Slide
Slide
Slide
previous arrow
next arrow

ಬೈಕ್’ಗೆ ಟಿಪ್ಪರ್ ಡಿಕ್ಕಿ: ತಂದೆ-ಮಗಳು ಗಂಭೀರ

300x250 AD

ಕುಮಟಾ : ಟಿಪ್ಪರ್ ಹಾಗೂ ಬೈಕ್ ನಡುವೆ ಅಪಘಾತ ಸಂಭವಿಸಿ ಬೈಕ್ ನಲ್ಲಿದ್ದ ತಂದೆ ಮಗಳು ಇಬ್ಬರೂ ಗಂಭೀರವಾಗಿ ಗಾಯಗೊಡಿರುವ ಘಟನೆ ಕಡೆಕೋಡಿ ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಸಂಭವಿಸಿದೆ.

ಕುಮಟಾ ಕಡೆಯಿಂದ ಕಾಸರಕೋಡ ಕಡೆ ತಂದೆ ಹಾಗೂ ಮಗಳು ಬೈಕ್ ಮೇಲೆ ಮನೆಗೆ ಹೋಗುತ್ತಿದ್ದ ವೇಳೆ ಈ ಅಪಘಾತ ನಡೆದೆ. ಟಿಪ್ಪರ್ ಚಾಲಕ ಕುಮಟಾ ಕಡೆಯಿಂದ ಹೊನ್ನಾವರ ಕಡೆ ಹೋಗಲು ಅತೀವೇಗ ಹಾಗೂ ಅಜಾಗರೂಕತೆಯಿಂದ ಟಿಪ್ಪರ್ ಚಲಾಯಿಸಿಕೊಂಡು ಹೋಗುತ್ತಿದ್ದ ಎನ್ನಲಾಗಿದೆ. ಕಡೆಕೋಡಿ ಸಮೀಪ ಹೋಗುತ್ತಿದ್ದಂತೆ ಟಿಪ್ಪರ್ ಚಾಲಕ ಯಾವುದೇ ಸಿಗ್ನಲ್ ಇಲ್ಲದೆ ಕಡೆಕೋಡಿ ಸಮೀಪದ ಏಕಾಏಕಿಯಾಗಿ ಒಂದು ಕಡೆಯಿಂದ ಇನ್ನೊಂದು ಕಡೆಗೆ ಟಿಪ್ಪರ್ ಚಲಾಯಿಸಿದ್ದಾನೆ ಎನ್ನಲಾಗಿದೆ.

300x250 AD

ಇದರಿಂದಾಗಿ ಟಿಪ್ಪರ್ ಹಿಂಬದಿಗೆ ಇದ್ದ ಬೈಕ್ ಸವಾರನಿಗೆ ಟಿಪ್ಪರ್ ಬೈಕ್ ಗೆ ಡಿಕ್ಕಿಯಾಗಿದ್ದು, ಬೈಕ್ ಸವಾರ ಹಾಗೂ ಆತನ ಮಗಳಿಗೆ ಗಂಭೀರವಾಗದ ಗಾಯವಾಗಿದೆ. ಗಾಯಗೊಂಡವನ್ನ ತಕ್ಷಣ ಕುಮಟ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನೂ ಅಪಘಾತಕ್ಕೆ ಕಾರಣವಾಗಿರುವ ಟಿಪ್ಪರ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ.

Share This
300x250 AD
300x250 AD
300x250 AD
Back to top