• Slide
    Slide
    Slide
    previous arrow
    next arrow
  • ಬರೆದಂತೆ ಬದುಕಿದ ಪ್ರೊ.ಜಿ.ಎಚ್.ನಾಯಕ: ಆರ್.ಕೆ.ಹೊನ್ನೆಗುಂಡಿ

    300x250 AD

    ಸಿದ್ದಾಪುರ: ಬರೆಯುವವರು ಬಹಳ ಜನ.ಆದರೆ ಬರೆದಂತೆ ಬದುಕು ಸಾಗಿಸುವವರು ತೀರ ವಿರಳ. ಎಂತಹ ಪರಿಸ್ಥಿತಿಯಲ್ಲೂ ರಾಜಿ ಮಾಡಿಕೊಳ್ಳದೇ ಬರೆದಂತೆ ಬದುಕಿದವರು ಪ್ರೊ.ಜಿ.ಎಚ್.ನಾಯಕರಾಗಿದ್ದರು ಎಂದು ತಾಲೂಕಿನ 6ನೆಯ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದ ಆರ್.ಕೆ.ಹೊನ್ನೆಗುಂಡಿ ನುಡಿದರು.
    ಕಳೆದ ಶುಕ್ರವಾರ ನಿಧನರಾದ ಪ್ರೊ.ಜಿ.ಎಚ್.ನಾಯಕ ಅವರಿಗೆ ಪಟ್ಟಣದ ತಾ.ಪಂ. ಆವರಣದ ಕಸಾಪ ಕಚೇರಿಯಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಶ್ರದ್ಧಾಂಜಲಿ ಸಲ್ಲಿಸಿ ಮಾತನಾಡಿದರು.
    ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿವೃತ್ತ ಶಿಕ್ಷಕರಾದ ತಮ್ಮಣ್ಣ ಬೀಗಾರ, ಜಿ.ಜಿ.ಹೆಗಡೆ ಬಾಳಗೋಡ, ಶಿವಾನಂದ ಹೊನ್ನೆಗುಂಡಿ, ಪ್ರಾಂಶುಪಾಲ ಎಮ್.ಕೆ.ನಾಯ್ಕ ಹೊಸಳ್ಳಿ, ತಾ.ಪಂ. ವ್ಯವಸ್ಥಾಪಕ ನಾಗರಾಜ ಜೋಕನಾಳ, ಕಮಲಾಕರ ಭಂಡಾರಿ, ಪ್ರಶಾಂತ ಶೇಟ್ ಮುಂತಾದವರು ನುಡಿನಮನ ಸಲ್ಲಿಸಿದರು.
    ಜಿ.ಎಚ್.ನಾಯಕ ಅವರ ವಿದ್ಯಾರ್ಥಿ ಚಂದ್ರಶೇಖರ ಕುಂಬ್ರಿಗದ್ದೆ ಮಾತನಾಡಿ, ಜಿ.ಎಚ್.ನಾಯಕರ ನೇರ, ನಿಷ್ಠುರವಾದಗಳಿಂದ ಅವರಿಗೆ ಅನೇಕ ದೊಡ್ಡ ದೊಡ್ಡ ಅವಕಾಶಗಳು ಕೈತಪ್ಪಿದವು. ಯಾವುದನ್ನೂ ಬೇಡಿ ಪಡೆಯುವುದು ಅವರಿಗೆ ಇಷ್ಟವಿರಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.
    ಕಸಾಪ ತಾಲೂಕು ಅಧ್ಯಕ್ಷ ಗೋಪಾಲ ನಾಯ್ಕ ಭಾಶಿ ಅಧ್ಯಕ್ಷತೆ ವಹಿಸಿ ಜಿ.ಎಚ್.ನಾಯಕರಂತಹ ವಿಮರ್ಶಕರು ತೀರ ವಿರಳ ಅವರ ಆತ್ಮಕ್ಕೆ ಚಿರಶಾಂತಿ ದೊರೆಯಲಿ ಎಂದು ಪ್ರಾರ್ಥಿಸಿದರು. ಕಸಾಪ ಕಾರ್ಯದರ್ಶಿ ಅಣ್ಣಪ್ಪ ನಾಯ್ಕ ಸ್ವಾಗತಿಸಿದರು. ಕೋಶಾಧ್ಯಕ್ಷ ಪಿ.ಬಿ.ಹೊಸೂರು ವಂದಿಸಿದರು.

    300x250 AD
    Share This
    300x250 AD
    300x250 AD
    300x250 AD
    Leaderboard Ad
    Back to top