Slide
Slide
Slide
previous arrow
next arrow

ಮತದಾರರಿಗೂ ತಲೆ ಇದೆ ಎನ್ನುವುದನ್ನು ಪಕ್ಷಗಳು ಅರಿತಿರಬೇಕು: ಶಾಂತರಾಮ ಸಿದ್ದಿ

300x250 AD

ಹೊನ್ನಾವರ: ಮತದಾರರಿಗೆ ಕೇವಲ ಹೊಟ್ಟೆ, ಬಾಯಿ ಇದೆ ಎಂದು ಯೋಚಿಸುವುದು ಬಿಟ್ಟು, ಅವರಿಗೂ ಒಂದು ತಲೆ ಇದೆ ಎನ್ನುವುದನ್ನು ರಾಜಕೀಯ ಪಕ್ಷಗಳು ಯೋಚಿಸಬೇಕಿದೆ ಎಂದು ವಿಧಾನ ಪರಿಷತ್ ಸದಸ್ಯ ಶಾಂತರಾಮ ಸಿದ್ದಿ ಹೇಳಿದರು.

ತಾಲೂಕಿನ ಮಂಕಿ ಆಸ್ಪತ್ರೆ ಸಮೀಪದ ಗುರುಮಠದ ಮೈದಾನದಲ್ಲಿ ನಡೆದ ಜಿಲ್ಲಾ ಮಟ್ಟದ ಯುವ ಸಮಾವೇಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕೆಲವು ಪಕ್ಷಗಳು ಜನರಿಗೆ ಹೊಟ್ಟೆ ತುಂಬಿಸುವುದೇ ದೊಡ್ಡ ಸಾಧನೆ ಎಂದುಕೊಂಡಿದ್ದಾರೆ. ಉಚಿತವಾಗಿ ಕೊಡುವುದೇ ರಾಜಕೀಯ ಪಕ್ಷಗಳಿಗೆ ದೊಡ್ಡ ಗುರಿಯಾಗಬಾರದು. ಯುವಕರಿಗೆ ಶಿಕ್ಷಣ ಉದ್ಯೋಗ ಕೊಡಲು ಮುಂದಾಗಬೇಕು. ಜನಪ್ರತಿನಿಧಿಗಳು ಅಭಿವೃದ್ಧಿ ಜೊತೆ ಬೌದ್ಧಿಕ ಅಭಿವೃದ್ಧಿ ಚಿಂತನೆ ನಡೆಸಿದರೆ ಮಾತ್ರ ಸಮಾಜದ ಉನ್ನತಿಯಾಗಲಿದೆ ಎಂದರು.

300x250 AD

ಶಾಸಕ ಸುನೀಲ ನಾಯ್ಕ ಮಾತನಾಡಿ, ಭಟ್ಕಳ ಭಾರತೀಯ ಜನತಾ ಪಾರ್ಟಿ ಭದ್ರಕೋಟೆಯಾಗಿದೆ. ಕಾರ್ಯಕರ್ತರ ಮಧ್ಯೆ ನಿಂತು ಶಾಸಕನಾಗಿ ಐದು ವರ್ಷಗಳ ಕಾಲ ಆಡಳಿತ ನಡೆಸಿದ್ದೇನೆ. ಅಧಿಕಾರದ ದರ್ಪ ತೋರಿಲ್ಲ. ಶಾಸಕ ಪದವಿ ಶಾಶ್ವತವಲ್ಲ, ಜನರ ಪ್ರೀತಿ ವಿಶ್ವಾಸ ಶಾಶ್ಚತವಾಗಿದೆ. ಕ್ಷೇತ್ರದ ಜನತೆಗೆ ನೆಮ್ಮದಿ ಬದುಕನ್ನು ನೀಡಬೇಕಾದರೆ ನಿರಂತರವಾಗಿ ಭಟ್ಕಳದಲ್ಲಿ ಬಿಜೆಪಿ ಗೆಲ್ಲಬೇಕಿದೆ. ಭಟ್ಕಳದಲ್ಲಿ ಪುರಸಭೆಗೆ ಉರ್ದು ನಾಮಫಲಕ ಹಾಕುವ ಮಟ್ಟಿಗೆ ಇಲ್ಲಿಯ ಮುಸ್ಲಿಮರು ಹೋಗುತ್ತಾರೆ. ಹಿಂದು ದ್ವಾರ ಮಂಟಪ ಕಟ್ಟಲು ವಿರೋಧ ವ್ಯಕ್ತವಾಗುತ್ತದೆ. ವಿರೋಧ ನಡುವೆಯು ದ್ವಾರ ಮಂಟಪವಾಗಿದೆ. ಟಿಪ್ಪುವಿನ 16 ದ್ವಾರ ಮಂಟಪ ಎಲ್ಲಿದೆ ಎಂದು ಕುಟುಕಿದರು.
ಜಿಲ್ಲಾ ಮಾಧ್ಯಮ ವಕ್ತಾರ ನಾಗರಾಜ ನಾಯಕ ಮಾತನಾಡಿ, ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಕಾಂಗ್ರೇಸ್ ಮಾಡುತ್ತಿದೆ. ಇಂದಿನ ಯುವ ಸಮುದಾಯಕ್ಕೆ ಉದ್ಯೋಗದ ಬಗ್ಗೆ ಭರವಸೆ ನೀಡದೇ ಉಚಿತ ಭಾಗ್ಯದ ಘೋಷಣೆ ಮಾಡುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಕಾರ್ಯವೈಖರಿ ಟೀಕಿಸಿದರು.
ಶಿವಮೊಗ್ಗ ವಿಭಾಗದ ಪ್ರಭಾರಿ ಗಿರೀಶ ಪಾಟೀಲ್, ಪ್ರಸನ್ನ ಕೆರಕೈ ಕೇಂದ್ರ ಸರ್ಕಾರದ ಸಾಧನೆ ವಿವರಿಸಿದರು. ಜಿಲ್ಲಾಧ್ಯಕ್ಷ ವೆಂಕಟೇಶ ನಾಯ್ಕ, ಬಿಜೆಪಿ ಮುಖಂಡರಾದ ಶಿವಮೊಗ್ಗ ವಿಭಾಗದ ಪ್ರಭಾರಿ ಗಿರೀಶ ಪಾಟೀಲ್, ಪಶ್ಚಿಮ ಕಾರ್ಯಪಡೆ ಅಧ್ಯಕ್ಷ ಗೋವಿಂದ ನಾಯ್ಕ, ಎನ್.ಎಸ್.ಹೆಗಡೆ, ಪ್ರಸನ್ನ ಕೆರೆಕೈ, ಅಜಿತ್ ಹೆಗಡೆ, ಚಂದ್ರು ಎಸಳೆ, ಉಷಾ ಹೆಗಡೆ, ಗುರುಪ್ರಸಾದ ಹೆಗಡೆ, ಕಿಶೋರ ಕುಮಾರ, ಎಂ.ಜಿ.ಭಟ್, ನಾಗರಾಜ ನಾಯಕ, ಶಿವಾನಿ ಶಾಂತರಾಮ ನಾಗರಾಜ ನಾಯಕ ತೊರ್ಕೆ, ರಾಜು ಭಂಡಾರಿ ಮತ್ತಿತರರು ಉಪಸ್ಥಿತರಿದ್ದರು. ಯುವಮೋರ್ಚಾ ಜಿಲ್ಲಾಧ್ಯಕ್ಷ ಪ್ರಶಾಂತ ನಾಯಕ ಸ್ವಾಗತಿಸಿದರೆ, ತಾಲೂಕ ಅಧ್ಯಕ್ಷ ಸಚೀನ ಶೇಟ್ ಕಾರ್ಯಕ್ರಮ ನಿರ್ವಹಿಸಿದರು. ಸಭಾ ಕಾರ್ಯಕ್ರಮಕ್ಕೂ ಮುನ್ನ ಇಡಗುಂಜಿ ಕ್ರಾಸ್ ಮೂಲಕ ಮಂಕಿ ಪ.ಪಂ. ವಿವಿಧಡೆ ಸಾವಿರಾರು ಸಂಖ್ಯೆಯಲ್ಲಿ ದ್ವಿಚಕ್ರ ವಾಹನ, ಆಟೋ ಮೂಲಕ ರ‍್ಯಾಲಿ ಜರುಗಿತು.

Share This
300x250 AD
300x250 AD
300x250 AD
Back to top