Slide
Slide
Slide
previous arrow
next arrow

ಅಕ್ರಮವಾಗಿ ಹೋರಿಗಳ ಸಾಗಾಟ; ಮೂವರು ವಶಕ್ಕೆ

300x250 AD

ಸಿದ್ದಾಪುರ: ತಾಲೂಕಿನ ಮಾವಿನಗುಂಡಿ ಚೆಕ್‌ಪೋಸ್ಟ್ನಲ್ಲಿ ಅಕ್ರಮವಾಗಿ ಹೋರಿಗಳನ್ನು ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಕೊಂಡು ಸಾಗಾಟ ಮಾಡುತ್ತಿದ್ದವರನ್ನು ಪೊಲೀಸರು ಬಂಧಿಸಿದ್ದಾರೆ.

ಶಿಕಾರಿಪುರ ತಾಳಗುಂದದ ಮಾರುತಿ ವಡಕನ್ನವರಮನಿ, ಹಳ್ಳೂರಕೇರಿಯ ಜಿಯಾವುಲ್ಲಾ ಭಾಷಾ ಸಾಬ್ ಕಾಳಗುಂದ, ಪೃಥ್ವಿರಾಜ ಸಹದೇವಪ್ಪ ವಡಕನ್ನವರಮನಿ ಬಂಧಿತರು. ಕಪ್ಪು ಬಣ್ಣದ ಎರಡು ಹೋರಿಗಳನ್ನು ಮಹೇಂದ್ರ & ಮಹೇಂದ್ರ ವಾಹನದಲ್ಲಿ ಶಿರಾಳಕೊಪ್ಪದಿಂದ ಭಟ್ಕಳಕ್ಕೆ ಸಾಗಿಸುತ್ತಿದ್ದರು. ಈ ಹೋರಿಗಳನ್ನು ವಧೆ ಮಾಡಲು ಮಾರಾಟ ಮಾಡುವ ಉದ್ದೇಶದಿಂದ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿಕೊಂಡು ಸಾಗಾಟ ಮಾಡುತ್ತಿದ್ದರೆನ್ನಲಾಗಿದೆ.

300x250 AD

ಈ ಕುರಿತು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಕರ್ನಾಟಕ ಗೋಹತ್ಯೆ ಮತ್ತು ಜಾನುವಾರು ತಡೆಗಟ್ಟುವಿಕೆ ಕಾಯಿದೆ 1964 ಮತ್ತು 112(ಎ) (ಡಿ) (ಇ), ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ 1960 ಹಾಗೂ ಕರ್ನಾಟಕ ಜಾನುವಾರಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಅಧ್ಯಾದೇಶ 2020 ಮತ್ತು 192(ಎ) ಭಾರತೀಯ ಮೋಟಾರು ವಾಹನ ಕಾಯಿದೆ- 1988ರಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಬಗ್ಗೆ ಪಿಎಸ್‌ಐ ಮಹಂತಪ್ಪ ಕುಂಬಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share This
300x250 AD
300x250 AD
300x250 AD
Back to top