• Slide
    Slide
    Slide
    previous arrow
    next arrow
  • ಶೀಘ್ರದಲ್ಲೇ ರಾಜ್ಯ ಮಟ್ಟದ ನಾಮಧಾರಿ ಅಧಿಕಾರಿ- ನೌಕರರ ಸಮಾವೇಶ: ಶ್ರೀನಿವಾಸ್

    300x250 AD

    ಗೋಕರ್ಣ: ಶೀಘ್ರದಲ್ಲೇ ರಾಜ್ಯಮಟ್ಟದ ಈಡಿಗ (ನಾಮಧಾರಿ) ಅಧಿಕಾರಿ ನೌಕರರ ಸಮಾವೇಶ ಹಮ್ಮಿಕೊಳ್ಳಲಾಗುವುದು ಎಂದು ಕರ್ನಾಟಕ ರಾಜ್ಯ ಈಡಿಗ ನೌಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀನಿವಾಸ್ ಎಂ. ಹೇಳಿದರು.
    ಬೆಂಗಳೂರು ಮಹಾನಗರದ ಶೇಷಾದ್ರಿಪುರಂ ಆರ್ಯ ಈಡಿಗ ಸಭಾಂಗಣದಲ್ಲಿ ನಡೆದ ರಾಜ್ಯ ಈಡಿಗ, ಬಿಲ್ಲವ, ನಾಮಧಾರಿ ನೌಕರರ ವೆಬ್‌ಸೈಟ್ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ರಾಜ್ಯದಲ್ಲಿ ಹಿಂದುಳಿದ ಈಡಿಗ ಸಮುದಾಯದಲ್ಲಿ ಸಾಕಷ್ಟು ನೌಕರರಿದ್ದು, ಸಂಘಟನಾತ್ಮಕವಾಗಿ ನಾವಿನ್ನು ಹೆಚ್ಚು ದೂರ ಸಾಗಬೇಕಾಗಿದೆ ಎಂದರು.
    ನಾನು ಅಧ್ಯಕ್ಷನಾದ ನಂತರ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಪ್ರವಾಸ ಮಾಡಿದ್ದೇನೆ. ಈಗಾಗಲೇ ಸುಮಾರು ೩೦೦೦ ನೌಕರರು ಆಜೀವ ಸದಸ್ಯತ್ವ ಪಡೆದುಕೊಂಡಿದ್ದು, ರಾಜ್ಯದಲ್ಲಿರುವ ಅಂದಾಜು ೨೦,೦೦೦ ನೌಕರರನ್ನು ಒಂದೇ ವೇದಿಕೆಯಲ್ಲಿ ತರಬೇಕೆಂಬುದು ನನ್ನ ಮಹತ್ವಾಕಾಂಕ್ಷೆ ಆಗಿದೆ ಎಂದು ವಿವರಿಸಿದರು.
    ಕಾರ್ಯಕ್ರಮದ ವೆಬ್‌ಸೈಟ್ ಲೋಕಾರ್ಪಣೆಗೊಳಿಸಿದ ಕಾಲೇಜು ಶಿಕ್ಷಣ ಆಯುಕ್ತ ಡಾ. ಜಗದೀಶ ಮಾತನಾಡಿ, ಸಮುದಾಯದ ಯುವಕರು ಮೊಬೈಲ್, ಸೋಶಿಯಲ್ ಮೀಡಿಯಾ ದಾಸರಾಗದೆ ನಿರ್ದಿಷ್ಟ ಗುರಿಯತ್ತ ಗಮನ ಹರಿಸಿ ಜೀವನ ರೂಪಿಸಿಕೊಳ್ಳಬೇಕಾದ ಅವಶ್ಯಕತೆ ಇದೆ ಎಂದರು.
    ನಗರಾಭಿವೃದ್ಧಿ ಇಲಾಖೆ ಉಪಕಾರ್ಯದರ್ಶಿ ಎಚ್.ಕೆ. ಕೃಷ್ಣಮೂರ್ತಿ, ಮಂಗಳೂರು ಪೊಲೀಸ್ ಸಹಾಯಕ ಪೊಲೀಸ್ ಆಯುಕ್ತ ಮಹೇಶ್ ಕುಮಾರ್ ಮಾತನಾಡಿದರು. ಇದೇ ಸಂದರ್ಭದಲ್ಲಿ ದೇವರಾಜ್ ಅರಸು ಪ್ರಶಸ್ತಿ ಪಡೆದ ಹಿರಿಯ ಸಮಾಜವಾದಿ ರಾಜಕಾರಣಿ, ಮಾಜಿ ಸಚಿವರು, ವಿಧಾನಸಭಾ ಸ್ಪೀಕರ್ ಆಗಿ ಕಾರ್ಯನಿರ್ವಹಿಸಿದ ಕಾಗೋಡು ತಿಮ್ಮಪ್ಪ ಅವರನ್ನು ಕೇಂದ್ರ ಸಂಘ ಹಾಗೂ ನೌಕರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
    ಕಾರ್ಯಕ್ರಮದಲ್ಲಿ ಖ್ಯಾತ ಉದ್ಯಮಿ ಸಮಾಜ ಸೇವಕ ಜೆ.ಪಿ. ಸುಧಾಕರ್, ಎಸಿಪಿ ಪರಮೇಶ್ವರ, ಡಿಎಎಫ್‌ಓ ರಾಮಕೃಷ್ಣ, ಶ್ರೀನಿವಾಸ ಅವರನ್ನು ಸನ್ಮಾನಿಸಲಾಯಿತು. ಕರ್ನಾಟಕ ಪ್ರದೇಶ ಆರ್ಯ ಈಡಿಗ ಸಂಘದ ಅಧ್ಯಕ್ಷ ಡಾ. ಎಂ. ತಿಮ್ಮೇಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಮೋಹನ ನಾಯ್ಕ ಸ್ವಾಗತಿಸಿದರು. ಮಧುಸೂದನ ನಿರ್ವಹಿಸಿದರು. ಉದಯ ಕುಮಾರ ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top