ಸಿದ್ದಾಪುರ: ತಾಲೂಕಿನ ಹೂವಿನಮನೆ ಹಾಲು ಉತ್ಪಾದಕರ ಸಹಕಾರಿ ಸಂಘದ ಸದಸ್ಯ ಚಂದ್ರಹಾಸ ವಿ.ಹಸ್ಲರ್ ಅವರ ಆಕಳು ಅಕಾಲಿಕವಾಗಿ ಸಾವನ್ನಪ್ಪಿದ್ದರಿಂದ ಅದರ ವಿಮಾ ಚೆಕ್‌ನ್ನು ಧಾರವಾಡ ಹಾಲು ಒಕ್ಕೂಟದ ನಿರ್ದೇಶಕ ಪರಶುರಾಮ ವಿ.ನಾಯ್ಕ ಬೇಡ್ಕಣಿ ಬುಧವಾರ ವಿತರಿಸಿದರು. ಒಕ್ಕೂಟದ ಸಹಾಯಕ ವ್ಯವಸ್ಥಾಪಕ ಡಾ.ವಿನಾಯಕ ಬಿರಾದಾರ, ವಿಸ್ತರಣಾಧಿಕಾರಿ ಚಂದನ್ ನಾಯ್ಕ, ಸಂಘದ ಕಾರ್ಯದರ್ಶಿ ಸತೀಶ ಹೆಗಡೆ ಆಲ್ಮನೆ ಇತರರಿದ್ದರು.