಹೊನ್ನಾವರ ಅರಣ್ಯ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವಿಶಂಕರ ಸಿ., ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಚಿಕ್ಕನಕೋಡ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಮಾಲಿನಿ ಜೈನ್, ಸದಸ್ಯರಾದ ನಾಗೇಶ ನಾಯ್ಕ, ಮಾದೇವಿ ಹಳ್ಳೇರ, ಪಂಚಾಯತ ಅಭಿವೃದ್ಧಿ ಅಧಿಕಾರಿ ಗೀತಾ ಹೆಗಡೆ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಚಿಕ್ಕನಕೋಡ ಗ್ರಾಮ ಪಂಚಾಯತ ಅಧ್ಯಕ್ಷೆ ಶ್ಯಾಮಲಾ ಜಗದೀಶ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.

300x250 AD
Share This
300x250 AD
300x250 AD
300x250 AD
Back to top