ಕಾರವಾರ: ನಗರದಿಂದ ಬಿಣಗಾ ಸಂಪರ್ಕಿಸುವ ಟನಲ್ ಬಳಿ ಮಣ್ಣು ಕುಸಿದು ವಾಹನಗಳ ಸಂಚಾರಕ್ಕೆ ಅಡೆತಡೆ ಉಂಟಾಯಿತು.
ಧಾರಾಕಾರ ಮಳೆಯಿಂದಾಗಿ ಮಣ್ಣು ಸಡಿಲಗೊಂಡು ಕುಸಿದಿದ್ದು, ಇದರಿಂದಾಗಿ ಹೆದ್ದಾರಿಯಲ್ಲಿ ವಾಹನ ಸಂಚಾರ ಅಸ್ತವ್ಯಸ್ತವಾಯಿತು. ಟನಲ್‌ನ ಮುಂಬದಿ ಐಆರ್‌ಬಿ ಬ್ಯಾರಿಕೇಡ್ ಅಳವಡಿಸಿದ್ದು, ವಾಹನ ಸವಾರರಿಗೆ ತೊಂದರೆಯಾಗದ0ತೆ ಮುನ್ನೆಚ್ಚರಿಕೆ ವಹಿಸಿದೆ. ಅಲ್ಲದೇ ಅರ್ಧ ರಸ್ತೆ ಬಂದ್ ಮಾಡಿ ಹಂತ ಹಂತವಾಗಿ ವಾಹನ ಸಂಚಾರಕ್ಕೆ ಅವಕಾಶ ನೀಡಲಾಗುತ್ತಿದ್ದು, ಜೆಸಿಬಿ ಸಹಾಯದಿಂದ ಗುಡ್ಡದ ಮೇಲಿನ ಮಣ್ಣನ್ನು ತೆರವು ಮಾಡುವ ಕಾರ್ಯ ನಡೆಯುತ್ತಿದೆ. ಘಟನೆಯಲ್ಲಿ ಅದೃಷ್ಟವಶಾತ್ ಯಾವುದೇ ವಾಹನ ಸವಾರರಿಗೆ ತೊಂದರೆಯಾಗಿಲ್ಲ.
ಹೆದ್ದಾರಿ ಟನಲ್ ಬಳಿ ಕುಸಿದ ಮಣ್ಣು: ವಾಹನಗಳ ಸಂಚಾರಕ್ಕೆ ಅಡೆತಡೆ
