Slide
Slide
Slide
previous arrow
next arrow

ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆ: ರಾಜು ರಾಯ್ಕರ್

300x250 AD

ಸಿದ್ದಾಪುರ: ಕ್ರಿಕೆಟ್ ಆಟವು ನಿಯಮಿತವಾಗಿ ವ್ಯಾಯಾಮ ಮಾಡಲು ಮತ್ತು ನಿಮ್ಮ ಜೀವನಶೈಲಿಯನ್ನು ಸುಧಾರಿಸಲು ಸಹಾಯ ಮಾಡುತ್ತದೆ. ಇದರಿಂದ ನಿಮ್ಮ ಶಕ್ತಿಯನ್ನು ಮತ್ತು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ಆರೋಗ್ಯ ಶಾಂತಿ ನೆಮ್ಮದಿಯಿಂದ ಇರಲು ಸಹಕಾರಿಯಾಗಲಿದೆ ಮತ್ತು ಮನಸ್ಸಿನ ಸಕರಾತ್ಮಕ ಸ್ಥಿತಿಯನ್ನು ಕಾಪಾಡಿಕೊಳ್ಳುತ್ತದೆ. ಕ್ರಿಕೆಟ್ ಒಂದು ಮೋಜಿನ ಆಟವಾಗಿದ್ದು, ಜಗತ್ತಿನ ಅತ್ಯಂತ ಜನಪ್ರಿಯ ಕ್ರೀಡೆಯಾಗಿದೆ ಎಂದು ರಾಜು ರಾಯ್ಕರ್ ಚೀನಾ ಅಭಿಪ್ರಾಯಪಟ್ಟರು.
ತಾಲೂಕು ಕ್ರೀಡಾಂಗಣದಲ್ಲಿ ಸಿದ್ದಾಪುರ ಸ್ಪೋರ್ಟ್ಸ್ ಅಕಾಡೆಮಿ ಹಾಗೂ ಡಾಲ್ಫಿನ್ ಕ್ರಿಕೆಟ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ನಡೆದ ಕ್ರಿಕೆಟ್ ಬೇಸಿಗೆ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿ, ಮಾನಸಿಕವಾಗಿ ಹಾಗೂ ದೈಹಿಕವಾಗಿ ಮತ್ತು ಆರೋಗ್ಯವಂತರಾಗಲು ಕ್ರಿಕೆಟ್ ಅತ್ಯಂತ ಉತ್ತಮ ಆಟವಾಗಿದೆ. ಇಂದಿನ ಮಕ್ಕಳು ಮೊಬೈಲ್‌ನಲ್ಲಿ ಕಾಲ ಕಳೆಯುವ ಬದಲು ಇಂತಹ ಕ್ರಿಕೆಟ್ ಆಡುವುದು ಸೂಕ್ತ ಎಂದರು.
ಅಕಾಡೆಮಿ ಅಧ್ಯಕ್ಷ ವಿನಾಯಕ್ ಎಸ್.ಶೇಟ್ ಮಾತನಾಡಿ, ಈ ಕ್ರಿಕೆಟ್ ಶಿಬಿರದಿಂದ ಎಲ್ಲಾ ಕ್ರೀಡಾಪಟುಗಳು ತಮ್ಮ ಕ್ರೀಡಾ ಪ್ರತಿಭೆಯನ್ನು ಪ್ರದರ್ಶಿಸಿ ಜಿಲ್ಲಾ, ರಾಜ್ಯ, ರಾಷ್ಟç ಮಟ್ಟದವರೆಗೂ ಬೆಳೆಯಲಿ ಎಂದು ಶುಭ ಹಾರೈಸಿದರು.
ರಾಜ್ಯ ಮಟ್ಟದ ಕ್ರಿಕೆಟ್ ತರಬೇತುದಾರ ಅಕಾಡೆಮಿ ನಿರ್ದೇಶಕ ಡೊಮಿನಿಕ್ ಫರ್ನಾಂಡಿಸ್ ಪ್ರಾಸ್ತಾವಿಕ ಮಾತನಾಡಿ, ಈಗಾಗಲೇ 34 ದಿನದ ತರಬೇತಿ ಶಿಬಿರ ನೀಡಿದ್ದು, ಇನ್ನುಮುಂದೆಯೂ ಸಹ ಕ್ರಿಕೆಟ್ ಆಟದ ತರಬೇತಿಯನ್ನು ಮುಂದುವರಿಸಲಾಗುವುದು. ಆಟದ ಜೊತೆಗೆ ದೈಹಿಕ ವ್ಯಾಯಾಮದ ತರಬೇತಿ ನೀಡಲಾಗಿದೆ ಎಂದರು.
ಈ ಸಂದರ್ಭದಲ್ಲಿ ಕಳೆದ 15 ವರ್ಷದಿಂದ ಚೀನಾದಲ್ಲಿ ಯೋಗ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿರುವ ಸೊರಬದ ಜಡೆ ಗ್ರಾಮದ ರಾಜು ರಾಯ್ಕರ್‌ರವರನ್ನು ವಿಶೇಷವಾಗಿ ಆಮಂತ್ರಿಸಿ, ಪುಷ್ಪಗುಚ್ಚ ನೀಡಿ ಸ್ವಾಗತಿಸಿ ಗೌರವಿಸಲಾಯಿತು. ಶಿಬಿರದ ಎಲ್ಲ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ನೀಡಿ ಗೌರವಿಸಲಾಯಿತು. ಶಿಬಿರದ ಕುರಿತು ನಾಗೇಶ್ ಫೈ ಬಿಳಗಿ, ಹರ್ಷ ಭಟ್ ತಮ್ಮ ಅನಿಸಿಕೆ ವ್ಯಕ್ತಪಡಿಸಿದರು. ಕಾರ್ಯಕ್ರಮದಲ್ಲಿ ಅಕಾಡೆಮಿ ನಿರ್ದೇಶಕ ಪ್ರಶಾಂತ ಶೇಟ್, ಸಂತೋಷ್ ನೇತಲ್ಕರ್ ಕಾರವಾರ, ರಾಘವೇಂದ್ರ ಕೆ.ರೇವಣಕರ್, ಸಂಕೇತ ಅಂಬಿಗ, ಆದಿತ್ಯ ನಾಯಕ್ ಉಪಸ್ಥಿತರಿದ್ದರು. ಡಾಲ್ಫಿನ್ ಕ್ರಿಕೆಟ್ ಸಂಸ್ಥೆಯ ನಿರ್ದೇಶಕ ರಘುವೀರ್ ನಾಯಕ್ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.

300x250 AD
Share This
300x250 AD
300x250 AD
300x250 AD
Back to top